ಶಿವಮೊಗ್ಗ : ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಹಾಗೂ ಮಹಾನಗರ ಪಾಲಿಕೆ ವತಿಯಿಮದ ನಗರದಲ್ಲಿ ನಡೆಯು ವಂತಹ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದ ಪರೀಕ್ಷೆಯಲ್ಲಿ ಅಧಿಕಾರಿಗಳ ಪಾತ್ರವೇನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ನಗರದ ವಿವಿಧ ಬಡಾವಣೆಗಳಲ್ಲಿ ಸರ್ಕಾರದ ಯೋಜನೆಗಳ ಅನುಸಾರ ಮತ್ತು ಪಾಲಿಕೆ ವತಿಯಿಂದ ರಸ್ತೆ, ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ, ಬಾಕ್ಸ್ ಡ್ರೈನೇಜ್, ಟ್ಯಾಂಕು ಗಳ ನಿರ್ಮಾಣ, ಯುಜಿಡಿ, ಸಮುದಾಯ ಭವನ, ಪಾರ್ಕ್ ಅಭಿವೃದ್ಧಿ ಹೀಗೆ ವಿವಿಧ ಅಭಿ ವೃದ್ಧಿ ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಇದಕ್ಕಾಗಿ ಕೋಟ್ಯಾಂತರ ರೂ. ಹಣ ಸರ್ಕಾ ರದ ವತಿಯಿಂದ ಹಾಗೂ ಪಾಲಿಕೆ ವತಿಯಿಂದ ಬಿಡು ಗಡೆಗೊಂಡಿರುತ್ತದೆ. ಈ ಹಣ ಸಾರ್ವಜನಿಕರ ತೆರಿಗೆಯಿಂದ ಸಂಗ್ರಹಿಸಿದ ಹಣವಾಗಿದೆ.
ಕಾಮಗಾರಿಯ ಗುಣಮಟ್ಟ ಉತ್ತಮವಾಗಿ ದ್ದರೆ ಹಾಗೂ ನಿಗದಿತ ವೇಳೆಯಲ್ಲಿ ಪೂರ್ಣ ಗೊಂಡರೆ ಮಾತ್ರ ಯೋಜನೆಗೆ ವಿನಿಯೋಗಿಸಿದ ಹಣ ಸಂಪೂರ್ಣಸದುಪಯೋಗವಾಗುತ್ತದೆ. ಇಲ್ಲದೆ ಹೋದರೆ ಸಾರ್ವಜನಿಕರಿಂದ ತೆರಿಗೆ ರೂಪದಲ್ಲಿ ಸಂಗ್ರಹವಾದ ಹಣ ನದಿಯಲ್ಲಿ ಹೋಮ ಮಾಡಿದಂತಾಗುತ್ತದೆ.
ಒಂದು ಕಾಮಗಾರಿ ನಡೆಯುತ್ತಿದ್ದರೆ ಅದರ ಗುಣಮಟ್ಟ ಹೇಗಿದೆ ಎಂಬುದು ಪರೀಕ್ಷಿಸ ಬೇಕಾದ್ದು, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಹಾಗೂ ತಂತ್ರಜ್ಞರ ಜವಾಬ್ದಾರಿಯಾಗಿ ರುತ್ತದೆ. ಆದರೆ ಇದುವರೆಗೂ ಅಂತಹ ಕಾರ್ಯವನ್ನು ಇಲಾಖಾ ಅಧಿಕಾರಿಗಳು ಮಾಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ನಗರದ ವಿವಿಧೆಡೆ ನಡೆಯುವ ಕಾಮಗಾರಿ ಗಳು ಕಳಪೆ ಗುಣಮಟ್ಟದಿಂದ ಕೂಡಿರುತ್ತವೆ ಎಂಬ ಹಿನ್ನಲೆಯಲ್ಲಿ ನಗರದ ನಾಗರೀಕ ಹಿತರಕ್ಷಣಾ ವೇದಿಕೆಯವರು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಕಳಪೆಯಾಗಿದ್ದರೆ ಅಲ್ಲಿಯೇ ಪ್ರತಿಭಟನೆ ನಡೆಸಿ, ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಅಲ್ಲದೆ ಸ್ಥಳಕ್ಕೆ ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳನ್ನು ಕರೆಸಿ ಗುಣಮಟ್ಟದ ಕಾಮಗಾರಿ ಆಗುವ ನಿಟ್ಟಿನಲ್ಲಿ ಗಮನಹರಿಸಿದ್ದಾರೆ.
ನಗರದಲ್ಲಿ ನೂರಾರು ಸಂಘಟನೆಗಳು ಇವೆ. ಇವುಗಳು ಒಂದಲ್ಲ ಒಂದು ವಿಷಯಕ್ಕೆ ಪ್ರತಿನಿತ್ಯ ಜಿಲ್ಲಾಧಿಕಾರಿ ಕಛೇರಿ, ತಾಲ್ಲೂಕು ಕಛೇರಿ ಸೇರಿದಂತೆ ವಿವಿಧಡೆ ಪ್ರತಿಭಟನೆಯನ್ನು ನಡೆಸುತ್ತವೆ. ಈ ಎಲ್ಲಾ ಪ್ರತಿಭಟನೆಗಳು ಆ ಸಂಘಟನೆಗಳ ಅಸ್ಥಿತ್ವವನ್ನು ತೋರಿಸುವುದಕ್ಕಾಗಿ ಮತ್ತು ಉಳಿಸಿಕೊಳ್ಳುವುದಕ್ಕಾಗಿ ನಡೆಯುತ್ತ ವೆಯೇ ಹೊರತು ಯಾವುದೇ ಜನಪರ ಕಾಳಜಿಯಿಂದಲ್ಲ ಎಂಬ ಮಾತು ಎಲ್ಲಡೆ ಕೇಳಿಬರುತ್ತಿದೆ. ಈ ಸಂಘಟನೆಗಳಿಗೆ ನಿಜವಾದ ಜನಪರ ಕಾಳಜಿ ಇದ್ದಿದ್ದರೆ ನಾಗರೀಕ ಹಿತರಕ್ಷಣಾ ವೇದಿಕೆಯಂತೆ ಇವುಗಳು ಸಹ ಕಳಪೆ ಕಾಮ ಗಾರಿಯ ಬಗ್ಗೆ ಗಮನಹರಿಸುತ್ತಿದ್ದವು ಎನ್ನಬಹುದು.
ಕೇವಲ ನಾಗರೀಕ ಹಿತರಕ್ಷಣಾ ವೇದಿಕೆಗೆ ಮಾತ್ರ ಇದರ ಬಗ್ಗೆ ಕಾಳಜಿ ಇದ್ದರೆ ಸಾಲದು ಇತರೆ ಸಂಘಟನೆಗಳು ಸಹ ಈ ಹೋರಾಟಕ್ಕೆ ಬೆಂಬಲ ನೀಡಿದಾಗ ಮಾತ್ರ ಅಧಿಕಾರಿ ವರ್ಗ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತು ಕೊಳ್ಳುತ್ತಾರೆ. ಇಲ್ಲದಿದ್ದರೆ ಎಲ್ಲರ ದೃಷ್ಠಿಯಲ್ಲಿ ಹಿತರಕ್ಷಣಾ ವೇದಿಕೆ ಟೀಕೆಗೆ ಗುರಿಯಾಗುತ್ತದೆ.
ನಾಗರೀಕ ಹಿತರಕ್ಷಣಾ ವೇದಿಕೆ ಪ್ರಸ್ತುತ ಕಾರ್ಯ ಸ್ವಾಗತಾರ್ಹವಾದರೂ ಈ ಸಂಘ ಟನೆ ವಿವಿಧ ಸಂಘಟನೆಗಳ ನೆರವಿನೊಂದಿಗೆ ಕಾಮಗಾರಿಯ ಗುಣಮಟ್ಟ ಹಾಗೂ ಶಿವಮೊಗ್ಗ ನಗರದ ಅಭಿವೃದ್ಧಿಗೆ ಸಂಬಂಧ ಪಟ್ಟಂತೆ ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಸರ್ಕಾರದ ಗಮನವನ್ನು ಸೆಳೆಯುವ ನಿಟ್ಟಿನಲ್ಲಿ ಮುಂದಾಗಬೇಕಿದೆ. ಆಗ ಮಾತ್ರ ನಗರದಲ್ಲಿ ನಡೆಯುವಂತಹ ಕಾಮಗಾರಿಗಳು ಒಂದಿಷ್ಟು ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ನಡೆಯಲು ಸಾಧ್ಯವಾಗುತ್ತದೆ.
ಒಟ್ಟಾರೆ ಶಿವಮೊಗ್ಗ ನಗರದಲ್ಲಿ ನಡೆಯು ವಂತಹ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಕಾಪಾಡುವಲ್ಲಿ ಹಾಗೂ ಅದನ್ನು ಗಮನಿಸುವಲ್ಲಿ ಎಲ್ಲಾ ಸಂಘಟನೆಗಳು ಒಟ್ಟಾಗಿ ಪ್ರಯತ್ನಿಸಬೇಕು ಎಂಬ ಮಾತು ಎಲ್ಲಡೆ ಕೇಳಿಬರುತ್ತಿದೆ.
ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಕಳಪೆ : ಅಧಿಕಾರಿಗಳ – ಸಂಘಟನೆಗಳ ಪಾತ್ರವೇನು ?
RELATED ARTICLES