Sunday, September 8, 2024
Google search engine
Homeಅಂಕಣಗಳುಲೇಖನಗಳುಬದುಕ ಕಲಿಸುವ ರಂಗಭೂಮಿ - ರಂಗಕರ್ಮಿಗಳಿಗೊಂದು ಸಲಾಂ

ಬದುಕ ಕಲಿಸುವ ರಂಗಭೂಮಿ – ರಂಗಕರ್ಮಿಗಳಿಗೊಂದು ಸಲಾಂ

ಲೇಖನ : ಸೌಮ್ಯ ಗಿರೀಶ್

ರಂಗಭೂಮಿ ಎಂಬುದು ಇಂದು ಸವಿಸ್ತಾರವಾಗಿ ಹರಡಿ, ತನ್ನ ಗಟ್ಟಿ ಬೇರುಗಳ ಜೊತೆಗೆ ರೆಂಬೆ ಕೊಂಬೆಗಳನ್ನು ಎಲ್ಲೆಡೆ ಪಸರಿಸುತ್ತಿದೆ. ಹಳೆ ಬೇರು ಹೊಸ ಚಿಗುರುಗಳ ಸಂಗಮದಲ್ಲಿ ಹಲವಾರು ಹೊಸ ಆಯಾಮಗಳು ರಂಗಭೂಮಿಯನ್ನು ಮತ್ತಷ್ಟು ಬೆಳವಣಿಗೆಯ ಹಾದಿಯತ್ತ ಕೊಂಡೊಯ್ಯುತ್ತಿದೆ. ಜಾನಪದದ ಜೊತೆ, ಊರ ಸೊಗಡು, ಒಂದಷ್ಟು ಹೊಸ ತಂತ್ರeನವನ್ನು ಅಳವಡಿಸಿಕೊಂಡರೂ ತನ್ನ ಮೂಲ ಸೊಗಡನ್ನು ಕಳೆದುಕೊಳ್ಳದೆ ರಂಗಭೂಮಿಯನ್ನು ಬೆಳೆಸುತ್ತಿವೆ ಹವ್ಯಾಸಿ ರಂಗಭೂಮಿ. ಮಕ್ಕಳ ರಂಗಭೂಮಿಯಿಂದ ಹಿಡಿದು, ಯುವಕರು, ಹಿರಿಯರು ಹೀಗೆ ವಯಸ್ಸಿನ ಬೇಧವಿಲ್ಲದೆ ಎಲ್ಲರನ್ನೂ ಕೈ ಬೀಸಿ ಕರೆಯುವ ರಂಗಕಲೆ, ಕೇವಲ ಬಣ್ಣದ ಜಗತ್ತಲ್ಲ, ಜಗತ್ತನ್ನೇ ಅರಿಯಲು ಇರುವ ಒಂದು ಪಾಠಶಾಲೆ ಎಂದರೆ ಅತಿಶಯೋಕ್ತಿಯಲ್ಲ.

ವಿಶ್ವವೇ ಒಂದು ರಂಗಶಾಲೆ, ನಾವೆಲ್ಲರೂ ವಿವಿಧ ಪಾತ್ರ ಧಾರರು. ಆದರೆ ಬದುಕು ಒಂದು ರಂಗಶಾಲೆಯಾದರೆ ರಂಗಶಾಲೆ ಗಳು ಬದುಕನ್ನು ಕಲಿಸುವ ಸುಂದರ ತಾಣಗಳು. ನಾಟಕಗಳು ಎಂಬುದು ಜನರಲ್ಲಿ ಹಾಸು ಹೊಕ್ಕಾಗಿ ಹರಡಿದ್ದು ಒಂದು ಮನರಂಜನಾ ಮಾಧ್ಯಮವಾಗಿ. ಆದರೆ ಈ ನಾಟಕಗಳು ಹಲವರಿಗೆ ಅನ್ನ, ಆಶ್ರಯ ಒದಗಿಸಿ ಕೊಡು ವುದರ ಜೊತೆಗೆ ಬದು ಕನ್ನೂ ಕಟ್ಟಿಕೊಟ್ಟಿದೆ ಎಂಬುದರಲ್ಲಿ ಅನುಮಾನವಿಲ್ಲ. ಇಂತಹ ರಂಗಭೂಮಿಗೊಂದು ದಿನಾಚರಣೆ, ಅದುವೇ ವಿಶ್ವ ರಂಗ ದಿನಾಚರಣೆ.

ನಾಟಕ ಕಂಪೆನಿಗಳು ಊರಿಂದೂರಿಗೆ ತಿರುಗಿ ಜನರಿಗೆ ನಾಟಕದ ರಸದೌತಣ ಉಣಬಡಿಸು ತ್ತಿದ್ದಕಾಲದಿಂದ ಹಿಡಿದು ಇಂದು ಹಲವಾರು ಹವ್ಯಾಸಿ ರಂಗ ತಂಡ ಗಳವರೆಗೆ ನಾಟಕರಂಗ ಬೆಳೆದು ಬಂದ ಪರಿಯೇ ಅದ್ಭುತ. ನಾಟಕ ಕಲೆ ಎಂಬುದು ನಶಿಸಿಹೋಗದೆ ಇಂದಿನ ಯುವ ಪೀಳಿಗೆ ನಾಟಕರಂಗದತ್ತ ಆಸಕ್ತಿ ತೋರುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. ಸಾಮಾಜಿಕ ಹಾಗೂ ಪೌರಾಣಿಕಕ್ಕೆ ಮಾತ್ರ ಸೀಮಿತ ವಾಗಿದ್ದ ರಂಗಭೂಮಿ ಇಂದು ಹೊಸ ಪ್ರಯೋಗಗಳ, ಹೊಸ ತಂತ್ರಜ್ಞಾನದ ಅಳವಡಿಕೆಯಲ್ಲೂ ಮೇಲುಗೈ ಸಾಧಿಸುತ್ತಿರುವುದು ಹವ್ಯಾಸಿ ರಂಗಭೂಮಿಗಳ ಬೇಡಿಕೆಯನ್ನೂ ಹೆಚ್ಚಿಸಿದೆ.
ಗುಬ್ಬಿ ವೀರಣ್ಣ, ಮಾಸ್ಟರ್ ಹಿರಣ್ಣಯ್ಯ, ರಂಗಾಯಣ ರಘು, ನಟನಾದ ಮಂಡ್ಯ ರಮೇಶ್, ಅಭಿನಯ ತರಂ ಗದ ಪ್ರಕಾಶ್ ರೈ, ನೀನಾಸಂ ಸತೀಶ್, ಹೀಗೆ ರಂಗ ಭೂಮಿಯೇ ತಮ್ಮ ಹೆಗ್ಗುರುತಾ ಗಿಸಿಕೊಂಡ ತಲೆಮಾರು ಗಳು, ಪೀಳಿಗೆಗಳು ಸಾಗು ತ್ತಲೇ ಬರುತ್ತಿರುವುದು ರಂಗಕಲೆ ಜೀವಂತವಿರುವುದಕ್ಕೆ ಸಾಕ್ಷಿ.

ಬದುಕು ಕಲಿಸುವ ರಂಗಭೂಮಿ 

ರಂಗ ಕಲಾವಿದರನ್ನು ರಂಗಕರ್ಮಿಗಳೆಂದು ಸಂಭೋದಿಸುತ್ತಾರೆ, ಕಾರಣ ರಂಗಕ್ರಿಯೆ, ಕರ್ಮ ಎಲ್ಲವನ್ನೂ ಕಲಿಸುತ್ತದೆ. ಅಲ್ಲಿ ಮೇಲು, ಕೀಳು ಎಂಬ ಭಾವನೆ ಇಲ್ಲ. ಎಲ್ಲರೂ ಎಲ್ಲ ಕೆಲಸಕ್ಕೂ ಸದಾ ಸನ್ನದ್ಧರು. ಒಬ್ಬ ನಟನ ಗೈರಿನಲ್ಲಿ ಮತ್ತೊಬ್ಬ ಬಣ್ಣ ಹಚ್ಚಲು ಸದಾ ಸಿದ್ಧರಿದ್ದರೆ, ಪರದೆ ಎಳೆಯುವು ದರಿಂದ ಸೆಟ್ ಹಾಕು ವವರೆಗೆ, ಬೆಳಕಿನಿಂದ ಪ್ರಸಾದನದವರೆಗೆ ಎಲ್ಲರಿಗೂ ಎಲ್ಲಾ ಕೆಲಸವನ್ನೂ ಕಲಿಸುತ್ತಾ ಸಮಾನತೆಯ ಭಾವವನ್ನು ಬಿತ್ತುತ್ತದೆ ರಂಗಭೂಮಿ. ಹೀಗಾಗಿ ಮಕ್ಕಳು ಉತ್ತಮ ಪ್ರಜೆ ಗಳಾಗಿ, ಜೀವನದ ಮೌಲ್ಯ, ಸಮಾನತೆ, ಶ್ರಮ ಜೀವನ ಎಲ್ಲವನ್ನೂ ಕಲಿಯಬೇಕಾದರೆ ಬಾಲ್ಯದಲ್ಲೇ ರಂಗದ ಪರಿಚಯ, ಸಾಂಗತ್ಯ ಅತ್ಯಂತ ಪ್ರಭಾವಿ ಮಾಧ್ಯಮ ಎಂದರೆ ತಪ್ಪಿಲ್ಲ.

ಹವ್ಯಾಸಿ ರಂಗಭೂಮಿ ಶೋಕಿಯಾಗದಿರಲಿ

ನೂರಾರು ಹವ್ಯಾಸಿ ತಂಡಗಳು ಹಗಲು ರಾತ್ರಿ ಎನ್ನದೆ ತಾಲೀಮು ನಡೆಸುತ್ತಾ, ಬಗೆಬಗೆಯ ಪ್ರಯೋಗಗಳನ್ನು ಮಾಡುತ್ತಾ ಬೆಳೆಯುತ್ತಿವೆ. ಇದು ನಿಜಕ್ಕೂ ಸ್ವಾಗತಾರ್ಹ. ಆದರೆ ಒಂದು ಆಘಾತಕಾರಿ ಬೆಳವಣಿಗೆ ಎಂದರೆ ಇಂದು ದೂರದರ್ಶನದ ಮಾಧ್ಯಮದಲ್ಲಿ ಅವಕಾಶಕ್ಕೆ ರಂಗದ ಅನುಭವ ಇರುವವರಿಗೆ ಆದ್ಯತೆ ಎಂಬ ಪರಿಪಾಠ ಶುರು ವಾಗಿದೆ. ಇದು ನಿಜಕ್ಕೂ ಶ್ಲಾಘನೀಯ ಮತ್ತು ಉತ್ತಮ ಬೆಳವಣಿಗೆ. ಆದರೆ ಕೆಲವು ಯುವಕರು, ಯುವತಿಯರು ರಂಗಭೂಮಿಯ ಮೇಲೆ ಒಲವಿಲ್ಲದೆ ದೂರದರ್ಶನದ ಅವಕಾಶದ ದೃಷ್ಟಿಕೋನದಿಂದ ಮಾತ್ರ ರಂಗಭೂಮಿ ಯತ್ತ ಹೊರಳುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿಸುತ್ತದೆ.

ರಂಗಭೂಮಿ ತನ್ನದೇ ಮಡಿವಂತಿಕೆ, ಸಂಸ್ಕೃತಿ, ಸದಾಚಾರಗಳನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗಳಿಗೂ ಹರಿಸುತ್ತಾ ಬಂದಿದೆ. ಈ ರೂಢಿಗಳು ಕಲುಷಿತವಾಗದೆ, ಸ್ವಾರ್ಥದ ಬಣ್ಣ ರಂಗಕ್ಕೆ ತಗುಲದೆ, ಉತ್ತಮ ಕಲಾವಿದರನ್ನು ರೂಪಿಸುವ ಛಾವಡಿಗಳಾಗೇ ಉಳಿದು, ಬೆಳೆಯಲಿ. ‘ದ ಶೋ ಮಸ್ಟ್ ಗೋ ಆನ್’ ಎಂಬ ಧ್ಯೇಯವಾಕ್ಯವನ್ನು ಅನುಸರಿಸುತ್ತಾ ಕಲಾವಿದ ತನ್ನ ಕಲೆಯನ್ನು ಆರಾಧಿಸುತ್ತಾ ಅದನ್ನೇ ಉಸಿರಾಗಿಸಿ ಕೊಂಡು ಬೆಳೆಯುತ್ತಾನೆ.

ಇಂತಹ ಎಲ್ಲಾ ರಂಗಕರ್ಮಿಗಳಿಗೂ, ರಂಗದ ಮೇಲೆ ಹಾಗೂ ರಂಗದ ಹಿಂದೆ ಅನವರತ ದುಡಿಯುವ ಹಲವು ಕಲಾವಿದರಿಗೂ ವಿಶ್ವ ರಂಗಭೂಮಿ ದಿನಾಚರಣೆಯ ಶುಭಾಶಯಗಳು.

 

RELATED ARTICLES
- Advertisment -
Google search engine

Most Popular

Recent Comments