Saturday, October 12, 2024
Google search engine
Homeಇ-ಪತ್ರಿಕೆಕಾಡುಕೋಣ ದಾಳಿಯಿಂದ ಯಡೂರು ಗ್ರಾಮಸ್ಥರು ಹೈರಾಣು

ಕಾಡುಕೋಣ ದಾಳಿಯಿಂದ ಯಡೂರು ಗ್ರಾಮಸ್ಥರು ಹೈರಾಣು

ಹೊಸನಗರ : ತಾಲೂಕಿನ ಯಡೂರು – ಸುಳುಗೋಡು ಭಾಗದಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು ಗ್ರಾಮಸ್ಥರು ಹೈರಾಣಾಗಿದ್ದಾರೆ.

ಯಡೂರು ಮತ್ತು ಸುಳುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ಅಡಿಕೆ ತೋಟಗಳಿಗೆ ಕಾಡುಕೋಣಗಳು ನುಗ್ಗಿ ದಾಂಧಲೆ ನಡೆಸುತ್ತಿವೆ. ಕಳೆದ ಒಂದು ತಿಂಗಳಿಂದ ಜಮೀನು ರೈತ ಕಾಡುಕೋಣಗಳ ಹಾವಳಿಗೆ ತುತ್ತಾಗಿದ್ದು, ತಮ್ಮ ಬೆಳೆಗಳನ್ನು ರಕ್ಷಿಸಲು ರೈತರು ಹೆಣಗಾಡುವಂತಾಗಿದೆ. ಈ ಭಾಗದಲ್ಲಿ ಒಂಟಿಮನೆಗಳು ಹೆಚ್ಚಿದ್ದು ಮನೆಗೆ ಹೋಗಿಬರಲು ಕೂಡ ಜನರು ಭಯಪಡುವಂತಾಗಿದೆ. ವಾರದ ಹಿಂದೆ ವ್ಯಕ್ತಿಯೋರ್ವ ಮೈಮೇಲೆ ಎರಗಿ ದೂಡಿ ಕೆಡವಿದ ಘಟನೆ ಕೂಡ ನಡೆದಿದೆ ಎಂದು ಸ್ಥಳೀಯರು ಹೇಳುತ್ತಾರೆ.

ವಾರಾಹಿ ಯೋಜನಾ ಪ್ರದೇಶದ ಮಾಣಿ ಜಲಾಶಯದ ಆಚೆ ಇದ್ದ ಕಾಡುಕೋಣಗಳು ಈಚೆಗೆ ಬಂದು ರೈತರಿಗೆ ತೊಂದರೆ ಕೊಡುತ್ತಿವೆ. ಐದಾರು ಕಾಡುಕೋಣಗಳು ಇರಬಹುದು ಎಂದು ಸ್ಥಳೀಯರಾದ ಯಡೂರು ಭಾಸ್ಕರ್ ಜೋಯ್ಸ್ ತಿಳಿಸಿದ್ದಾರೆ.

ಅರಣ್ಯ ಇಲಾಖೆ ಕಾಡುಕೋಣ ಹಾವಳಿ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮಾಣಿ ಡ್ಯಾಂ ಆಚೆಯ ಕಾಡಿಗೆ ಕಾಡುಕೋಣಗಳನ್ನು ಓಡಿಸಬೇಕೆಂದು ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments