Thursday, December 5, 2024
Google search engine
Homeಇ-ಪತ್ರಿಕೆಜನರಿಂದ ʻಅಭಿವೃದ್ಧಿʼ ಗಾಗಿ ಮತ: ಕೊಟ್ಟ ಭರವಸೆ ಈಡೇರಿಸುತ್ತೇವೆ; ನೂತನ ಸಂಸದೆ ಪ್ರಭಾ ಮಲ್ಲಿಕಾರ್ಜುನ್

ಜನರಿಂದ ʻಅಭಿವೃದ್ಧಿʼ ಗಾಗಿ ಮತ: ಕೊಟ್ಟ ಭರವಸೆ ಈಡೇರಿಸುತ್ತೇವೆ; ನೂತನ ಸಂಸದೆ ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಅಭಿವೃದ್ಧಿ ಕುಂಠಿತವಾಗಿದ್ದು, ಈ ಸಾರಿ ಜನರು ಅಭಿವೃದ್ಧಿ ಬಯಸಿ  ಮತ ನೀಡಿ, ನಮ್ಮನ್ನು ಗೆಲ್ಲಿಸಿದ್ದಾರೆ. ಅವರ ಭರವಸೆ ಈಡೇರಿಸಲು ಪ್ರಯತ್ನಸುತ್ತೇವೆ ಎಂದು ನೂತನ ಸಂಸದೆ ಪ್ರಭಾಮಲ್ಲಿಕಾರ್ಜುನ್‌ ಆವರು ಹೇಳಿದರು.

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ನಾವು ಯಾರೊಂದಿಗೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿರಲಿಲ್ಲ. ಮಾಡಿಕೊಂಡಿದ್ದರೆ 1 ಲಕ್ಷ ಮತಗಳ ಅಂತರದಿಂದ ನಾನು ಗೆಲ್ಲುತ್ತಿದ್ದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಿದ್ದಿರುವ ಮತಗಳಲ್ಲಿ ದಾವಣಗೆರೆ ಬಿಜೆಪಿ ಅಭ್ಯರ್ಥಿಯನ್ನು ನೋಡಿ ಜನರು ಮತಹಾಕಿಲ್ಲ. ಮೋದಿಯವರನ್ನು ನೋಡಿ ಮತ ಹಾಕಿದ್ದಾರೆ. ಕಳೆದ 25 ವರ್ಷಗಳಿಂದ ಅವರು ತಮ್ಮ ಅಭಿವೃದ್ಧಿ ಬಿಟ್ಟು ಜಿಲ್ಲೆಯ ಅಭಿವೃದ್ಧಿ ಮಾಡಲು ಶ್ರಮಿಸಿಲ್ಲ. ಹಾಗಾಗಿ ಈ ಬಾರಿ ಜನರು ನನಗೆ ಮತ ಹಾಕಿ ಗೆಲ್ಲಿಸಿದ್ದಾರೆ ಎಂದರು.

 ದಾವಣಗೆರೆಯಲ್ಲಿ ಐಟಿ, ಬಿಟಿ ಕಂಪನಿಗಳನ್ನು ಸ್ಥಾಪಿಸಬೇಕು ಎಂದು ಎಸ್.‌ಎಸ್.‌ಮಲ್ಲಿಕಾರ್ಜುನ್‌ ಅವರ ಕನಸು ಇದೆ. ನಾನು ಸಂಸತ್‌ ಸದಸ್ಯೆ ಆಗಿದ್ದೇನೆ, ರಾಜ್ಯದ ಕಾಂಗ್ರೆಸ್‌ ಸರ್ಕಾರ ನಮ್ಮ ಬೆಂಬಲಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮಲ್ಲಿಕಾರ್ಜುನ್‌ ಆವರು ಇದ್ದಾರೆ, ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಕಾಂಗ್ರೆಸ್‌ ಪಕ್ಷದ ಮುಖಂಡರು ಕಾರ್ಯಕರ್ತರ ಬೆಂಬಲ ಇರುವುದರಿಂದ ದಾವಣಗೆರೆಯಲ್ಲಿ ನೂರಕ್ಕೆ
ನೂರರಷ್ಟು ಐಟಿ, ಬಿಟಿ ಸ್ಥಾಪಿಸಲು ಸ್ಥಾಪಿಸಲು ಶ್ರಮಿಸುತ್ತೇವೆ ಎಂದು ಭರವಸೆಯ ಮಾತುಗಳನ್ನು ಆಡಿದರು.

 ಜನರು ನನಗೆ ಮತ ಹಾಕಿ ಗೆಲ್ಲಿಸಿದ್ದರಿಂದ ಸಂಸತ್‌ ನಲ್ಲಿ ಕೂರುವ ಅವಕಾಶ ಸಿಕ್ಕಿದೆ. ಸಂಸತ್‌ ಕಲಾಪದಲ್ಲಿ ಜನರ ಸಮಸ್ಯೆ ಕುರಿತು ಮಾತನಾಡಲು ಯತ್ನಿಸುತ್ತೇನೆ. ಇನ್ನು ಸಂಸದರ ಪ್ರಮಾಣ ವಚನ ಪ್ರಕ್ರಿಯೆ ಆರಂಭವಾಗಿಲ್ಲ. ಇದೇ ಜೂನ್‌ 24ರಿಂದ ಜುಲೈ 3ರವರೆಗೆ
ಸಂಸತ್‌ ಅಧಿವೇಶನ ನಡೆಯಲಿದೆ. ಸಂಸತ್ತಿನಲ್ಲಿ ದೇಶದ ಮೊದಲ ಪ್ರಧಾನಿ ಸೇರಿದಂತ ವಿವಿಧ ಪ್ರಧಾನಿಗಳ ಪೋಟೊ ನೋಡಿ ಕಣ್ತುಂಬಿಕೊಂಡು ಬಂದಿದ್ದೇನೆ. ದಾವಣಗೆರೆ ಕ್ಷೇತ್ರದ ಜನರು ಓಟಾಕಿ ನನ್ನನ್ನು ಗೆಲ್ಲಿಸಿ ಸಂಸತ್ತಿನಲ್ಲಿ ಕೂರುವಂತೆ ಮಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಜಿಲ್ಲೆಯ ಅಭಿವೃದ್ಧಿಗಾಗಿ ದುಡಿಯುತ್ತೇನೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular

Recent Comments