Thursday, December 5, 2024
Google search engine
Homeಇ-ಪತ್ರಿಕೆನ.10 ರಂದು ಜಿ.ಎಸ್.ಬಿ ಸಮಾಜದ  ವಿವಿಧ ಕಾರ್ಯಕ್ರಮ

ನ.10 ರಂದು ಜಿ.ಎಸ್.ಬಿ ಸಮಾಜದ  ವಿವಿಧ ಕಾರ್ಯಕ್ರಮ


ಪತ್ರಿಕಾಗೋಷ್ಟಿಯಲ್ಲಿ ವೇದಿಕೆಯ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಮಾಹಿತಿ

ಶಿವಮೊಗ್ಗ : ನ.10 ರಂದು ಶಿವಮೊಗ್ಗದ ಗೋಪಾಳದ ಬಂಟರ ಭವನದಲ್ಲಿ ಪೂಜ್ಯ ಶ್ರೀಪರ್ತಗಾಳಿ ಜೀವೋತ್ತಮ ಮಠಾಧೀಶರ ದಿವ್ಯ ಉಪಸ್ಥಿತಿಯಲ್ಲಿ ಜಿ.ಎಸ್.ಬಿ.ಸಮಾಜ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ  ಗೌಡ ಸಾರಸ್ವತ ಬ್ರಾಹ್ಮಣ ಸಮಾಜ(ರಿ.,)ಶಿವಮೊಗ್ಗ ಸಹಯೋಗದೊಂದಿಗೆ ಜಿ.ಎಸ್.ಬಿ ವಿದ್ಯಾರ್ಥಿ ವೇತನ ವಿತರಣೆ, ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆ, ಶೈಕ್ಷಣಿಕ ಪ್ರೇರಣಾ ಕಾರ್ಯಗಾರ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಕುಟುಂಬ ಚೈತನ್ಯ ನಿಧಿಯ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆಯ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ತಿಳಿಸಿದರು.


ಗುರುವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನ.10 ರಂದು ಬೆಳಗ್ಗೆ ಮಲ್ಯಾಡ್ ಕ್ಯಾನ್ಸ್‍ರ್ ಆಸ್ಪತ್ರೆಯ ಸಂಸ್ಥಾಪಕರಾದ ಡಾ. ನರೇಂದ್ರ ಭಟ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಾಗರದ ಖ್ಯಾತ ಉದ್ಯಮಿ ಶಿವಾನಂದ್ ಭಂಡಾರ್‍ಕರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಆಕಾಶ್ ಎಂಟರ್‍ಪ್ರೈಸಸ್‍ನ ಸಂಸ್ಥಾಪಕರಾದ ರವೀಂದ್ರ ನಾಯಕ್, ಕುಮುಟದ ಕೊಂಕಣ್ ಎಜ್ಯುಕೇಷನ್ ಟ್ರಸ್ಟ್‍ನ ಕಾರ್ಯದರ್ಶಿ ಮುರಳೀಧರ್ ಪ್ರಭು, ಮಂಗಳೂರಿನ ಖ್ಯಾತ ಲೆಕ್ಕ ಪರಿಶೋಧಕರಾದ ಎಸ್.ಎಸ್.ನಾಯಕ್, ದಿ ಅಕಾಡೆಮಿ ಸಿಟಿ ಇದರ ನಿರ್ದೇಶಕರಾದ ನಿತಿನ್ ಭಟ್ ಭಾಗವಹಿಸಲಿದ್ದಾರೆ.

ಬೆಳಿಗ್ಗೆ 10.00 ಗಂಟೆಯಿಂದ 11.30 ರವರೆಗೆ ಆರ್‍ಎನ್‍ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾದ ಡಾ. ಸುಧೀರ್ ಪೈ ಕೆ.ಎಲ್, ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡುವರು. ಶೈಕ್ಷಣಿಕ ಮತ್ತು ವೃತ್ತಿ ಪ್ರೇರಣಾ ಕಾರ್ಯಗಾರವನ್ನು ಶ್ರೀಶಾ ಶೈಕ್ಷಣಿಕ ಸಮೂಹ ಸಂಸ್ಥೆಗಳ  ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ನಡೆಸಲಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿರುವ ಅವಕಾಶಗಳು ಮತ್ತು ಸವಾಲುಗಳು ಹಾಗೂ ವೃತ್ತಿ ಮತ್ತು ಉದ್ಯಮಶೀಲತೆಯಲ್ಲಿರುವ ವಿಫುಲ ಅವಕಾಶಗಳ ಬಗ್ಗೆ ಪ್ರೇರಣಾದಾಯಿ ನುಡಿಗಳನ್ನಾಡಲಿರುವರು ಎಂದರು.

ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ವಿದ್ಯಾಭ್ಯಾಸದಲ್ಲಿ ರ್ಯಾಂಕ್ ವಿಜೇತರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೂರರ ಒಳಗಿನ ರ್ಯಾಂಕ್ ಸಾಧನೆಗೈದ ಪ್ರತಿಭಾನ್ವಿತರಿಗೆ, ಐಎಎಸ್, ಐಪಿಎಸ್, ಐಆರ್‍ಎಸ್, ಕೆಎಎಸ್ ಮೊದಲಾದ ಸಾರ್ವಜನಿಕ ಆಡಳಿತಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾದವರಿಗೆ, ಪಿಹೆಚ್.ಡಿ. ಮತ್ತು ಸಿಐ ಪದವಿಯಲ್ಲಿ ಉತ್ತೀರ್ಣರಾದವರಿಗೆ ಪ್ರತಿಭಾ ಪುರಸ್ಕಾರ ನಡೆಯಸಲಾಗುವುದು ಎಂದರು.

ಬೆಳಿಗ್ಗೆ 8.45 ರಿಂದ ಸಂಜೆ 4.30 ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಜಿಎಸ್‍ಬಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದರು.


ಪತ್ರಿಕಾಗೋಷ್ಟಿಯಲ್ಲಿ ವೇದಿಕೆಯ ಸಂಚಾಲಕರಾದ ಆರ್.ವಿವೇಕಾನಂದ ಶೆಣೈ, ಅಧ್ಯಕ್ಷರಾದ ಸತೀಶ್ ಹೆಗಡೆ, ಶಿವಮೊಗ್ಗ ಗೌಡಸಾರಸ್ವತ ಸಮಾಜದ ಅಧ್ಯಕ್ಷರಾದ ಭಾಸ್ಕರ್ ಜಿ.ಕಾಮಂತ್, ವಿದ್ಯಾ ಪೋಷಕ ನಿಧಿ ಶಿವಮೊಗ್ಗ ಜಿಲ್ಲೆಯ ಸಂಯೋಜಕರಾದ ಮಣ್ಣೂರು ಪ್ರಕಾಶ್ ಪ್ರಭು, ಸಹ ಸಂಯೋಜಕ ಹಾರಾಡಿ ರಾಜೇಂದ್ರ ಪೈ, ಪ್ರಮುಖರಾದ ಸಿದ್ದಾಪುರ ವಾಸುದೇವ ಪೈ, ವಿವೇಕಾನಂದ ನಾಯಕ, ಶ್ರೀಕಾಂತ್ ಕಾಮಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಾಣೂರು ನರಸಿಂಹ ಕಾಮತ್, ವೇದಿಕೆಯ ಕಾರ್ಯದರ್ಶಿ :

ಎಸ್‍ಎಲ್‍ಸಿ ಮತ್ತು ಮೇಲಿನ ತರಗತಿಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಜಿಎಸ್‍ಬಿ ಸಮುದಾಯದ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಶುಲ್ಕವನ್ನು ಭರಿಸಲು ಸಹಕಾರ ನೀಡಲಾಗುವುದು. ಹಾಗೂ ವೃದ್ದಾಪ್ಯ ಅನಾರೋಗ್ಯ ಇನ್ನಿತರ ಕಾರಣಗಳಿಂದ ಆರ್ಥಿಕ ಅಶಕ್ತತೆ ಇರುವ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಅರ್ಹ 50 ಜಿ.ಎಸ್.ಬಿ. ಕುಟುಂಬಗಳಿಗೆ ಪ್ರತಿತಿಂಗಳರು 1 ಸಾವಿರ ರೂ. ಮಾಸಾಶನದ ಕುಟುಂಬ ಚೈತನ್ಯ ನಿಧಿ ಯೋಜನೆಗೆ ಚಾಲನೆ ನೀಡಲಾಗುವುದು.

RELATED ARTICLES
- Advertisment -
Google search engine

Most Popular

Recent Comments