ವಿವೇಕಾನಂದರ ಚಿಂತನೆ ಅಳವಡಿಸಿಕೊಂಡಿದ್ದರೆ ಭಾರತ ಎಂದೋ ವಿಶ್ವಗುರು ಆಗುತ್ತಿತ್ತು : ವಿಜಯಾನಂದ ಸರಸ್ವತಿ

ಶಿವಮೊಗ್ಗ: ವಿವೇಕಾನಂದರ ಹಾಗೂ ಅಕ್ಕ ನಿವೇದಿತಾರ ಚಿಂತನೆಗಳನ್ನು ಭಾರತದ ವಿದ್ಯಾರ್ಥಿ ಗಳಿಗೆ ಸಮರ್ಪಕವಾಗಿ ನೀಡಿದ್ದರೆ ದೇಶ ಎಂದೋ ವಿಶ್ವಗುರು ಆಗುತ್ತಿತ್ತು ಎಂದು ಧಾರವಾಡದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವಿಜಯಾನಂದ ಸರಸ್ವತಿ ಹೇಳಿದರು.
ಯುವ ಬ್ರಿಗೇಡ್ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಇಂದು ಹಮ್ಮಿ ಕೊಂಡಿದ್ದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದರ ಸಾಹಿತ್ಯದಿಂದ ಜೀವನದಲ್ಲಿ ಆಗಾಧ ಬದಲಾವಣೆಯಾಗುತ್ತದೆ. ಆದರೆ ಅಂತಹ ಚಿಂತನೆಗಳನ್ನು ಯುವ ಪೀಳಿಗೆಗೆ ನೀಡು ವಲ್ಲಿ ನಾವು ಎಡವಿದ್ದೇವೆ. ಇನ್ನಾದರೂ ಆ ಕೆಲಸ ವಾಗಬೇಕು ಎಂದ ಅವರು, ವಿವೇಕಾ ನಂದರು ಹಾಗೂ ನಿವೇದಿತಾರ ಚಿಂತನೆಗಳು ಸಕಾರಾ ತ್ಮಕವಾದವು. ಎಂತಹ ಅಸಾಹಯಕನು ಈ ಚಿಂತನೆ ಗಳನ್ನು ಓದಿದರೆ ಹೊಸರೂಪ ಪಡೆಯು ತ್ತಾನೆ. ಅಂತಹ ಶಕ್ತಿ, ಸ್ಪೂರ್ತಿ ಅವುಗಳಲ್ಲಿದೆ ಎಂದರು.
ಭಾರತ ಅನಾಗರೀಕರ ದೇಶ ಎಂದು ತಿಳಿದಿದ್ದ ಜಗತ್ತಿಗೆ ಚಿಕಾಗೋ ಭಾಷಣದ ಮೂಲಕ ಕಣ್ಣು ತೆರೆಸಿದವರು ವಿವೇಕಾನಂದರು. ಗುಲಾಮಗಿರಿಯ ಚಿಂತನೆಯನ್ನು ಹೋಗಲಾಡಿಸಿದರು. ಸ್ತ್ರಿಶಕ್ತಿ ಜಾಗೃತಿಗಾಗಿ ಶಿಕ್ಷಣಕ್ಕೆ ಒತ್ತು ನೀಡಿದರು ಎಂದು ವಿವೇಕಾ ನಂದರ ಕೊಡುಗೆಗಳನ್ನು ಅವಲೋಕಿಸಿದರು.
ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ. ಕೆ.ಎಸ್. ನಾರಾಯಣಚಾರ್ಯ, ವಿನಯಾನಂದ ಸರಸ್ವತಿ, ನಿತ್ಯಾನಂದ ವಿವೇಕವಂಶಿ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಡಾ. ಮಹಾದೇವಸ್ವಾಮಿ ಉಪಸ್ಥಿತರಿದ್ದರು.