ತೀರ್ಥಹಳ್ಳಿ: ಕೊಟ್ಟಿಗೆ ಮನೆಯಲ್ಲಿ ಇಟ್ಟಿದ್ದ 80 ಸಾವಿರ ರೂ. ಮೌಲ್ಯದ 4 ಕ್ವಿಂಟಲ್ ಸಿಪ್ಪೆಗೋಟು ಅಡಿಕೆ ಕಳವು ಪ್ರಕರಣದಲ್ಲಿ ಇಲ್ಲಿನ ಮಾಳೂರು ಪೊಲೀಸ್ ಠಾಣೆಯ ಪೊಲೀಸರು, ಆರೋಪಿಯನ್ನು ಪತ್ತೆ ಹಚ್ಚಿ ಆತನಿಂದ 80 ಸಾವಿರ ಮೌಲ್ಯದ 3 ಕ್ವಿಂಟಲ್ , 95 ಕೆಜಿ ಅಡಿಕೆ ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಕರಕುಚ್ಚಿ ಗ್ರಾಮದ ದೇವದಾಸ ಎಂಬುವರು ದೂರು ನೀಡಿ, ತಮ್ಮ ತಮ್ಮ ಕೊಟ್ಟಿಗೆ ಮನೆಯಲ್ಲಿ ಇಟ್ಟಿದ್ದ ಅಂದಾಜು 80,000 ರೂ. ಮೌಲ್ಯದ 04 ಕ್ವಿಂಟಲ್ ಸಿಪ್ಪೆಗೋಟು ಅಡಿಕೆಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಆರೋಪಿಸಿದ್ದರು,
ಈ ದೂರಿನ ಮೇರೆಗೆ ಮಾಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತ್ತೆ ಬಲೆ ಬೀಸಿದ್ದರು. ಎಸ್ಪಿ ಅವರ ನಿರ್ದೇಶನದಂತೆ ತೀರ್ಥಹಳ್ಳಿ ಉಪಾಧೀಕ್ಷಕರಾದ ಗಜನಾನನ ವಾಮನ ಸುತರ ಅವರು, ಒಂದು ತಂಡ ರಚಿಸಿದ್ದರು. ಮಾಳೂರು ವೃತ್ತ ಸಿಪಿಐ ಶ್ರೀಧರ್ ಮೇಲ್ವಿಚಾರಣೆಯಲ್ಲಿ ಪಿಎಸ್ ಐಗಳಾದ ಕುಮಾರ ಕೂರಗುಂದ, ಶಿವಾನಂದ ದರೇನವರ್ ನೇತೃತ್ವದಲ್ಲಿ ಒಂದು ತಂಡ ರಚನೆಯಾಗಿ, ಆರೋಪಿ ಪತ್ತೆಗೆ ಮುಂದಾಗಿತ್ತು.
ಈ ತನಿಖಾ ತಂಡವು ಜುಲೈ 25 ರಂದು ರಂದು ಪ್ರಕರಣದ ಆರೋಪಿ ಶಿಕಾರಿಪುರ ತಾಲ್ಲೂಕಿನ ಹರಗುವಳ್ಳಿ ಗ್ರಾಮದ ಹನುಮಂತಪ್ಪ ಜಿ.ವೈ(24) ಈತನನ್ನು ದಸ್ತಗಿರಿ ಮಾಡಿ ಆರೋಪಿಯಿಂದ ಅಂದಾಜು ಮೌಲ್ಯ 80,000 ರೂ ಮೌಲ್ಯದ 3 ಕ್ವಿಂಟಲ್ 95 ಕೆ.ಜಿ. ಅಡಿಕೆಯನ್ನು ಅಮಾನತುಪಡಿಸಿಕೊಂಡಿದೆ.ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಅಭಿನಂದಿಸಿದ್ದಾರೆ.