ಶಿವಮೊಗ್ಗ: ಭದ್ರಾವತಿ ತಾಲೂಕು ಗೋಣಿಬೀಡು ಗ್ರಾಮದಲ್ಲಿಮೇ ತಿಂಗಳಲ್ಲಿ ನಡೆದಿದ್ದ ರೈತ ಶ್ರೀಕಂಠ ಎಂಬುವರ ಆತ್ಮಹತ್ಯೆ ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ಮೂವರು ಆತ್ಮಹತ್ಯೆಗೆ ಕಾರಣವೆಂದು ಹೆಸರನ್ನ ಉಲ್ಲೇಖಿಸಿ ಶ್ರೀಕಂಠ ತನ್ನ ಮೊಬೈಲ್ ನಲ್ಲಿ ವಿಡಿಯೋವೊಂದು ಮಾಡಿಕೊಂಡಿರುವುದು ಈ ಎಲ್ಲಾ ಪ್ರಕರಣಕ್ಕೆ ತಿರುವು ನೀಡಿದೆ. ಇಸ್ಪೀಟ್ ಆಟಕ್ಕೆ ಬಲವಂತ ಮಾಡುತ್ತಿದ್ದ ಮೂವರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೋದಲ್ಲಿ ರೈತ ತಿಳಿಸಿದ್ದಾನೆಂದು ಮೃತ ರೈತ ಶ್ರೀಕಂಠನ ಪತ್ನಿ ಹೇಮಾ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ʼನಾನು ಮತ್ತು ಪತಿ ಶ್ರೀಕಂಠ ಬೆಂಗಳೂರಿನಲ್ಲಿ ವಾಸವಾಗಿದ್ದೆವು. ಅಲ್ಲಿನ ಶಾಲೆಯೊಂದರಲ್ಲಿ ಅಟೆಂಡರ್ ಕೆಲಸ ಮಾಡಿಕೊಂಡಿದ್ದೇನೆ. ಪತಿ ಶ್ರೀಕಂಠ ಆಟೋ ಓಡಿಸಿಕೊಂಡಿದ್ದರು.ಶಂಕರಘಟ್ಟದಲ್ಲಿ ಶ್ರೀಕಂಠರಿಗೆ ಆಸ್ತಿ ಇದ್ದು, ಮನೆ ಕಟ್ಟಲು ಇಲ್ಲಿಗೆ ಬಂದಿದ್ಧರು. ಇಸ್ಪೀಟ್ ಆಟಕ್ಕೆ ಪ್ರಚೋದಿಸುತ್ತಿದ್ದ ಮೂವರಿಂದ ಬೇಸತ್ತು ಪತಿ ಶ್ರೀಕಂಠ ನೇಣು ಹಾಕಿಕೊಂಡಿದ್ದಾರೆʼ ಎಂದು ಆರೋಪಿಸಿದ್ದಾರೆ.
ನೇಣು ಹಾಕಿಕೊಂಡ ಕಾರಣ ಪೊಲೀಸರು ಮೊಬೈಲ್ ತೆಗೆದುಕೊಂಡು ಹೋಗಿದ್ದರು. ನೀರಿನಲ್ಲಿ ಬಿದ್ದ ಕಾರಣ ಮೊಬೈಲ್ ಆನ್ ಆಗ್ತಾ ಇರಲಿಲ್ಲ. ನಂತರ ಪೊಲೀಸರು ವಾಪಾಸ್ ಕೊಟ್ಟು ಹೋದ ಬಳಿಕ ಮೊಬೈಲ್ ರಿಪೇರಿ ಮಾಡಿಸಿ ಆನ್ ಮಾಡಿದಾಗ ಒಂದು ವಿಡಿಯೋ ಪತ್ತೆಯಾಗಿದೆ.ಆ ವಿಡಿಯೋದಲ್ಲಿ ಶ್ರೀಕಂಠ ಮೂವರು ಹೆಸರು ತಿಳಿಸಿದ್ದಾರೆ. ಸೀನಾ, ವಿಜಿ ಎಕ್ಕಾ ಶಂಕರ ಇವರ ಕಾಣದಿಂದ ನೇಣು ಹಾಕಿಕೊಂಡು ಸಾಯಿತ್ತಿರುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾರೆ. ಇವರೇ ಇಸ್ಪೀಟ್ ಆಡಿಸುತ್ತಾರೆ. ಸಾಲ ಕೊಡುತ್ತಾರೆ. ಈಗ ಈ ಸಾಲ ಶ್ರೀಕಂಠರಿಗೆ 6 ಲಕ್ಷ ರೂ.ಗೆ ಏರಿಕೆಯಾಗಿದೆ. ಇಷ್ಟು ಸಾಲ ಇಸ್ಪೀಟ್ ನಲ್ಲಿ ಕಳೆದಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಅಜಿತ್ ಗೌಡ ಮಾತನಾಡಿ ಭದ್ರಾವತಿಯಲ್ಲಿ ಜೂಜಾಟ ಹೆಚ್ಚಾಗಿದೆ. ಈ ಹಿಂದೆ ಶಾರದಾ ಅಪ್ಪಾಜಿ ನೇತೃತ್ವದಲ್ಲಿ ಹೋರಾಟ ಮಾಡಲಾಗಿತ್ತು. ಸ್ವಲ್ಪದಿನ ನಿಂತಿತ್ತು. ಆದರೆ ಗೋಣಿಬೀಡಿನ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದ ಆತನ ಕುಟುಂಬ ಬೀದಿಗೆ ಬಿದ್ದಿದೆ ಎಂದು ದೂರಿದರು
ಮೂವರಿಂದ ಶ್ರೀಕಂಠನ ಹತ್ಯೆಯಾಗಿದೆ. ಇವೆಲ್ಲವೂ ಇಸ್ಪೀಟ್ ಕಾರಣವಾಗಿದೆ. ಸುಮಾರು ಜನ ಊರು ಬಿಡ್ತಾ ಇದ್ದಾರೆ. ಒಂದು ವರ್ಷದಿಂದ ಮೂವರ ಆತ್ಮಹತ್ಯೆಯಾಗಿದೆ. ಇಬ್ವರ ಕೊಲೆಯಾಗಿದೆ. ಭದ್ರಾವತಿಯಲ್ಲಿ ಇಸ್ಪೀಟಿ, ಗಾಂಜಾದ ರೈಡ್ ಆಗ್ತಾ ಇಲ್ಲ. ಪೊಲೀಸರಿಗೆ ಸ್ಥಳ ತೋರಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಜಿ ಶಾಸಕ ದಿ.ಅಪ್ಪಾಜಿ ಗೌಡ ಅವರ ಪುತ್ರ ಅಜಿತ್ ಗೌಡ ಆರೋಪಿಸಿದರು.
ಇಸ್ಪೀಟ್ ಆಟವಾಡಿದವರ ವಿರುದ್ಧ ಧರಣಿ ಕೂತಿರಲಿಲ್ಲ. ನಾವು ಜೂಜಾಟಕ್ಕೆ ಬೆಂಬಲಿಸೊಲ್ಲ. ನಮ್ಮ ತಂದೆ ಶಾಸಕರಾಗಿದ್ದಾಗ ಯಾವ ಪೊಲೀಸರಿಗೆ ದಾಳಿ ನಡೆಸಬೇಡಿ ಎಂದು ಸೂಚಿಸಿಲ್ಲ. ಭದ್ರಾವತಿಯಲ್ಲಿ ಮೂಲ ಗಾಂಜಾದವರನ್ನ ಬಂಧಿಸಿಲ್ಲ. ಗಾಂಜಾ ಸಾಗಾಟ ಮತ್ತು ಮಾರಾಟಗಾರರನ್ನ ಬಂಧಿಸಲಾಗುತ್ತಿದೆ ಎಂದು ವಿವರಿಸಿದರು.