Saturday, October 12, 2024
Google search engine
Homeಇ-ಪತ್ರಿಕೆಮತದಾರ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಂಸದ ಬಿ.ವೈ.ರಾಘವೇಂದ್ರ

ಮತದಾರ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ತಮ್ಮ ಅತ್ಯಮೂಲ್ಯ ಮತಗಳನ್ನು ನೀಡಿ ಅಭೂತಪೂರ್ವ ದಿಗ್ವಿಜಯದ ಅಂಗಳಕ್ಕೆ ತಂದು ನಿಲ್ಲಿಸಿ ನನ್ನ ಮೇಲಿನ ಮಹತ್ತರ ಜವಾಬ್ದಾರಿಯನ್ನು ಹಾಗೂ ನೀವು ಇಟ್ಟಿರುವ ಅಪಾರ ನಂಬಿಕೆಯನ್ನು ಹಿಮ್ಮುಡಿಗೊಳಿಸಿದ್ದೀರಿ ಎಂದು ಹೇಳಿದರು.

ಜನರಿಂದ ಜನರಿಗಾಗಿ ಜನರಿಗೋಸ್ಕರ ಎಂಬ ತತ್ವವನ್ನು ರಾಜಕೀಯ ಜೀವನದಲ್ಲಿ ಅಳವಡಿಸಿಕೊಂಡು ನನ್ನ ಬಳಿ ಬರುವ ಪ್ರತಿಯೊಬ್ಬ ಜನಸಾಮಾನ್ಯರ ನಾಡಿ ಮಿಡಿತ ಅರಿಯುವಲ್ಲಿ ಸಫಲನಾಗಿದ್ದೇನೆ ಎಂಬ ಅಚಲ ವಿಶ್ವಾಸ ದ್ಯೋತಕವಾಗಿದೆ ಎಂಬ ಆಶಾಭಾವನೆ ಈ ಮೂಲಕ ದುಪ್ಪಟ್ಟಾಗಿದೆ ಎಂದು ಭಾವಿಸುತ್ತೇನೆ ಎಂದರು.
 
ಈ ದೋಣಿಯ ಅಂಬಿಗನಾಗಿ ಸುದೀರ್ಘ ಪಯಣದಲ್ಲಿ ನಿಮ್ಮ ಆಶೀರ್ವಾದ ಸದಾ ಬೇಡುತ್ತೇನೆ. ಸೂಕ್ತ ಸಮಯದಲ್ಲಿ ಅಗತ್ಯ ಸಲಹೆ ಮತ್ತು ಸಹಕಾರ ನಿರೀಕ್ಷಿಸುತ್ತೇನೆ. ನಿಮ್ಮೊಂದಿಗೆ ಎಂದೆಂದಿಗೂ ಇರಬೇಕು ಎನ್ನುವ ನನ್ನ ಆತ್ಮಸಾಕ್ಷಿಗೆ ಕೈಜೋಡಿಸುವ ಮೂಲಕ ಹೆಚ್ಚಿನ ಬಲ ತುಂಬಬೇಕು ಎಂದು ವಿನಮ್ರ ಪೂರ್ವಕವಾಗಿ ತಮ್ಮಲ್ಲಿ ಪ್ರಾರ್ಥಿಸುತ್ತೇನೆ ಎಂದರು.

RELATED ARTICLES
- Advertisment -
Google search engine

Most Popular

Recent Comments