Tuesday, July 23, 2024
Google search engine
Homeಇ-ಪತ್ರಿಕೆಜೂ.೧೪ರಂದು ವೀರಶೈವ-ಲಿಂಗಾಯತ ಸಭಾಭವನ ಉದ್ಘಾಟನೆ

ಜೂ.೧೪ರಂದು ವೀರಶೈವ-ಲಿಂಗಾಯತ ಸಭಾಭವನ ಉದ್ಘಾಟನೆ

ಬಿ.ಎಸ್.ಯಡಿಯೂರಪ್ಪ ಸಭಾಭವನ ಉದ್ಘಾಟನೆ, ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟನೆ

ಶಿವಮೊಗ್ಗ: ಜೂ.೧೪ರಂದು ಕುವೆಂಪುನಗರ ಸವಳಂಗ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ವೀರಶೈವ-ಲಿಂಗಾಯತ ಸಭಾಭವನದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ರುದ್ರಮುನಿ ಎನ್.ಸಜ್ಜನ್ ಅವರು ಹೇಳಿದರು.

ಬುಧವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೧ಕ್ಕೆ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಮತ್ತು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಬಸವ ಮರುಳಸಿದ್ದ ಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಭಾಭವನವನ್ನು ಉದ್ಘಾಟಿಸಲಿದ್ದು, ಶಾಮನೂರು ಶಿವಶಂಕರಪ್ಪನವರು ಕಾರ್ಯಕ್ರಮದ ಉದ್ಘಾಟನೆಯನ್ನುನೆರವೇರಿಸಲಿದ್ದಾರೆ. ರುದ್ರಮಿನಿ ಎನ್.ಸಜ್ಜನ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮಕ್ಕೆ ನೂತನ ಸಂಸದ ಬಿ.ವೈ.ರಾಘವೇಂದ್ರ, ಸಚಿವರಾದ ಬಿ.ಈಶ್ವರ ಖಂಡ್ರೆ, ಶಾಸಕರಾದ ಬಿ.ಕೆ.ಸಂಗಮೇಶ್‌, ಎಸ್.ಎನ್.ಚನ್ನಬಸಪ್ಪ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ಉಪಾಧ್ಯಕ್ಷ ಎಂ.ಪಿ.ಆನಂದ ಮೂರ್ತಿ, ಕಾರ್ಯಾಲಯ ಕಾರ್ಯದರ್ಶಿ ಚಂದ್ರಶೇಖರ ತಳಗಿಹಾಳ, ಮಹಿಳಾ ಘಟಕದ ಅಧ್ಯಕ್ಷೆ ಸರಳ ಕರಿಬಸಪ್ಪ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments