ಶಿವಮೊಗ್ಗ : ಬೆಂಗಳೂರಿನಲ್ಲಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿಯಲ್ಲಿ ಸೂಪರಿಂಡೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಶಿವಮೊಗ್ಗ ಮೂಲದ ಚಂದ್ರಶೇಖರ್ ಅವರು ಮೇ. ೨೬ ರಂದು ಭಾನುವಾರ ಶಿವಮೊಗ್ಗದ ವಿನೋಬನಗರದಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯೆಗೂ ಮುನ್ನ ಅವರು ಬರೆದಿಟ್ಟಿರುವ ಡೆತ್ ನೋಟ್ ಈಗ ಸುದ್ದಿಗೆ ಗ್ರಾಸವಾಗಿದ್ದು,ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ತೀವ್ರ ಆಕ್ರೋಶ ಹಿರ ಹಾಕಿದೆ,ಇದೊಂದು ಕೊಲೆ ಗಡುಕ ಸರ್ಕಾರ, ಲೂಟಿಯ ಜೊತೆಗೆ ಅಧಿಕಾರಿಗಳ ಜೀವವನ್ನು ಬಲಿ ಪಡೆಯಲು ಆರಂಭಿಸಿರುವುದು ಕಾಂಗ್ರೆಸ್ ಸರ್ಕಾರದ ಆಡಳಿತದ ಅಸಲಿ ಸಾಧನೆ ಆಗಿದೆ ಕಿಡಿಕಾರಿದೆ.
ಇನ್ನು ಎಂಪಿಎಂ ನಲ್ಲಿ ಸ್ಯಾಲರ್ ಡಿಪಾರ್ಟ್ ಮೆಂಟ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ ಚಂದ್ರಶೇಖರ್ (52) ಅವರು ಅಲ್ಲಿಂದ ವಾಲ್ಮೀಕಿ ಅಭಿವೃದ್ದಿ ನಿಮಗಕ್ಕೆ ಸ್ಥಳಾಂತರ ಗೊಂಡಿದ್ದರು ಎನ್ನಲಾಗಿದೆ. ಒಂದಷ್ಟು ಕಾಲ ಶಿವಮೊಗ್ಗದಲ್ಲಿಯೇ ಕೆಲಸ ನಿರ್ವಹಿಸಿ, ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿಗೆ ಹೋಗಿದ್ದರು. ಈಗ ಅವರು ಭಾನುವಾರ ವಿನೋಬ ನಗರದ ಕೆಂಚಪ್ಪ ಲೇಔಟ್ ನಲ್ಲಿರುವ ಸ್ವಂತ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿಪತ್ತೆಯಾಗಿದ್ದಾರೆ.
ಅವರು ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆನ್ನಲಾಗಿದ್ದು, ಅದರಲ್ಲಿರುವ ಮಾಹಿತಿ ಪ್ರಕಾರ ನಿಗಮದಲ್ಲಿ 187 ಕೋಟಿ ಹಗರಣಕ್ಕೆ ಬೇಸತ್ತು ಈ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿರಬಹುದು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮಾನಾಭ್ ಮತ್ತು ಸಂಗಡಿಗರು, ಲೆಕ್ಕಾಧಿಖಾರಿ ಪರುಶುರಾಮ್ ಹಾಗೆಯೇ ಬೆಂಗೂರಿನ ಎಂ.ಜಿ. ರಸ್ತೆಯ ಯೂನಿಯನ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಶುಚ್ಚಿತ್ವ ಅವರು ತನ್ನ ಸಾವಿಗೆ ಪ್ರಮುಖ ಕಾರಣರು ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೂ ಕಾರಣವಾಗಿದೆ.
ಆಫೀಸ್ ಅಕೌಂಟ್ ವರ್ಗಾವಣೆ ಆಗಬೇಕಿತ್ತು , ಯೂನಿಯನ್ ಬ್ಯಾಂಜ್ ನವರು ವರ್ಗಾವಣೆ ಮಾಡಲಿಲ್ಲ ಎಂಬುದಾಗಿಯೂ ಸಹ ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ. ವಿಚಿತ್ರ ಅಂದ್ರೆ ನಿಗಮದ ಅಧೀಕ್ಷಕ ಚಂದ್ರಸೇಖರ್ ಅವರು 6 ಪುಟಗಳ ಡೆತ್ ನೋಟ್ ಬರೆದು ಸಾವನ್ನಪ್ಪಿರುವುದು ಐಪಿಸಿ ಸೆಕ್ಷಬ್ 306 ಪ್ರಕರಣ ದಾಖಲಾಗಿದೆ. ಸೋಮವಾರ ಬೆಳಗ್ಗೆ ಮೃತ ಚಂದ್ರಶೇಖರ್ ನಿವಾಸಕ್ಕೆ ಪೊಲೀಸರು ಮತ್ತು ಜನಪ್ರತಿನಿಧಿಗಳು ಭೇಟಿ ಕೊಟ್ಟ ಸಂದರ್ಭದಲ್ಲಿ ಅವರ ಕುಟುಂಬದವರು ಆಕ್ರಂದನ ಮುಗಿ ಮುಟ್ಟಿತ್ತು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಚಂದ್ರಶೇಖರ್ ಅಗಲಿದ್ದು, ಕುಟುಂಬ ದಿಕ್ಕು ಕಾಣದೆ ಕಂಗಾಲಾಗಿದ್ದು ದೃಶ್ಯ ಮನ ಕುಲುಕುವಂತಿತ್ತು.