Tuesday, July 23, 2024
Google search engine
Homeಇ-ಪತ್ರಿಕೆUGC-NET ಪರೀಕ್ಷೆ ರದ್ದು: ಸಿಬಿಐ ತನಿಖೆಗೆ ಆದೇಶ

UGC-NET ಪರೀಕ್ಷೆ ರದ್ದು: ಸಿಬಿಐ ತನಿಖೆಗೆ ಆದೇಶ

ಹೊಸದಿಲ್ಲಿ:  ಮಂಗಳವಾರ ನಡೆದ ಯುಜಿಸಿ-ಎನ್ ಇಟಿ (NET) ಪರೀಕ್ಷೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.

ರಾಷ್ಟ್ರೀಯ ಸೈಬರ್ ಕ್ರೈಮ್ ಥ್ರೆಟ್ ಅನಾಲಿಟಿಕ್ಸ್ ಘಟಕ ನೀಡಿದ ಮಾಹಿತಿ ಅನುಸಾರ  ಜೂ.18ಕ್ಕೆ ನಡೆದ ಪರೀಕ್ಷೆ ಅಕ್ರಮ ನಡೆದಿರುವುದು ಸ್ಪಷ್ಟವಾಗಿರುವುದರಿಂದ ಪರೀಕ್ಷೆಗಳನ್ನು ರದ್ದು ಮಾಡಿ, ಸಿಬಿಐ ತನಿಖೆಗೆ ಆದೇಶಿಸಲಾಗಿದೆ.

ಫಲಿತಾಂಶದ ಅಕ್ರಮಗಳಿಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಅಭ್ಯರ್ಥಿ ಅನುರಾಗ್ ಯಾದವ್, ತನಗೆ ಒದಗಿಸಲಾದ ಅಕ್ರಮ ಪ್ರಶ್ನೆ ಪತ್ರಿಕೆಯು ನಿಜವಾದ ಪರೀಕ್ಷೆಯ ಪ್ರಶ್ನೆ ಪತ್ರಿಕೆಗೆ ಹೋಲಿಕೆಯಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ.

ಬಿಹಾರದ ದಾನಾಪುರ ಟೌನ್ ಕೌನ್ಸಿಲ್ (ದಾನಾಪುರ ನಗರ ಪರಿಷತ್) ನಲ್ಲಿ ನಿಯೋಜಿಸಲಾದ ಎಂಜಿನಿಯರ್ ನ ಸೋದರಳಿಯ 22 ವರ್ಷದ ಯಾದವ್ ತಪ್ಪೊಪ್ಪಿಗೆ ಪತ್ರದಲ್ಲಿ, ಪರೀಕ್ಷೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತನ್ನ ಸಂಬಂಧಿ ಸಿಕಂದರ್ ಪ್ರಸಾದ್ ಯಡವೇಂದು ಹೇಳಿದ್ದಾರೆ ಎಂದು ಹೇಳಿದರು.

ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಮತ್ತು ಜೂನಿಯರ್ ಸಂಶೋಧನಾ ಫೆಲೋಶಿಪ್‌ಗೆ ಅರ್ಹತೆಯನ್ನು  ನಡೆಸಲಾಗುತ್ತದೆ. ದೇಶಾದ್ಯಂತ ನಡೆದ ಈ ಪರೀಕ್ಷೆಗೆ 9 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು.

ಯುಜಿಸಿ-ಎನ್ ಇಟಿ ಪರೀಕ್ಷೆಗಳನ್ನು ದೇಶಾದ್ಯಂತ ವರ್ಷಕ್ಕೆ ಎರಡು ಬಾರಿ ಜೂನ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ನಡೆಸಲಾಗುತ್ತದೆ.

RELATED ARTICLES
- Advertisment -
Google search engine

Most Popular

Recent Comments