ಆರೋಗ್ಯಕ್ಕೆ ಅಮೃತ ಕಲ್ಲಂಗಡಿ – ಒಂದಷ್ಟು ಉಪಯುಕ್ತ ಮಾಹಿತಿ

ಎಲ್ಲೆಲ್ಲೂ ಸುಡು ಬೇಸಿಗೆ, ಬಿಸಿಲ ಝಳ ನೆತ್ತಿಯನ್ನು ಸಡುವುದರ ಜೊತೆಗೆ ಆರೋಗ್ಯದ ಮೇಲೆ ಹಲವಾರು ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ಬೇಸಿಗೆಗಾಲದಲ್ಲಿ ನಿಮ್ಮ ಆರೋಗ್ಯಕಾಪಾಡಿಕೊಳ್ಳಲು ನಿಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಕಲ್ಲಂಗಡಿಯ ಬಳಕೆ ಬಹಳ ಉಪಯೋಗಕಾರಿ.

ಕಲ್ಲಂಗಡಿಯಲ್ಲಿನ ವಿಶೇಷತೆಗಳು ಮತ್ತು ಲಾಭಗಳು

1. 92% ನೀರಿನ ಅಂಶದಿಂದ ಕೂಡಿದೆ :

ಬೇಸಿಗೆಯ ಬೇಗೆಯಿಂದಾಗಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ (ಡೀಹೈಡ್ರೇಷನ್). ಈ ಸಮಸ್ಯೆಯಿಂದ ನಿಮ್ಮನ್ನು ದೂರವಿಡುವ ಶಕ್ತಿ ಕಲ್ಲಂಗಡಿಗಿದೆ.

2. ವಿಟಮಿನ್ ಎ, ಬಿ6 ಮತ್ತು ಸಿ ಹೇರಳವಾಗಿದೆ

ತಿನ್ನುವ ಪ್ರತಿ ಕಲ್ಲಂಗಡಿ ಹೋಳಿನಲ್ಲಿ ವಿಟಮಿನ್‌ಗಳು ಹೇರಳವಾಗಿರುವುದರಿಂದ ಆರೋಗ್ಯಕ್ಕೆ ಲಾಭಕರ. ವಿಟಮಿನ್ ಎ ಕಣ್ಣು ಮತ್ತು ಚರ್ಮದ ಆರೋಗ್ಯ ಕಾಪಾಡುತ್ತದೆ, ವಿಟಮಿನ್ ಬಿ6 ಡಾಯಾಬಿಟಿಸ್, ನಿದ್ರಾಹೀನತೆ, ಋತುಚಕ್ರದ ಸಮಸ್ಯೆಗಳ ನಿವಾರಣೆಗೆ ರಾಮಬಾಣವಾದರೆ ವಿಟಮಿನ್ ಸಿ ಕೊಲೆಸ್ಟ್ರಾಲ್ ಕಡಿಮೆ ಮಾಡುವುದರ ಜೊತೆಗೆ, ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ ಹಾಗೂ ಕಿಡ್ನಿಯ ಆರೋಗ್ಯವನ್ನೂ ಕಾಪಾಡುತ್ತದೆ.

3. ಲೈಕೋಪಿನ್ ಅಂಶ:

ಹೃದಯದ ಆರೋಗ್ಯಕ್ಕೆ ಲೈಕೋಪಿನ್ ಅಂಶ ಬಹಳ ಪರಿಣಾಮಕಾರಿ. ಅಷ್ಟೇ ಅಲ್ಲದೆ ಇದು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ, ಹೀಗಾಗಿ ಮಕ್ಕಳು, ವಯಸ್ಸಾದವರು ಹಾಗೂ ಋತುಚಕ್ರ ನಿಂತ ಹೆಂಗಸರಿಗೂ ಮೂಳೆಯ ಆರೋಗ್ಯಕ್ಕೆ ಲೈಕೋಪಿನ್ ಸಹಾಯಕ.

4. ಕೊಬ್ಬು ಕರಗಿಸಬಲ್ಲ ಸಿಟ್ರುಲೀನ

ಇದರಲ್ಲಿನ ಸಿಟ್ರುಲೀನ್ ಅಂಶ ದೇಹದ ಕೊಬ್ಬನ್ನು ಕರಗಿಸುವಲ್ಲಿ ಬಹಳ ಪರಿಣಾಮಕಾರಿ. ದೇಹದಲ್ಲಿ ಬಿಸಿಲಿನ ತಾಪದಿಂದ ಉಂಟಾಗುವ ಆಯಾಸವನ್ನು ಕಡಿಮೆ ಮಾಡುವ ಮತ್ತು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

5. ಪೊಟಾಷಿಯಂನ ಅಂಶ

ಕಲ್ಲಂಗಡಿಯಲ್ಲಿ ಪೊಟಾಷಿಯಂ ಅಂಶವಿದ್ದು ಇದು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಮೆದುಳಿನಲ್ಲಿ ಹರಿದಾಡಬೇಕಾದ ಸಿಗ್ನಲ್‌ಗಳು ಪೊಟಾಷಿಯಂನಿಂದಾಗಿ ಚುರುಕುಗೊಳ್ಳುತ್ತದೆ.

ಬಿರು ಬೇಸಿಗೆಯಲ್ಲಿ ದೊರೆಯುವ ಈ ಕಲ್ಲಂಗಡಿ ಬಾಯಾರಿಕೆ ನೀಗುವುದರ ಜೊತೆಗೆ ನಾಲಿಗೆಗೆ ರುಚಿಯಾಗಿಯೇ ದೇಹದ ಸಂಪೂರ್ಣ ಆರೋಗ್ಯಕ್ಕೆ ಒಂದು ಸುಲಭ ಪರಿಹಾರ.