ಇಂದು ವಜ್ರ ಮಹೋತ್ಸವ ಆಚರಿಸುತ್ತಿರುವ ವಿಧಾನಸೌಧ ಕಟ್ಟಡವು ಇಡೀ ರಾಷ್ಟ್ರದಲ್ಲೇ ಅತಿ ದೊಡ್ಡದಾದ ಪಾರ್ಲಿಮೆಂಟ್ ಭವನಕ್ಕಿಂತ ಭವ್ಯ ಹಾಗೂ ಮಿಗಿಲಾಗಿರುವ ಕನ್ನಡ ನಾಡಿನ ಹೆಮ್ಮೆಯ ಕಟ್ಟಡ.
ಇದರ ನಿರ್ಮಾತೃ ಕೆಂಗಲ್ ಹನು ಮಂತಯ್ಯ ನವರು. ಅವರ ನಿರಂತರ ಪರಿ ಶ್ರಮದಿಂದಾಗಿ ೧೯೫೨ ರಿಂದ ೧೯೫೬ರವರೆಗೆ ಸತತ ೪ ವರ್ಷಗಳ ಕಾಲ ನಿರ್ಮಾಣವಾದ ಅತಿ ಸುಂದರ, ಶತಮಾನದ ಅಪೂರ್ವ ವಾಸ್ತು ಶಿಲ್ಪದ ಮಾದರಿ ಎಂದೇ ಗುರುತಿಸಲ್ಪಟ್ಟಿದೆ.
ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಕೆ.ಸಿ.ರೆಡ್ಡಿಯವರು ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾದರು. ಆಗ ಅಠಾರ ಕಛೇರಿ (ಈಗಿನ ಹೈಕೋರ್ಟ್ ಕಟ್ಟಡ) ಶಾಸನಸಭೆಯಾಗಿತ್ತು.
ಸದನ ನಡೆಯುವಾಗ ಶಾಸಕರನ್ನು ನೋಡಲು ಬರುತ್ತಿದ್ದ ಮತದಾರರನ್ನು ಭೇಟಿ ಮಾಡಲು ಸೂಕ್ತ ಸ್ಥಳ ಇಲ್ಲದೇ ಇರುವುದು ಮುಜುಗರಕ್ಕೆ ಕಾರಣವಾಗಿತ್ತು. ವಾಚನಾ ಲಯ ಇರಲಿಲ್ಲ. ಶಾಸಕರಿಗೆ ವಿಶ್ರಾಂತಿ ಕೊಠಡಿಗಳಿರಲಿಲ್ಲ. ಇದನ್ನು ಗಮನಿಸಿ ೧೯೫೧ ಜನವರಿ ೪ ರಂದು ಸದನದಲ್ಲಿ ಜನಪ್ರತಿನಿಧಿಗಳಿಗೆ ತಮ್ಮನ್ನು ಭೇಟಿ ಮಾಡಲು ಬರುತ್ತಿರುವ ಮತದಾರರಿಗೆ ಆಗುತ್ತಿರುವ ಅನಾನುಕೂಲ ವನ್ನು ತಪ್ಪಿಸಲು, ಶಾಸಕರಿಗೆ ಕನಿಷ್ಠ ಸೌಲಭ್ಯ ಒದಗಿಸಲು, ಮಂತ್ರಿ ಮಹೋದಯರಿಗೆ ಕೊಠಡಿ, ಕಛೇರಿಗಳನ್ನು, ವಾಚನಾಲಯ ಲಾಂಚ್‌ಗಳುಳ್ಳ ಪ್ರತ್ಯೇಕ ಶಾಸಕಾಂಗ ಕಟ್ಟಡ ನಿರ್ಮಿಸುವ ಕುರಿತು ನಿರ್ಣಯ ತೆಗೆದುಕೊಳ್ಳಲಾಯಿತು.
ಅದರನ್ವಯ ಎರಡಂಸ್ತಿನ ಕಟ್ಟಡ ನಿರ್ಮಾ ಣಕ್ಕೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಜುಲೈ ೧೪ ೧೯೫೧ರಂದು ಶಂಕುಸ್ಥಾಪನೆ ನೆರವೇರಿಸಿದರು. ಆದರೆ ಕಟ್ಟಡ ವಿನ್ಯಾಸ ದೇಶೀಯವಲ್ಲ ಎನ್ನುವ ಕಾರಣಕ್ಕೆ ಕೆಂಗಯ್ಯ ಹನುಮಂತಯ್ಯ ವಿರೋಧಿಸಿದರು.
೧೯೫೨ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದು ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿ ಆದರು.ಅದೇ ಸಮಯಕ್ಕೆ ಬೆಂಗಳೂರಿಗೆ ಭೇಟಿ ನೀಡಿದ್ದ ನಿಯೋಗ ವೊಂದು ಮುಖ್ಯಮಂತ್ರಿ ಕೆಂಗಲ್‌ರನ್ನು ಭೇಟಿ ಮಾಡಿ, ನಿಮ್ಮ ಆಡಳಿತ ಕಛೇರಿಯೂ ಸೇರಿದಂತೆ (ಈಗಿನ ಹೈಕೋರ್ಟ್ ಕಟ್ಟಡ, ಆಗಿನ ಅಠಾರ ಕಛೇರಿಯಲ್ಲಿ ರಾಜ್ಯ ಸರ್ಕಾರದ ಕಛೇರಿಗಳಿದ್ದವು). ಎಲ್ಲ ಪ್ರಮುಖ ಕಟ್ಟಡಗಳು ಐರೋಪ್ಯ ಶೈಲಿಯವೇ , ನಿಮ್ಮ ವಾಸ್ತು ಶಿಲ್ಪ ಎಲ್ಲಿದೆ ? ಅಂದು ಕೇಳಿತಂತೆ !
ಪರಂಪರೆಯ ಅರಿವು ಜೊತೆಗೆ ಸೌಂದರ್ಯ ಪ್ರe ಹೊಂದಿದ್ದ ಕೆಂಗಲ್ ಅವರು ಮುಖ್ಯ ಮಂತ್ರಿಯಾದ ಮರು ದಿವಸವೇ ಭಾರತೀಯ ವಾಸ್ತುಶಿಲ್ಪ ಬಳಸಿಯೇ ಶಾಸಕಾಂಗ ಕಟ್ಟಡ ನಿರ್ಮಾಣವಾಗಬೇಕು. ಮೈಸೂರು ಶೈಲಿಯು ನಿಚ್ಚಳವಾಗಿ ಕಾಣಬೇಕು. ಪಾಶ್ಚಾತ್ಯ ರೀತಿ ಬೇಡ ಎಂದು ಆದೇಶ ಹೊರಡಿಸಿದ್ದರು. ಇದರ ಪರಿಣಾಮ ಇಂದು ನಾವು ವಿಧಾನ ಸೌಧ ಕಟ್ಟಡ ಗಮನಿಸಿದಾಗ ಕನ್ನಡ ನಾಡಿನ ವಾಸ್ತು ಶಿಲ್ಪ ಎದ್ದು ಕಾಣುತ್ತದೆ. ಇದಕ್ಕೆ ಕಾರಣೀಭೂತರು ಕೆಂಗಲ್ ಹನುಮಂತಯ್ಯ, ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಸಮಿತಿ ರಚಿಸಿದರು. ಸಮಿತಿಯ ವರದಿ ನೀಡಿ ೩ ಅಂತಸ್ತಿನ, ೧,೭,೪೬೦೦ ಚದರಡಿಯ ಕಟ್ಟಡ ನಮ್ಮ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲು ಶಿಫಾರಸ್ಸು ಮಾಡಿತು.
ನೆಹರು ಅವರು ೧೯೫೧ರ ಜುಲೈನಲ್ಲಿ ಅಡಿಗಲ್ಲು ಹಾಕಿದರೂ ಬದಲಾದ ನೀಲಿನಕಾಶೆಯಂತೆ ಕೆಲಸ ಆರಂಭವಾಗಿದ್ದು, ೧೯೫೨ರ ಸೆಪ್ಟೆಂಬರ್‌ನಲ್ಲಿ ಹನುಮಂತಯ್ಯನವರಿಗೆ ಕುಂತರೂ, ನಿಂತರೂ, ವಿಧಾನಸೌಧ ಕಟ್ಟಡ ನಿರ್ಮಾಣದ್ದೇ ಧ್ಯಾನವಾಗಿತ್ತು. ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು೪ ವರ್ಷ ಬೇಕಾಯಿತು. ಕಟ್ಟಡ ಪೂರ್ಣಗೊಳ್ಳಳು ೧೮೪ ಲಕ್ಷ ಖರ್ಚಾಯಿತು ಎಂದು ಕೆಂಗಲ್ ಹನುಮಂತಯ್ಯ ಹೇಳಿಕೊಂಡಿದ್ದರು.
ಅಷ್ಟೊಂದು ಪ್ರಾಮಾಣಿಕರಾಗಿದ್ದ ಹನುಮಂತಯ್ಯನವರ ಮೇಲೆ ಸ್ವಪಕ್ಷೀಯರೇ ಭ್ರಷ್ಟಾಚಾರದ ಆರೋಪ ಮಾಡಿದರು.
ಪರಿಣಾಮ ತನಿಖೆಗಾಗಿ ಸಮಿತಿ ರಚಿಸಲಾಯಿತು. ವಿಧಾನಸೌಧ ನಿರ್ಮಾಣದ ಶಿಲ್ಪಿಯಾಗಿದ್ದ ಕೆಂಗಲ್‌ರು ಉದ್ಘಾಟನೆ ವೇಳೆಗೆ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ್ದರು.
ತಾತ್ಕಾಲಿಕ ಮುಖ್ಯಮಂತ್ರಿಯಾಗಿದ್ದ ಕಡಿದಾಳು ಮಂಜಪ್ಪನವರು ಹೊಸ ಕಟ್ಟಡದಲ್ಲಿ ಮುಖ್ಯಮಂತ್ರಿಯಾಗಿ ಆಸೀನರಾದರು.
೮-೧೦ ವರ್ಷಗಳಾದರೂ ಮುಗಿಸಲು ಅಸಾಧ್ಯವಾಗಿದ್ದ ಕಟ್ಟಡವನ್ನು ಕೇವಲ ೪ ವರ್ಷಗಳಲ್ಲೇ ಪೂರ್ಣಗೊಳಿಸಿದ ಕೀರ್ತಿ ಕೆಂಗಲ್ ಹನುಮಂತಯ್ಯನವರಿಗೆ ಸಲ್ಲುತ್ತದೆ.ಹೀಗಾಗಿ ವಿಧಾನಸೌಧದ ಕಟ್ಟಡ ಇರುವವರೆಗೂ ಕೆಂಗಲ್ಲರ ಹೆಸರು ಅಜರಾಮರವಾಗಿರುತ್ತದೆ.
ವಿಧಾನಸೌಧದ ವೈಶಿಷ್ಠ್ಯ
ವಿಧಾನಸೌಧ ಉತ್ತರ, ದಕ್ಷಿಣ ೭೨೦ ಅಡಿ,ಪೂರ್ವ-ಪಶ್ಚಿಮ ೩೬೦ ಅಡಿ ಇದೆ. ಒಳ ಅಂಗಳದ ವಿಸ್ತೀರ್ಣ ೨೩೦೨೩೦. ಕಟ್ಟಡದ ಅಡಿಪಾಯ ೧,೩೨೪ ಲಕ್ಷ ಚದರಡಿ ಒಟ್ಟು ಮೂರಂಸ್ತಿನ ಕಟ್ಟಡ ೫.೫ ಲಕ್ಷ ಚದರಡಿ ಇದೆ. ಕಟ್ಟಡದ ಎತ್ತರ ೧೫೦ ಅಡಿ ಇದೆ.
ನೆಲಮಾಳಿಗೆಯಲ್ಲಿ ೧೩೨ ೧೨೦ ಅಡಿಯ ಬ್ಯಾಂಕ್ವೆಟ್ ಹಾಲ್ ಇದೆ. ಪತ್ರಾಗಾರವಿದೆ. ಉಪಹಾರ ಗೃಹವಿದೆ. ಪ್ರತಿ ಮಹಡಿಗೂ ೪೦ರಿಂದ ೪೫ ಕೊಠಡಿಗಳಿವೆ.
ಒಂದನೆಯ ಮಹಡಿಯಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್‌ಗಳ ಸುಸಜ್ಜಿತ, ವಿಶಾಲವಾದ ಸಭಾಂಗಣಗಳಿವೆ. ದೊಡ್ಡದಾದ ಈ ಸಭಾಂಗಣದ ಮಧ್ಯೆ ಒಂದೂ ಕಂಬ ಇಲ್ಲದಿರುವುದು ವೈಶಿಷ್ಟ್ಯ ಪೂರ್ಣಸಂಗತಿ.
೩ನೇ ಮಹಡಿಯಲ್ಲಿ ಮುಖ್ಯಮಂತ್ರಿಗಳ ಕಛೇರಿ, ಕ್ಯಾಬಿನೆಟ್ ಹಾಲ್, ಸಮ್ಮೇಳನ ಸಭಾಂಗಣವಿದೆ.ಮುಖ್ಯಮಂತ್ರಿಯ ಕೊಠಡಿಯ ಬಾಗಿಲು ಶ್ರೀಗಂಧದ್ದು ಅಪರೂಪದ ಕುಸುರಿ ಕಲೆ ಕೆತ್ತನೆ ಇದೆ.
ಮಹಾದ್ವಾರದ ಮುಂದೆ ಬೃಹತ್ತಾದ ೪೦ ಅಡಿ ಎತ್ತರದ ೧೨ ಕಲ್ಲಿನ ಕಂಬಗಳಿವೆ. ವಿಧಾನಸೌಧಕ್ಕೆ ೪ ಪ್ರವೇಶ ದ್ವಾರಗಳಿದ್ದು, ಮುಖ ಮಂಟಪನನ್ನು ವಿಶಿಷ್ಠವಾಗಿ ರೂಪಿಸಲಾಗಿದೆ. ಮಧ್ಯ ಗುಮ್ಮಟದ ಶಿಖರದಲ್ಲಿ ಚಿತ್ತಾರದ ಮಧ್ಯೆ ರಾಷ್ಟ್ರೀಯ ಲಾಂಛನ ನಾಲ್ಕು ಮುಖಗಳ ಸಿಂಹದ ಶಿಲ್ಪವಿದ್ದು, ಅಶೋಕ ಚಕ್ರವೂ ಇದೆ. ಅಲ್ಲದೇ ಇಂಡೋ-ಇಸ್ಲಾಮಿಕ್ ವಾಸ್ತುಗಳನ್ನು ಒಳಗೊಂಡಿದೆ.