Thursday, September 19, 2024
Google search engine
Homeಇ-ಪತ್ರಿಕೆಶಿಕಾರಿಪುರ: ಸ್ವತಂತ್ರ ಹೋರಾಟಗಾರರ ತ್ಯಾಗ ಬಲಿದಾನದಿಂದ  ನಮಗೆ ಸ್ವಾತಂತ್ರ್ಯ: ಬಿ ವೈ ವಿಜಯೇಂದ್ರ

ಶಿಕಾರಿಪುರ: ಸ್ವತಂತ್ರ ಹೋರಾಟಗಾರರ ತ್ಯಾಗ ಬಲಿದಾನದಿಂದ  ನಮಗೆ ಸ್ವಾತಂತ್ರ್ಯ: ಬಿ ವೈ ವಿಜಯೇಂದ್ರ

ಶಿಕಾರಿಪುರ: ಶತಶತಮಾನಗಳಿಂದ ನಡೆಸಿದ ಬ್ರಿಟೀಷರ ದಬ್ಬಾಳಿಕೆಯಿಂದ ದೇಶವನ್ನು ಮುಕ್ತಗೊಳಿಸಿ  ಸ್ವತಂತ್ರ ಸಾರ್ವಭೌಮ ರಾಷ್ಟ್ರವನ್ನಾಗಿಸಲು  ತಮ್ಮ ಪ್ರಾಣದ ಹಂಗನ್ನು ತೊರೆದು  ಮಹಾತ್ಮ ಗಾಂಧೀಜಿ, ನೆಹರು, ಬಾಲಗಂಗಾಧರ್ ತಿಲಕ್  ಅಂಬೇಡ್ಕರ್  , ಸರ್ದಾರ್ ವಲ್ಲಭಭಾಯಿ ಪಟೇಲ್,  ಸುಭಾಷ್ ಚಂದ್ರ ಭೋಸ್,  ಲಾಲಾ ಲಜಪತ್ ರಾಯ್ , ಚಂದ್ರಶೇಖರ್ ಆಜಾದ್,  ಭಗತ್ ಸಿಂಗ್, ಮದನ್ ಲಾಲ್ ಡಿಂಗ್ರ ಮುಂತಾದವರ  ತ್ಯಾಗ ಬಲಿದಾನ ಪ್ರತೀಕವಾಗಿ ನಮಗೆ ಸ್ವಾತಂತ್ರ್ಯ ದೊರಕಿದೆ ಎಂದು ತಾಲೂಕಿನ ಶಾಸಕರು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ ವೈ ವಿಜಯೇಂದ್ರ ಹೇಳಿದರು.

ಅವರು ಇಂದು 78ನೇ ಸ್ವತಂತ್ರೋತ್ಸವದ ಅಂಗವಾಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಅವರು ಮಾತನಾಡುತ್ತಿದ್ದರು. ಮೋದಿಜಿ ಅವರ ಕನಸಾದ   ಹಸಿವು ಮುಕ್ತ , ನಿರುದ್ಯೋಗ ಮುಕ್ತ,   ಸ್ವಶಕ್ತ ರಾಷ್ಟ್ರ ನಿರ್ಮಾಣ, ಸ್ವತಂತ್ರೋತ್ಸವದ  ಶತಮಾನೋತ್ಸವ ಸಮಯಕ್ಕೆ ಸಮೃದ್ಧ ವಿಕಸಿತ ಭಾರತದ ಕನಸು ನನಸಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದ ತಹಶೀಲ್ದಾರ್  ಮಲ್ಲೇಶಪ್ಪ ಬೀರಪ್ಪ ಪೂಜಾರ್ ಮಾತನಾಡಿ

 ಸ್ವತಂತ್ರ ಹೋರಾಟದಲ್ಲಿ ಶಿಕಾರಿಪುರ ತಾಲೂಕಿನ ಈಸೂರಿನ ಹೋರಾಟ  ಅವಿಸ್ಮರಣೀಯವಾಗಿದ್ದು,  ಏಸೂರು ಕೊಟ್ಟರು, ಈಸೂರು ಕೊಡೆವು  ಎಂದು ದೇಶದಲ್ಲಿ ಮೊದಲು ಸ್ವತಂತ್ರ ಗ್ರಾಮ ಎಂದು ಘೋಷಿಸಿಕೊಂಡ ಊರು ಈಸೂರು ಎಂದರು.   ಸ್ವತಂತ್ರ ಬಂದಾಗ ದೇಶವು ಆಹಾರ ಸಮಸ್ಯೆಯನ್ನು ಎದುರಿಸುತ್ತಿತ್ತು ಈಗ ನಮ್ಮ ದೇಶವು ಸ್ವತಃ ಆಹಾರ ಭದ್ರತೆಯನ್ನು ಹೊಂದಿ ವಿದೇಶಗಳಿಗೆ ಆಹಾರ ಪದಾರ್ಥಗಳನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದು ನಿಂತಿದೆ,    ನಮ್ಮನ್ನು ವಿದೇಶಿಯರು ಆಳಿದರು ಆದರೆ ಈಗ ಭಾರತೀಯ ಮೂಲದವರು  ವಿವಿಧ ವಿದೇಶಗಳನ್ನು ಆಳುತ್ತಿದ್ದಾರೆ ಎಂದರು. 

ಹಿರಿಯ  ಸ್ವತಂತ್ರ ಹೋರಾಟಗಾರ ಟಿ ಕೆ ದೇವೇಂದ್ರಪ್ಪ ಅವರ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಲೆನಾಡು  ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ , ಪುರಸಭಾ ಸದಸ್ಯರುಗಳಾದ ಪಾಲಾಕ್ಷಪ್ಪ ಭದ್ರಾಪುರದ, ಜಿನಳ್ಳಿ ಪ್ರಶಾಂತ್, ರೂಪಕಲ ಹೆಗಡೆ, ಸುನಂದ ಮಂಜುನಾಥ್ , ರೂಪ  ಮಂಜುನಾಥ್ , ಸರ್ಕಾರಿ ನೌಕರರ ಸಂಘದ ಅಧ್ಯಕ್ಷ  ಮಧುಕೇಶ್ವರ್, ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular

Recent Comments