Sunday, September 8, 2024
Google search engine
Homeಇ-ಪತ್ರಿಕೆಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಷಿತ: ಜೆಡಿಎಸ್‌ ಜಿಲ್ಲಾಧ್ಯಕ್ಷ ಕಡಿದಾಳ್‌ ಗೋಪಾಲ್‌ ವಿಶ್ವಾಸ

ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಷಿತ: ಜೆಡಿಎಸ್‌ ಜಿಲ್ಲಾಧ್ಯಕ್ಷ ಕಡಿದಾಳ್‌ ಗೋಪಾಲ್‌ ವಿಶ್ವಾಸ


ಶಿವಮೊಗ್ಗ :  ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿಗಳಾದ ಎಸ್.ಎಲ್.ಭೋಜೇಗೌಡ ಹಾಗೂ ಡಾ.ಧನಂಜಯ ಸರ್ಜಿಯವರ ಪರವಾಗಿ ಈಗಾಗಲೇ ನಾವು ಶೇ. ೮೦ ರಷ್ಟು ಭಾಗದ ಪ್ರಚಾರ ಮುಗಿಸಿದ್ದೇವೆ. ಎಲ್ಲಾ ಕಡೆಗೂ ಒಳ್ಳೆಯ ವಾತಾವರಣ ಕಾಣುತ್ತಿದೆ, ನಮ್ಮ ಅಭ್ಯರ್ಥಿಗಳಿಬ್ಬರೂ ಗೆಲ್ಲುವುದು ಖಚಿತ ಎಂದು  ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದರು.
ಬುಧವಾರ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಎಲ್.ಬೋಜೇಗೌಡರು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಈ ಹಿಂದೆ ಹಾಲಿ ಪರಿಷತ್ ಸದಸ್ಯರು ಅವರೇ ಆಗಿದ್ದರು. ಹಾಗಾಗಿ ಶಿಕ್ಷಕರ ಸಂಪರ್ಕ ಅವರಿಗೆ ನಿರಂತರವಾಗಿದೆ. ಒಳ್ಳೆಯ ಕೆಲಸಗಳನ್ನು ಕೂಡ ಮಾಡಿದ್ದಾರೆ. ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಅವರ ಗೆಲ್ಲುವು ಅತ್ಯಂತ ಸುಲಭ ಎಂದರು.
ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿರುವ ಡಾ.ಧನಂಜಯ ಸರ್ಜಿಯವರು ಕೂಡ ಒಳ್ಳೆಯ ಕೆಲಸ ಮಾಡಿದ್ದಾರೆ. ಸಮಾಜ ಸೇವೆ ಮಾಡಿದ್ದಾರೆ. ಪದವೀಧರರ ಸಮಸ್ಯೆಗಳನ್ನು ಒಬ್ಬ ವೈದ್ಯರಾಗಿ ಅರಿತುಕೊಂಡಿದ್ದಾರೆ. ಇವರು ಕೂಡ ಗೆಲ್ಲುತ್ತಾರೆ ಎಂದರು.
ಈಗಾಗಲೇ ಶೇ. ೮೦ರಷ್ಟು ಪ್ರಚಾರ ಮಾಡಿದ್ದೇವೆ. ಈಗ ತಾನೇ ಶಾಲೆಗಳು ಆರಂಭವಾಗಿವೆ. ನಮ್ಮ ಅಭ್ಯರ್ಥಿಗಳು ಶಾಲೆಗಳಿಗೆ ಹೋಗಿ ಮತಯಾಚನೆ ಮಾಡಲಿದ್ದಾರೆ. ಒಟ್ಟಾರೆ ಇಬ್ಬರು ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ತ್ಯಾಗರಾಜ್, ರಾಮಕೃಷ್ಣ, ದೀಪಕ್‌ಸಿಂಗ್, ಗಂಧದ ಮನೆ ನರಸಿಂಹ, ಅಬ್ದುಲ್‌ವಾಜೀದ್, ದಾದಪೀರ್, ಸಿದ್ದಪ್ಪ, ವಿನಯ್, ಗೋಪಿ ಮುಂತಾದವರು ಇದ್ದರು.

……………………….
ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಚಾರ ಮಿತಿಮೀರಿದೆ. ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಅಧಿಕಾರಿಗಳು ಆತ್ಮಹತ್ಯೆಯ ದಾಳಿ ತುಳಿಯುತ್ತಿದ್ದಾರೆ. ಪೊಲೀಸ್ ಇಲಾಖೆಯ ಮೇಲೆಯೇ ದಾಳಿಗಳು ನಡೆಯುತ್ತಿವೆ. ಸರ್ಕಾರದ ಖಜಾನೆ ಬರಿದಾಗಿದೆ. ಇವೆಲ್ಲವೂ ನಮಗೆ ಅನುಕೂಲಕರವಾದ ವಾತಾವರಣ ಕಲ್ಪಿಸಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ.

­-ಕೆ.ಬಿ.ಪ್ರಸನ್ನಕುಮಾರ್, ಮಾಜಿ ಶಾಸಕ

RELATED ARTICLES
- Advertisment -
Google search engine

Most Popular

Recent Comments