Thursday, December 5, 2024
Google search engine
Homeಇ-ಪತ್ರಿಕೆನ.12 : ಆಶಾ ಕಾರ್ಯಕರ್ತೆಯರಿಗೆ ತರಬೇತಿ ಮತ್ತು ಕಾರ್ಯಗಾರ : ಡಾ. ಪೃಥ್ವಿ.ಬಿ.ಸಿ

ನ.12 : ಆಶಾ ಕಾರ್ಯಕರ್ತೆಯರಿಗೆ ತರಬೇತಿ ಮತ್ತು ಕಾರ್ಯಗಾರ : ಡಾ. ಪೃಥ್ವಿ.ಬಿ.ಸಿ

‘ವಿಶ್ವ ಮಧುಮೇಹ ದಿನಾಚರಣೆ’ಯ ಅಂಗವಾಗಿ –

ಶಿವಮೊಗ್ಗ : ವಿನ್‍ಲೈಫ್, ಮೆಟ್ರೋ ಆಸ್ಪತ್ರೆ, ಡಯಾಬಿಟಿಸ್ ವೆಲ್‍ನೆಸ್ ಸೆಂಟರ್ ಹಾಘೂ ಜಿಲ್ಲಾ ಆರೋಗಹ್ಯ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಶಿವಮೊಗ್ಗ ಇವರ ಸಹಯೋಗದೊಂದಿಗೆ ‘ವಿಶ್ವ ಮಧುಮೇಹ ದಿನಾಚರಣೆ’ಯ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ತರಬೇತಿ ಮತ್ತು ಕಾರ್ಯಗಾರವನ್ನು ನ.12 ರಂದು ಬೆಳಗ್ಗೆ 1.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ವಿನ್‍ಲೈಫ್ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಮೆಟ್ರೋ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಪೃಥ್ವಿ.ಬಿ.ಸಿ ತಿಳಿಸಿದರು.

ಸೋಮವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರಿಗೆ ಹತ್ತಿರವಿರುವವರು ಆಶಾ ಕಾರ್ಯಕರ್ತೆಯರು. ಹಾಗಾಗಿ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ತಲುಪಿಸಿದರೆ ಅವರು ಜನರಿಗೆ ತಲುಪಿಸುತ್ತಾರೆ ಎಂಬ ಉದ್ದೇಶದಿಂದ ಈ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮಕ್ಕೆ 1000 ಜನ ಆಗಮಿಸುವ ನಿರೀಕ್ಷೆ ಇದೆ. ಡಯಾಬಿಟಿಸ್ ವಿಷಯಗಳ ಕುರಿತು ಅರಿವು ಮೂಡಿಸುವ ದೃಷ್ಟಿಯಿಂದ ಈ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿದೆ ಎಂದರು.

ಈ ಕಾರ್ಯಗಾರದಲ್ಲಿ ‘ಮಧಮೇಹ 360 ಎಲ್ಲಾ ಅಯಾಮದಲ್ಲೂ ಮಧುಮೇಹದೊಂದಿಗೆ ನೂರು ವರ್ಷ ಬಾಳಿ’ ಇದರ ಬಗ್ಗೆ ಸಮಾಲೋಚನೆ ಮತ್ತು ಉಪನ್ಯಾಸ, ‘ತುರ್ತು ಜೀವರಕ್ಷಕ ತರಬೇತಿ ಮತ್ತು ಕಾರ್ಯಗಾರ (ಸಿಪಿಆರ್)’. ಸಮತೋಲನ ಆಹಾರ ಪದ್ಧತಿ ಹಾಗೂ ‘ಮೆಡಿಕಲ್ ಯೋಗಾ ಥೆರಪಿ’ ಬಗ್ಗೆ ಡಯಾಬಿಟಿಸ್ ವೆಲ್‍ನೆಸ್ ಸೆಂಟರ್ ಮತ್ತು ವಿನ್‍ಲೈಫ್ ತಂಡವು ಸವಿಸ್ತಾರವಾಗಿ ತಿಳಿಸುವುದು ಹಾಗೂ ಸಕ್ಕರೆ ಕಾಯಿಲೆಗೆ ಸಂಬಂಧಪಟ್ಟ ಎಲ್ಲಾ ಆಧುನಿಕ ಆವಿಷ್ಕಾರವನ್ನು ಪ್ರಾತ್ಯಕ್ಷಿಕವಾಗಿ ತೋರಿಸಲಾಗುವುದು ಎಂದರು.

ತರಬೇತಿ ಮತ್ತು ಕಾರ್ಯಗಾರದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಗುರುದತ್ ಹೆಗಡೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್.ಜಿ.ಕೆ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಆರೋಗಹ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಕ್.ಕೆ.ಎಸ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಆರ್.ಸಿ.ಹೆಚ್ ಅಧಿಕಾರಿ ಡಾ. ಓ.ಮಲ್ಲಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರಾಜ್ ನಾಯ್ಕ್.ಎಲ್, ಮೆಟ್ರೋ ಆಸ್ಪತ್ರೆ ಅಧ್ಯಕ್ಷರಾದ ಟಾ. ಪಿ.ಲಕ್ಷ್ಮೀನಾರಾಯಣ ಆಚಾರ್ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಡಾ. ಪೃಥ್ವಿ.ಬಿ.ಸಿ ಅವರಿಂದ ಡಯಾಬಿಟೀಸ್‍ನ ಕುರಿತು ಸಂಪೂರ್ಣ ಮತ್ತು ನಿರಂತರ ಮಾಹಿತಿಗಾಗಿ ‘ಕ್ಯೂಆರ್ ಸ್ಕ್ಯಾನರ್ ಕೋಡ್’ನ್ನು ಬಿಡುಗಡೆ ಮಾಡಲಾಗುವುದು.

ಪತ್ರಿಕಾಗೋಷ್ಟಿಯಲ್ಲಿ ವಿನ್‍ಲೈಫ್‍ನ ನಿರ್ದೇಶಕರುಗಳಾದ ಡಾ. ಶಂಕರ್, ಡಾ. ವಇಜಯ್‍ಕುಮಾರ್ ಪಾಟೀಲ್, ರೆಹಮತ್, ಬದ್ರಿನಾಥ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments