ಭದ್ರಾವತಿ: ಭದ್ರಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿರುವ ಕಾರಣ ಭದ್ರಾ ಜಲಾಶಯದಿಂದ 50 ಸಾವಿರ ಕ್ಯೂಸೆಕ್ಸ್ ನೀರನ್ನು ಹೋರ ಬಿಡಲಾಗುತ್ತಿದೆ. ಇದರ ಪರಿಣಾಮ ಭದ್ರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ಕಾರಣ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅಲ್ಲಿನ ನಿವಾಸಿಗಳು ಪರದಾಟುವಂತಾಯಿತು.
ತರೀಕೆರೆ ರಸ್ತೆಯ ಏಕಿನ್‌ಷಾ ಕಾಲೋನಿ, ಚಾಮೇಗೌಡ ಲೈನ್, ಕವಲಗುಂದಿ, ಬಿಹೆಚ್ ರಸ್ತೆಯ ಅಂಡರ್ ಬ್ರೀಡ್ಜ್ ಎದುರು ಶಿವಶಂಕರಯ್ಯ ಪೆಟ್ರೋಲ್ ಬಂಕ್ ಹಿಂಭಾಗದ ಪ್ರದೇಶಗಳು ಖಾಸಗಿ ಬಸ್ ನಿಲ್ದಾಣದ ಹಿಂದೆ ಹಾಗು ಪಕ್ಕದ ನಿವಾಸಿಗಳು ನೀರಿನಿಂದ ತೊಂದರೆ ಅನುಭವಿಸುವಂತಾಯಿತು. ಈ ಪ್ರದೇಶ ದ್ವೀಪದಂತಾಯಿತು. ಅಲ್ಲೆ ಇರುವ ಅಂಗಡಿ ವ್ಯಾಪರಸ್ಥರು ತ್ರೀವ ತೋಂದರೆ ಪಟ್ಟರು. ನೀರು ರಸ್ತೆ ವರೆಗೆ ಬಂದಿತ್ತು. ಸಮೀಪದಲ್ಲೆ ಇರುವ ಪೆಟ್ರೋಲ್ ಬಂಕ್ ನವರು ಮೋಟಾರ್ ಸಹಯದಿಂದ ನೀರನ್ನು ಹೋರ ಹಾಕುತ್ತಿದ್ದರು. ಇದರ ಪರಿಣಾಮ ಬಿಹೆಚ್ ರಸ್ತೆ ಸಿಎನ್ ರಸ್ತೆ ಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು.
ತಗ್ಗು ಪ್ರದೇಶದ ಸಂತ್ರಸ್ತರಿಗೆ ಅಪ್ಪರ್ ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನ, ತರೀಕೆರೆ ರಸ್ತೆಯ ವಳ್ಳುವರ್ ಕಲ್ಯಾಣ ಮಂಟಪ, ಚಾಮೇಗೌಡ ಏರಿಯಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರಗಳನ್ನು ತಾಲ್ಲೂಕು ಆಡಳಿತ ತೆರೆದಿದೆ. ಇವುಗಳಲ್ಲಿ ೩೫ ಕುಟುಂಬದವರು, ಸುಮಾರು ೧೫೦ ಜನ ಸಂತ್ರಸ್ತರು ಇದ್ದಾರೆ.