Tuesday, July 23, 2024
Google search engine
Homeಇ-ಪತ್ರಿಕೆಗ್ರಾ.ಪಂ.ಕಾರ್ಯದರ್ಶಿ ಹೆಗಲಿಗೆ ಜನನ-ಮರಣ ನೋಂದಣಿ ಹೊಣೆ

ಗ್ರಾ.ಪಂ.ಕಾರ್ಯದರ್ಶಿ ಹೆಗಲಿಗೆ ಜನನ-ಮರಣ ನೋಂದಣಿ ಹೊಣೆ

 ಚಿತ್ರದುರ್ಗ: ಸರ್ಕಾರ ಗ್ರಾ.ಪಂ. ಕಾರ್ಯದರ್ಶಿಗಳನ್ನು ಜನನ-ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. ಗ್ರಾ.ಪಂ.ಕಾರ್ಯದರ್ಶಿಗಳ ಹೆಗಲಿಗೆ ಜನನ-ಮರಣ ನೋಂದಣಿ ಹೊಣೆ ನೀಡಲಾಗಿದ್ದು, ಜಿಲ್ಲೆಯ ಎಲ್ಲಾ ಗ್ರಾ.ಪಂ. ಕಾರ್ಯದರ್ಶಿಗಳಿಗೆ ಈ ಕುರಿತು ತರಬೇತಿ ನೀಡಲಾಗಿದೆ. ಸಾರ್ವಜನಿಕರ ತಿಳುವಳಿಕೆಗಾಗಿ ಎಲ್ಲಾ ಗ್ರಾ.ಪಂ. ಕಾರ್ಯಾಲಯಗಳಲ್ಲಿ ಜನನ-ಮರಣ ನೋಂದಣಿ ಮಾಡಲಾಗುವುದು ಎಂದು ಫಲಕ ಅಳವಡಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಜಿಲ್ಲಾ ಮಟ್ಟದ ನಾಗರೀಕ ಪದ್ದತಿ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾ.ಪಂ.ಕಾರ್ಯದರ್ಶಿಗಳಿಗೆ ಶೀಘ್ರವೇ ಸಾಂಖ್ಯಿಕ ಇಲಾಖೆಯಿಂದ ಡಿಜಿಟಲ್ ಸಹಿ ಮಾದರಿ ಕೀ ನೀಡಲಾಗುವುದು. ಸರ್ಕಾರ ನಿರ್ಧರಿಸುವ ದಿನಾಂಕದಿAದ ಗ್ರಾ.ಪಂ.ಕಾರ್ಯಾಲಯಗಳಲ್ಲಿ ಜನನ-ಮರಣ ನೊಂದಣಿ ಆರಂಭವಾಗಲಿದೆ. ಜನನ ಹಾಗೂ ಮರಣದ ನೋಂದಣಿ ಅತ್ಯಂತ ಮುಖ್ಯವಾದ ಕೆಲಸವಾಗಿದೆ. ಯಾವುದೇ ಕಾರಣಕ್ಕೂ ನಿರ್ಲಕ್ಷö್ಯ ತೋರದೆ ಕಾರ್ಯ ನಿರ್ವಹಿಸಬೇಕು ಎಂದರು.

ಇನ್ನೂ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಇತರೆ ಆಸ್ಪತ್ರೆಗಳಲ್ಲಿ ಉಂಟಾಗುವ ಜನನ ಹಾಗೂ ಮರಣ ನೋಂದಣಿಯನ್ನು 21 ದಿನಗಳ ಕಾಲವಧಿಯಲ್ಲಿ ಮಾಡಬೇಕು. ನಿರ್ಲಕ್ಷö್ಯ ಹಾಗೂ ತಾಂತ್ರಿಕ ಕಾರಣಗಳನ್ನು ಒಡ್ಡಿ ನೋಂದಣಿ ಮಾಡದೆ ಇರಬಾರದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
  
ಸಭೆಯಲ್ಲಿ ಹೆಚ್ಚವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ಸೇರಿದಂತೆ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ತಾಲ್ಲೂಕು ಹಂತದ ಜನನ ಮರಣ ನೊಂದಣಾಧಿಕಾರಿಗಳು, ವೈದ್ಯಾಧಿಕಾರಿಗಳು, ಸಾಂಖ್ಯಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments