Monday, July 22, 2024
Google search engine
Homeಇ-ಪತ್ರಿಕೆಶಿವಮೊಗ್ಗ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ, ಮೂವರು ಸಾವು

ಶಿವಮೊಗ್ಗ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ, ಮೂವರು ಸಾವು

ಶಿವಮೊಗ್ಗ: ನಗರದ ಲಯನ್ ಸಫಾರಿ ಬಳಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಮೂರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಶಿವಮೊಗ್ಗದಿಂದ ಸಾಗರದ ಕಡೆ ಸಾಗುತ್ತಿದ್ದ ಕಾರು ಮತ್ತು ಸಾಗರದಿಂದ ಶಿವಮೊಗ್ಗದ ಕಡೆ ಆಗಮಿಸುತ್ತಿದ್ದ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಸಂಬಂಧ ಗಾಯಗೊಂಡವರನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

 ಕಿಮ್ಮನೆ ರೆಸಾರ್ಟ್ ನಿಂದ ವಿದೇಶಿ ಪ್ರವಾಸಿಗರನ್ನ ಕರೆದುಕೊಂಡು ಜೋಗ ನೋಡಲು ಇನ್ನೋವ ಕಾರಿನಲ್ಲಿ ಹೊರಟಿದ್ದರು.‌ ಸ್ವಿಫ್ಟ್ ಕಾರೊಂದು ಒವರ್ ಟೇಕ್ ಮಾಡಿಕೊಂಡು ಬಂದ ವೇಳೆ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ.

ಗಿರೀಶ ಇನ್ನೋವ ಕಾರು ಚಾಲಕ ಗಾಯಗೊಂಡಿದ್ದಾರೆ. ಸಾವು ಕಂಡ ವ್ಯಕ್ತಿಯೋರ್ವರನ್ನ ಚಳ್ಳಕೆರೆಯ ಬೆಳಲಗೆರೆ ಇಮಾಮ್ ಸಾಬ್ ಎಂದು ಗುರುತಿಸಲಾಗಿದೆ. ಸ್ವಿಫ್ಟ್ ಕಾರಿನ ಚಾಲಕ ಚಂದ್ರು, ಸಿದ್ದಣ್ಣ ಮೂವರು ಸಾವು ಕಂಡಿದ್ದಾರೆ ಓಬಕ್ಕ ಎಂಬ ಮಹಿಳೆ ಗಾಯಗೊಂಡಿದ್ದು ಗಂಭೀರವಾಗಿದ್ದಾರೆ. ಇವರನ್ನ ಮೆಗ್ಗಾನ್ ಗೆ ದಾಖಲಿಸಲಾಗಿಧ.

ಈ ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments