ಲೇಖನ : ಸೌಮ್ಯ ಗಿರೀಶ್
ಮಹಿಳಾ ಸಬಲೀಕರಣ – ಸ್ತ್ರಿಶಕ್ತಿ ಎಂಬ ಸ್ಫೂರ್ತಿ
ಇಂದು ವಿಶ್ವ ಮಹಿಳಾ ದಿನಾಚರಣೆ. ಇದು ಕೇವಲ ಆಚರಣೆಯಾಗಿ ಒಂದು ದಿನದ ಉತ್ಸವವಾಗಿ ಉಳಿಯ ಬಾರದು. ಪ್ರತಿ ಯಶಸ್ವಿ ಮಹಿಳೆಯ ಹಿಂದೆ ಒಂದು ಬೆಂಬಲ ನೀಡುವ ಸಮಾಜವಿದ್ದಾಗ ಮಾತ್ರ ಯಶಸ್ಸು ಸಾಧ್ಯ. ಅವಳು ನಡೆವ ಹಾದಿಗೆ ನೆರವಾಗುವವರಿಗಿಂತ ಹಿಮ್ಮೆಟ್ಟಿ, ಹೀಯಾಳಿಸುವವರೇ ಹೆಚ್ಚಿರುವವರ ಮಧ್ಯೆ ತಾನೂ ಸಾಧಿಸಬ ಲ್ಲಳು ಎಂದು ತೋರುಸುವುದೇ ಒಂದು ಸಾಹಸವಿದ್ದಂತೆ. ತನ್ನತ್ತ ತೂರಲ್ಪಟ್ಟ ಸವಾಲುಗಳನ್ನು ತನ್ನ ಸಾಧನೆಯ ಹಾದಿಯ ಮೆಟ್ಟಿಲನಾಗಿಸಿಕೊಳ್ಳುವ ಶಕ್ತಿ, ಯುಕ್ತಿ ಎರಡೂ ಮಹಿಳೆಗೆ ಇದೆ. ಇದಕ್ಕೆ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ.
ಪುರುಷ ಪ್ರಧಾನ ಸಮಾಜ ಎನ್ನುವುದು ಸ್ವಲ್ಪಮಟ್ಟಿಗೆ ನೇಪಥ್ಯಕ್ಕೆ ಸರಿ ಯುತ್ತಿದೆ, ಇಂದು ಗಂಡನಿಗೆ ಸಮನಾಗಿ ಹೆಂಡತಿಯೂ ದುಡಿಯುತ್ತಿದ್ದಾಳೆ. ಕುಟುಂಬಗಳು ಸಶಕ್ತವಾಗುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾಳೆ. ಕುಟುಂಬಗಳು ಸಶಕ್ತವಾದರೆ ಊರು ಸಶಕ್ತವಾಗುತ್ತದೆ, ಇದರಿಂದ ಇಡೀ ರಾಷ್ಟ್ರವೇ ಸಶಕ್ತಗೊಳ್ಳುತ್ತದೆ. ಈ ನಿಟ್ಟಿ ನಲ್ಲಿ ಇಂದು ಮಹಿಳೆಯರ ಪಾತ್ರ ಅತಿ ಮುಖ್ಯ. ಹಲವಾರು ಕ್ಷೇತ್ರಗಳಲ್ಲಿ ಇಂದು ಮಹಿಳೆ ತನ್ನನ್ನು ತಾನು ಗುರು ತಿಸಿಕೊಳ್ಳುವುದರ ಜೊತೆಗೆ ಸಾಧಿಸಿ ತೋರಿಸುತ್ತಿರುವುದು ನಿಜಕ್ಕೂ ಶ್ಲಾಘ ನೀಯ. ಸಾಧನೆಗೆ ವಾಸವಿರುವ ಊರಿನ ಚೌಕಟ್ಟಿಲ್ಲ ಎಂಬುದಕ್ಕೆ ಹಲ ವಾರು ನಿದರ್ಶನಗಳಿವೆ. ಈ ಚಿಕ್ಕ ಊರಲ್ಲಿ ಅವಕಾಶಗಳಿಲ್ಲ ಎಂದು ಕೈಕಟ್ಟಿ ಕೂರುವವರಿಗೆ ಅವ ಕಾಶಗಳು ಎಲ್ಲೆಡೆ ಇವೆ ಎಂದು ನಿರೂ ಪಿಸಬಲ್ಲ, ಉದಾಹರಣೆಯಾಗಿ ನಿಲ್ಲ ಬಲ್ಲ ಕೆಲವು ಮಹಿಳಾ ಸಾಧಕಿಯರ ಪರಿಚಯ ವಿಲ್ಲದೆ. ತಮ್ಮ ಸಾಮರ್ಥ್ಯ ದಿಂದ ಎಂತಹ ಕಷ್ಟವನ್ನೂ ಎದುರಿಸ ಬಲ್ಲರು, ಎಂತಹ ಕೆಲಸದಲ್ಲಾದರೂ ಮುಂಚೂಣಿಯಲ್ಲಿ ನಿಲ್ಲಬಲ್ಲರು ಎಂದು ನಿರೂಪಿಸಿರುವ ಇವರ ಉದಾಹರಣೆ ಕೆಲವರಿಗೆ ಪ್ರೇರಣೆಯಾಗಿ ಸ್ವಾವಲಂಬನೆ ಮತ್ತು ಸಬಲೀಕರಣದತ್ತ ಸಾಗುವಂತೆ ಮಾಡಿದರೆ ಇದರ ಉದ್ದೇಶ ಸಾರ್ಥಕ.
ತುಷಾರಮಣಿ -ಆಯುಕ್ತರು, ಶಿವಮೊಗ್ಗ
“ಮಹಿಳೆ ಸಬಲೆಯಾಗಬೇಕಾದರೆ ಅವಳನ್ನು ಭೋಗದ ವಸ್ತುವಿನಂತೆ ನೋಡುವುದು ನಿಲ್ಲಬೇಕು. ಅವಳೂ ಒಬ್ಬಳು ಮನುಷ್ಯಳು ಎಂದು ಪರಿಗಣಿಸಬೇಕು. ಒಬ್ಬ ಗಂಡು ಕೂರುವ ಹುದ್ದೆಯಲ್ಲಿ ಹೆಣ್ಣು ಕುಳಿತಾಗ ಸಮಾನ ದೃಷ್ಟಿಯಿಂದ ಸ್ವೀಕರಿಸಬೇಕೆ ಹೊರತು ಅವಳು ಹೆಣ್ಣೆಂಬ ದೃಷ್ಟಿಕೋನದಿಂದ ನೋಡಬಾರದು. ಹಾಗಾದಾಗ ಮಾತ್ರ ಸಮಾನತೆ ಮತ್ತು ಸಬಲೀಕರಣಕ್ಕೊಂದು ಅರ್ಥ. ಪ್ರಸ್ತುತ ರಾಜಕೀಯದಲ್ಲೂ ಕೂಡ ಹೆಸರಿಗೆ ಮಹಿಳೆಯರ ಸ್ಥಾನ ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಗಂಡ-ಮಗ ವಹಿಸಿಕೊಳ್ಳುವ ಪರಿಪಾಠ ದೂರವಾಗಿ ಮಹಿಳೆ ಸ್ವತಂತ್ರ್ಯ ನಿರ್ಧಾರ ತೆಗೆದುಕೊಳ್ಳುವ ಹಂತ ತಲುಪಿದಾಗ ಮಾತ್ರ ಆ ಅಧಿಕಾರಕ್ಕೊಂದು ಅರ್ಥ. ಇದೆಲ್ಲದರ ಜೊತೆಗೆ ಒಬ್ಬ ಹೆಣ್ಣು ಮಗಳು ಓದಿ ಒಳ್ಳೆಯ ಉದ್ಯೋಗದಲ್ಲಿದ್ದು ಯಶಸ್ಸು ಕಂಡರೆ ಅದನ್ನು ಯಶಸ್ಸು ಎಂದು ಪರಿಗಣಿಸದೆ ಅವಳ ವೈವಾಹಿಕ ಜೀವನದ ಯಶಸ್ಸಿನ ಮೂಲಕ ಅವಳ ಯಶಸ್ಸನ್ನು ಅಳತೆ ಮಾಡುವ ಮನಃಸ್ಥಿತಿ ದೂರಾಗಬೇಕು. ನನ್ನ ಪ್ರಕಾರ ಎಂದೂ ಒಂದೂ ಅತ್ಯಾಚಾರದ ಪ್ರಕರಣಗಳು ಆಗುವುದಿಲ್ಲವೋ, ಎಂದಿಗೆ ಮಹಿಳೆ ಮೇಲುಸ್ಥರದ ಹುದ್ದೆಗಳತ್ತ ನಡೆಯುತ್ತಾಳೋ, ಎಂದು ಸ್ವತಂತ್ರ್ಯವಾಗಿ ಅಧಿಕಾರ ನಿರ್ವಹಿಸುತ್ತಾಳೋ ಅಂದೇ ನಿಜವಾದ ಸಬಲೀಕರಣ.” ಎನ್ನುವ ತುಷಾರಮಣಿಯವರು ತೆರೆಯ ಮೇಲೆ ಲೇಡಿ ಕಮಿಷನರ್ ನೋಡಿ ಸಿಳ್ಳೆ ಹೊಡೆಯುವ ಮಂದಿ ನಿಜ ಜೀವನದಲ್ಲೂ ಅವಳನ್ನು ಅಷ್ಟೇ ಉತ್ಸಾಹದಿಂದ ಪ್ರೋತ್ಸಾಹಿಸಬೇಕು ಎಂಬ ನಿಲುವನ್ನು ಅತ್ಯಂತ ಸೂಕ್ಷ್ಮವಾಗಿ ತಿಳಿಸಿದರು.
ಜಿಲ್ಲೆಯ ಮೇಲುಸ್ಥರದ ಹುದ್ದೆಗಳಲ್ಲಿ ಮಹಿಳೆಯರು ಕಾಣಿಸಿಕೊಂಡು ಯಶಸ್ವಿಯಾಗಿ ಅದನ್ನು ನಿಭಾ ಯಿಸುತ್ತಿರುವುದಕ್ಕೆ ನಿದರ್ಶನ ಶಿಮೊಗ್ಗದ ಅಯುಕ್ತ ರಾದ ತುಷಾರಮಣಿಯವರು. ಮಹಿಳಾ ಸಬಲೀ ಕರಣ ಎಂಬುದು ಮಹಿಳಾ ದಿನಕ್ಕೆ ಮಾತ್ರ ಸೀಮಿತವಾಗದೆ ಪ್ರತಿನಿತ್ಯವೂ ಅವಳಿಗೆ ಬೆಳೆಯುವ ವಾತಾವರಣ ಸೃಷ್ಟಿಯಾಗಬೇಕು ಎನ್ನುವ ತುಷಾರ ಮಣಿಯವರು ಇಂದು ತಮ್ಮ ದಿಟ್ಟತನದಿಂದ ವಿಶಿಷ್ಟ ಛಾಪು ಮೂಡಿಸಿ ಹಲವು ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗುತ್ತಿದ್ದಾರೆ.
ಒಬ್ಬ ಕಮಿಷನರ್ ಎನ್ನುವುದಕ್ಕೂ ಲೇಡಿ ಕಮಿಷನರ್ ಎನ್ನುವುದಕ್ಕೂ ಬಹಳ ವ್ಯತ್ಯಾಸವಿದೆ. ಇನ್ನೂ ಈ ಪುರುಷ ಪ್ರಧಾನ ಸಮಾಜ ಲೇಡಿ ಎಂಬ ಅಂಕಿತವನ್ನು ಹಿಡಿದು ನೋಡುವ ದೃಷ್ಟಿ ಬದಲಾ ಗಬೇಕು ಎನ್ನುವುದು ಇವರ ಮಾತು.
ಶಾರದ ಭಟ್-ಕಾಫಿ ಟೀ ವ್ಯಾಪಾರಿ
“ಸಾಲ ತೀರಿಸಲು ಪ್ರಾರಂಭಿಸಿದ್ದೇನೆ. ಇದು ನನಗೆ ಬದುಕು ಕಟ್ಟಿಕೊಟ್ಟಿದೆ. ನನ್ನ ಎರಡು ಮಕ್ಕಳಿಗೆ ಸಿಬಿಎಸ್‌ಇ ಶಿಕ್ಷಣ ಕೊಡಿಸುತ್ತಿದ್ದೇನೆ. ಒಂದು ಹೇಳಲು ಇಷ್ಟ ಪಡುತ್ತೀನಿ ದಯವಿಟ್ಟು ಹಣಕಾಸಿನ ಸಮಸ್ಯೆ ಎಂದು ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬರಬೇಡಿ. ಜೀವನ ಅಮೂಲ್ಯ, ಆತ್ಮಸ್ಥೈರ್ಯ ಇದ್ದರೆ ಎಂತಹ ಸವಾಲನ್ನು ಬೇಕಾದರೂ ಎದುರಿಸಬಹುದು. ನಾವು ಮಹಿಳೆಯರು, ಯಾರಿಗೂ ಕಮ್ಮಿ ಇಲ್ಲ. ನಮ್ಮಲ್ಲಿರುವ ಕೈಕೆಲಸವೇ ನಮ್ಮ ಜೀವನಕ್ಕೊಂದು ದಾರಿ ತೋರಿಸುತ್ತದೆ. ವಿವೇಚನೆಯಿಂದ ಯೋಚಿಸಿ. ದುಡುಕಬೇಡಿ. ಒಂದು ಕಾಫಿ-ಟೀ ವ್ಯಾಪಾರ ನನ್ನ ಸಂಸಾರವನ್ನು ಸಾಕಬಲ್ಲದು ಎಂದರೆ ನಿಮ್ಮಲ್ಲಿರುವ ಸಾಮರ್ಥ್ಯ ಕೂಡ ನಿಮ್ಮನ್ನು ಗೆಲ್ಲಿಸದೆ ಇರದು” ಎನ್ನುತ್ತಲೇ ಸ್ಫೂರ್ತಿಯ ಮಾತುಗಳನ್ನಾಡಿದರು ಶಾರದ ಭಟ್.
ಮಹಿಳೆ ಯೊಬ್ಬಳು ಸಬಲಳಾದರೆ ಮನೆ ಯೊಂದು ಸಬಲವಾಗುತ್ತದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆ ಶಾರದ ಭಟ್. ವಿನೋಬನಗರದ ನಿವಾಸಿಯಾದ ಇವರ ದಿಟ್ಟತನಕ್ಕೆ ಇವರೇ ಸಾಟಿ. ಲಕ್ಷಾಂತರ ರೂ ಸಾಲ ಮಾಡಿ, ಗಂಡ ಕೈಚೆಲ್ಲಿ ನಿಂತು, ಸೋತು ಕುಂದಾಪುರಕ್ಕೆ ನಡೆದಿದ್ದರು. ಆತ್ಮಹತ್ಯೆಯೊಂದೇ ಉಳಿದಿರುವ ದಾರಿ ಎಂದ ಗಂಡನಿಗೆ ಧೈರ್ಯ ತುಂಬಿ ನಾನು ಕೈ ಜೋಡಿ ಸುತ್ತೇನೆ ಎಂದು ಜೊತೆ ನಿಂತ ಶಾರದ ಭಟ್ ಎದ್ದು ನಿಂತ ಬಗೆ ಎಲ್ಲರಿಗೂ ಮಾದರಿ. ಪ್ರತಿದಿನ ೨೦ ಸಾಲಗಾರರು ಮನೆಯ ಮುಂದೆ ಬಂದು ನಿಂತರೂ ಎದೆಗುಂದರೆ, ಬದುಕಿದ್ದೇವೆ, ತೀರಿಸುತ್ತೇವೆ ಎಂಬ ಉತ್ತರ ನೀಡುತ್ತ ಬದುಕ ಬಂಡಿ ಸಾಗಿಸಲು ಮಾರ್ಗ ಆರಿಸಲು ಹೊರಟ ಇವರಿಗೆ ಹೊಳೆದದ್ದು ಮಜ್ಜಿಗೆ ಮಾರುವ ಕಾಯಕ. ಗಾಂಧಿಬಜಾರ್‌ನ ಪ್ರತಿ ಯೊಂದು ಅಂಗಡಿಗೂ ಹೋಗಿ ಮಜ್ಜಿಗೆ ಮಾ ರಾಟ ಆರಂಭಿಸಿದರು. ಮಳೆಗಾಲ ಪ್ರಾರಂಭ ವಾಗಿ ಮಜ್ಜಿಗೆಯನ್ನು ಕೇಳುವವರಿಲ್ಲದಂತಾ ಯಿತು.
ಆ ಹೊತ್ತಿನಲ್ಲೇ ಇವರಿಗೆ ಹೊಳೆದದ್ದು ಕಾಫಿ-ಟೀ ವ್ಯಾಪಾರ. ಅಂಗಡಿ ಹಾಕುವಷ್ಟು ಸಶಕ್ತ ರಾಗಿರದ ಕಾರಣ ಫ್ಲಾಸ್ಕ್‌ಗಳಲ್ಲಿ ಕಾಫಿ-ಟೀ ತುಂಬಿಸಿಕೊಂಡು ಪ್ರತಿ ಸರ್ಕಾರಿ ಕಚೇರಿಯ ಮೆಟ್ಟಿಲುಗಳನ್ನು ಹತ್ತುತ್ತ, ಮೇಜುಗಳ ಮುಂದೆ ನಿಂತು ‘ಸರ್ ದಯವಿಟ್ಟು ಕಾಫಿ- ಟೀ ತೊಗೊಳ್ಳಿ ಸರ್’ ಎಂದು ಕೇಳಿ ಕೊಂಡು ವ್ಯಾಪಾರವನ್ನು ಗಟ್ಟಿಗೊಳಿಸಿದ ಕಾಲ ವೊಂದಿತ್ತು. ಆದರೆ ಇಂದು ಡಿಸಿ ಕಚೇರಿಯಿಂದ ಕೋರ್ಟ್ ವರೆಗೆ ಪ್ರತಿ ಯೊಬ್ಬರಿಗೂ ಈ ಶಾರದಮ್ಮನ ಪರಿಚಯವಿದೆ.
ಗಾಯಿತ್ರಿ ಶಾಂತಾರಾಮ್-ಮುಖ್ಯ ಆಡಳಿತಾಧಿಕಾರಿ
“ಇದು ನನಗೆ ದೊರೆತ ಮೊದಲ ಕೆಲಸ. ಇದು ನನಗೆ ಬಹಳಷ್ಟು ಕಲಿಸಿದೆ. ಮಹಿಳೆಯರಿಗೆ ಯಾವುದೂ ಅಸಾಧ್ಯವಲ್ಲ. ಹೆಣ್ಣಿನ ನಿರ್ವಹಣಾ ಸಾಮರ್ಥ್ಯ ಪ್ರಾರಂಭವಾಗುವುದೇ ಮನೆಯಿಂದ. ಒಬ್ಬ ಮನೆಯ ಆಡಳಿತದ ಚುಕ್ಕಾಣಿ ಹಿಡಿಯಬಹುದಾದ ಹೆಣ್ಣು ಸಂಸ್ಥೆಯ ಆಡಳಿತವನ್ನೂ ಮಾಡಬಲ್ಲಳು. ಇಂದು ಎಷ್ಟೋ ಸಣ್ಣ ವಯಸ್ಸಿನ ವಿಧವೆಯರು, ವಿಚ್ಛೇದಿತರು ಮಾತ್ರವಲ್ಲ ಸಂಸಾರದ ಜವಾಬ್ದಾರಿಯನ್ನು ಸರಿಸಮಾನಾಗಿ ಹಂಚಿಕೊಳ್ಳುವ ಎಲ್ಲಾ ಮಹಿಳೆಯರಿಗೂ ಉತ್ತಮ ಅವಕಾಶವಿದೆ. ಆತ್ಮವಿಶ್ವಾಸದಿಂದ ತಮ್ಮಲ್ಲಿರುವ ಸಾಮರ್ಥ್ಯವನ್ನು ತಾವೇ ಕಂಡುಕೊಂಡು ಅದನ್ನು ಸೂಕ್ತ ಮಾರ್ಗದಲ್ಲಿ ಕೊಂಡೊಯ್ದರೆ ಖಂಡಿತ ಯಾವ ಕ್ಷೇತ್ರದಲ್ಲಾದರೂ ಮಹಿಳೆ ಗೆಲ್ಲಬಹುದು. ಮಹಿಳೆಯರು ಸಬಲರಾದರೆ ದೇಶವೇ ಸಬಲವಾದಂತೆ” ಎನ್ನುವ ಪ್ರೋತ್ಸಾಹದ ಮಾತುಗಳನ್ನಾಡುತ್ತಾರೆ ಗಾಯಿತ್ರಿಯವರು.
ಒಬ್ಬ ಸಾಧಾರ ಣ ಗೃಹಿ ಣಿಯಾಗಿದ್ದ ಗಾಯಿತ್ರಿ ಶಾಂತಾರಾಮ್ ಇಂದು ಶಿವಮೊಗ್ಗದ ಪ್ರತಿಷ್ಠಿತ ಶಂಕರ ಕಣ್ಣಿನ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿಯಾಗಿದ್ದರೆ ಎಂದರೆ ಅದಕ್ಕೆ ಅವರಲ್ಲಿರುವ ಆತ್ಮವಿಶ್ವಾಸವೇ ಕಾರಣ. ಎಂಬಿಎ ಪದವೀಧರರು ಮಾತ್ರ ಆಡಳಿತ ಮಾಡಬಲ್ಲರು ಎಂಬುದನ್ನು ಹುಸಿಗೊಳಿಸಿರುವ ಗಾಯಿತ್ರಿಯವರು ಕೇವಲ ಬಿ.ಎ.ಪದವೀಧರೆಯಾದರೂ ಕೂಡ ಇಡೀ ಆಸ್ಪತ್ರೆಯ ಆಡಳಿತದ ಚುಕ್ಕಾಣಿಯನ್ನು ಹಿಡಿದು ಅದರಲ್ಲಿ ಯಶಸ್ಸು ಕಂಡಿದ್ದಾರೆ.
೧೩೭ ಪ್ಯಾರಾ ಮೆಡಿಕಲ್ ಸಿಬ್ಬಂದಿ, ದಿನಕ್ಕೆ ೫೦೦ ಕ್ಕೂ ಹೆಚ್ಚು ರೋಗಿಗಳು, ಪ್ರತಿಯೊಬ್ಬರದ್ದೂ ಒಂದೊಂದು ಅಹವಾಲು, ಸಮಸ್ಯೆ, ಪ್ರಶ್ನೆ, ಪ್ರಶಂಸೆ ಹೀಗೆ ಎಲ್ಲಕ್ಕೂ ಕಿವಿ ಗೊಡುತ್ತ, ಎಲ್ಲವನ್ನೂ ನಿರ್ವಹಿಸುವುದರ ಜೊತೆಗೆ ಆಸ್ಪತ್ರೆಯ ಸಂಪೂರ್ಣ ನಿರ್ವಹಣೆ, ಹಣಕಾಸು, ಬಜೆಟ್, ಪ್ರಚಾರ, ಕ್ಯಾಂಪ್, ಹೀಗೆ ಆಸ್ಪತೆಯಲ್ಲಿ ನಡೆ ಯುವ ಪ್ರತಿಯೊಂದು ಚಟುವಟಿಕೆಯ ಹಿಂದಿನ ಕೈ ಒಬ್ಬ ಮಹಿಳೆಯದ್ದು ಎನ್ನುವುದೇ ಹೆಮ್ಮೆಯ ವಿಷಯ. ಇಂತಹ ಜವಾಬ್ದಾರಿಯನ್ನು ೮ ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವವರು ಗಾಯಿತ್ರಿ ಶಾಂತಾರಾಮ್.
ಉಮಾ ರವಿಶಂಕರ್ -ವಾಹನ ಚಾಲನ ತರಬೇತುದಾರರು
“ಹೆಣ್ಣು ಸಬಲೆಯಾಗಬೇಕು. ಸಬಲೀಕರಣ ಅಹಂಕಾರಕ್ಕೆ ತಿರುಗಬಾರದು. ಸಬಲಳು ಎಂದರೆ ಜೀವನದ ಬಂಡಿಯನ್ನು ಎಳೆಯಲು ಗಂಡನಿಗೆ ತೋಳಾಗಿ ನಿಲ್ಲಬಲ್ಲಳು ಎಂದರ್ಥವೇ ಹೊರತು, ನೀನಿಲ್ಲದೆ ನಾನು ಬಾಳಬಲ್ಲೆ ಎಂಬ ಅಹಂ ಮೂಡಿಸುವಂತಾಗಬಾರದು. ಇಂದಿನ ಬಹುತೇಕ ವಿಚ್ಛೇದನಗಳಿಗೆ ಕಾರಣ ಸಬಲೀಕರಣದ ತಪ್ಪು ಕಲ್ಪನೆ. ಸಬಲರಾಗಿ ಜೊತೆಗೆ ಸಮಾರಸ್ಯವನ್ನೂ ಕಾಪಾಡಿಕೊಂಡು ಹೋದಾಗ ಮಾತ್ರ ಬದುಕು ಸುಂದರ” ಎನ್ನುತ್ತಲೇ ತಮ್ಮ ಕಿವಿಮಾತನ್ನು ಹೇಳಿದರು ಉಮಾ ರವಿಶಂಕರ್.
ಉಮಾ ರವಿ ಶಂ ಕರ್ ಎನ್ನುವುದ ಕ್ಕಿಂತ ಇವರು ‘ಸ್ಕೂಟಿ ಉಮಾ’ ಎಂದೇ ಪ್ರಚ ಲಿತರು. ಇವರಕಸುಬು ಇವರ ಹೆಸರಿನೊಂದಿಗೆ ತಾಳೆ ಹಾಕಿ ಕೊಂಡಿರುವುದೇ ಇವರ ಸಾಧನೆಗೆ ಸಂದ ಫಲ. ದುಡಿಯುವ ದಾರಿ ಕಾಣದೆ “ನನ್ನಿಂದ ಏನೂ ಆಗದು” ಎನ್ನು ವರ ಮಧ್ಯೆ ಮಾಡುವ ಛಲವೊಂದಿದ್ದರೆ ಸಾಕು ಎನ್ನುವುದಕ್ಕೆ ನಿದರ್ಶನ.
ಕಚೇರಿಗೆ ಹೋಗಬೇಕಾದ ಹೆಣ್ಣು ಮಕ್ಕಳು, ಮಕ್ಕಳನ್ನು ಶಾಲೆಗೆ ಬಿಡಲು, ಸಣ್ಣಪುಟ್ಟ ಕೆಲಸ ಗಳಿಗೆ ಗಂಡನ ಮೇಲೆ ಅವಲಂಬಿತರಾಗದೆ ತಾವೇ ತಮ್ಮ ವಾಹನದಲ್ಲಿ ಹೋಗಿ ಬರುವ ಹೆಣ್ಣು ಮಕ್ಕ ಳಿಗೆ ವಾಹನ ಚಲಾಯಿಸುವುದನ್ನು ಹೇಳಿ ಕೊಡುವ ಕಾಯಕವನ್ನು ಪ್ರಾರಂಭಿಸಿದರು ಉಮಾ. ಮಕ್ಕಳ ತಜ್ಞ ಡಾ|| ಅಪರ್ಣ ಶಶಿಕುಮಾರ್‌ರವರಿಂದ ಪ್ರಾರಂಭವಾಯಿತು ಇವರ ತರಬೇತುದಾರಿಕೆ, ಆದರೆ ಅಂದು ಉಮಾ ಇದು ತಮ್ಮ ಉದ್ಯೋಗವಾಗಬಹುದು ಎಂದು ಎಣಿಸಿರಲಿಲ್ಲ. ಆದರೆ ಇವರು ಕಲಿಸಿದ ರೀತಿ, ಶ್ರದ್ಧೆ ಎಲ್ಲವೂ ಹೆಚ್ಚು, ಹೆಚ್ಚು ವಿದ್ಯಾರ್ಥಿಗಳನ್ನು ಇವರತ್ತ ಸೆಳೆಯಿತು. ಸಾಗರ್ ಮೋಟಾರ್ಸ್‌ನಲ್ಲಿ ಇದೇ ಉದ್ಯೋಗಕ್ಕೆ ಸೇರಿ ಕೊಂಡು ೫ ವರ್ಷ ಸೇವೆ ಸಲ್ಲಿಸಿದರು. ನಂತರ ಇದನ್ನು ಸ್ವಯಂ ಉದ್ಯೋಗವ ನ್ನಾಗಿಸಿಕೊಂಡರು.
ಸಂದೇಶ್ ಮೋಟಾರ್‌ನಲ್ಲಿ ಒಂದೇ ತಿಂಗಳಲ್ಲಿ ೫೦೦ ಮಂದಿಗೆ ಗಾಡಿ ಕಲಿಸಿ ಬೆಸ್ಟ್ ಟ್ಯೂಟರ್ ಪ್ರಶಸ್ತಿಗೆ ಭಾಜನರಾದರು. ಅಲ್ಲದೆ ಇವರನ್ನು ರೋಟರಿಯೂ ಪುರಸ್ಕರಿಸಿದೆ. ಇದುವರೆಗೂ ಸರಿಸುಮಾರು ೭೦೦೦ ಹೆಣ್ಣುಮಕ್ಕಳಿಗೆ ವಾಹನ ಚಾಲನೆ ಕಲಿಸಿರುವ ಉಮಾ ಸದಾ ಹುರುಪಿನಿಂದ ತುಂಬಿದ ಪಾದರಸದಂತೆ. ಲೇಡೀಸ್ ಕ್ಲಬ್ ಗಳಿಗೆ, ಶಾಲಾ ವಾರ್ಷಿಕೋತ್ಸವಗಳಲ್ಲಿ ಪೋಷ ಕರಿಗೆ ಇವರು ನೃತ್ಯ ಸಂಯೋಜನೆ, ಮೇಕಪ್ ಕೆಲಸವನ್ನು ಮಾಡುತ್ತಾರೆ ಅಲ್ಲದೆ ಕರಕುಶಲದಲ್ಲೂ ಎತ್ತಿದ ಕೈ. ದಿನದ ಪ್ರತಿ ಘಳಿಗೆಗೂ ಜೀವ ತುಂಬುತ್ತಾರೆ ಉಮಾ.
ಶಕುಂತಲಾ -ಸ್ಟಾಫ್ ನರ್ಸ್
“ನರ್ಸ್ ಉದ್ಯೋಗ ಜೀವನಕ್ಕೊಂದು ದಾರಿ ಮಾತ್ರ ಅಲ್ಲ ಸಾಮಾಜಕ್ಕೆ ಸೇವೆಯನ್ನು ನೇರವಾಗಿ ಸಲ್ಲಿಸಿದ ತೃಪ್ತಿಯನ್ನು ನೀಡುವ ಕೆಲಸ. ನೀವು ನನ್ನ ಮಗನ-ಮಗಳ, ಹೆಂಡತಿಯ-ತಾಯಿಯ ಜೀವ ಉಳಿಸಿದ್ರಿ ಅನ್ನೋ ಮಾತುಗಳೇ ಸಾಕು ಜೀವನ ಸಾರ್ಥಕ ಅನಿಸುತ್ತದೆ. ಇಂದು ಹೆಚ್ಚು ಹೆಣ್ಣು ಮಕ್ಕಳು ಈ ಉದ್ಯೋಗದತ್ತ ಬರಬೇಕು. ಹೆಣ್ಣಿಗೆ ಸಹನೆ, ತಾಳ್ಮೆ ಹೆಚ್ಚು ಹಾಗಾಗಿ ಸುಶೃಶಕಿಯಾಗಿ ಅವಳು ಯಶಸ್ವಿಯಾಗಬಹುದು. ಹೆಣ್ಣುಮಕ್ಕಳನ್ನು ಬೆಳೆಯೋದಕ್ಕೆ ಬಿಡಬೇಕು, ಅವರಿಗೆ ಅವಕಾಶ ನೀಡಿದರೆ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಬಂದು ತೋರಿಸುವ ಶಕ್ತಿ ಅವರಿಗಿದೆ. ಹೆಣ್ಣೆಂದು ಮೂಲೆಗುಂಪು ಮಾಡದೆ ಅವಳಿಗೆ ಸ್ವತಂತ್ರ್ಯವಾಗಿ ನಿರ್ಧಾರ ತೆಗೆದುಕೊಳ್ಳುವ ಆತ್ಮಸ್ಥೈರ್ಯವನ್ನು ಕುಟುಂಬದವರು ತುಂಬಿದಾಗ ಮಾತ್ರ ಮಹಿಳಾ ಸಬಲೀಕರಣಕ್ಕೊಂದು ಹೊಸ ಆಯಾಮ ದೊರೆಯುತ್ತದೆ” ಎನ್ನುತ್ತಲೆ ಸಬಲೀಕರಣಕ್ಕೆ ಸೂಕ್ತ ಬೆಂಬಲವೂ ಬೇಕು ಎಂದರು ಶಕುಂತಲಾರವರು.
ಮನೆಯಲ್ಲಿರುವ ವಯಸ್ಸಾ ದವರ ಸೇವೆ- ಶುಶ್ರೂಷೆ ಮಾಡುವುದೇ ಕ್ಲಿಷ್ಟಕರ ಎನ್ನುವರ ಮಧ್ಯೆ ದಿನಕ್ಕೆ ನೂರಾರು ರೋಗಿಗಳ ಶುಶ್ರೂಷೆ ಮಾಡುವುದು, ಅವರ ಕಾಣುವ ಮತ್ತು ಕಾಣದ ಗಾಯಗಳಿಗೆ ಔಷಧಿಯಾಗುವ ನರ್ಸ್‌ಗಳ ಕೆಲಸ ನಿಜಕ್ಕೂ ಸುಲಭಸಾಧ್ಯವಲ್ಲ. ಇಂತಹ ಸೇವೆಯಲ್ಲಿ ೩೨ ವರ್ಷಗಳಿಂದ ತೊಡಗಿಕೊಂಡಿ ದ್ದಾರೆ ಶಿವಮೊಗ್ಗದ ಪ್ರತಿಷ್ಠಿತ ಮೆಗ್ಗಾನ್ ಆಸ್ಪತ್ರೆಯ ಸ್ಟಾಫ್ ನರ್ಸ್ ಆದ ಶಕುಂತಲಾರವರು.
ಸರ್ಕಾರಿ ಆಸ್ಪತ್ರೆಯ ನರ್ಸ್ ಹುದ್ದೆ ಖಾಸಗಿ ಆಸ್ಪತ್ರೆಯಷ್ಟು ಸುಲಭವಲ್ಲ. ದಿನಕ್ಕೆ ಸೀಮಿತ ರೋಗಿಗಳಿರು ವುದಿಲ್ಲ, ಒಬ್ಬ ನರ್ಸ್ ಒಂದು ದಿನಕ್ಕೆ ನೂರಕ್ಕೂ ಹೆಚ್ಚು ರೋಗಿಗಳ ನೋವಿಗೆ ಸ್ಪಂದಿಸುತ್ತಾ ಸೇವೆ ಸಲ್ಲಿಸಿ ಸೈ ಎನಿಸಿಕೊಳ್ಳುವುದು ನಿಜಕ್ಕೂ ಸಾಧನೆಯೇ ಸರಿ. ಇದನ್ನು ಸಮಾಜ ಸೇವೆ ಎಂದೇ ಪರಿಗಣಿಸಿ ದುಡಿದಿರುವ ಶಕುಂತಲಾ ಅವರನ್ನು “ಅತ್ಯುತ್ತಮ ಸ್ಟಾಫ್ ನರ್ಸ್” ಎಂದು ಗುರುತಿ ಸಿದ ರಾಜ್ಯ ಸರ್ಕಾರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ.
೩೨ ವರ್ಷಗಳ ಸೇವೆಯಲ್ಲಿ ಒಂದು ಬಾರಿ ಯೂ ಭಡ್ತಿ ಸಿಗಲಿಲ್ಲ ಎಂಬ ನೋವು ಶಕುಂತ ಲಾರವರನ್ನು ಕಾಡಿದರೂ ಅದೆಂದು ಅವರ ಸೇವೆಯ ದೃಷ್ಟಿಕೋನವನ್ನು ಮಾತ್ರ ಬದಲಿಸ ಲಿಲ್ಲ. ಹಾಗಾಗೇ ಅವರಿಗೆ ರಾಜ್ಯ ಪ್ರಶಸ್ತಿಯಂ ತಹ ದೊಡ್ಡ ಗೌರವ ಸಂದದ್ದು ಎಂದರೆ ತಪ್ಪಲ್ಲ.