Saturday, October 12, 2024
Google search engine
Homeಅಂಕಣಗಳುಲೇಖನಗಳುರಾಜ್ಯದಲ್ಲಿ ಸರಕಾರ ಇಲ್ಲದಂತಹ ಪರಿಸ್ಥಿತಿ

ರಾಜ್ಯದಲ್ಲಿ ಸರಕಾರ ಇಲ್ಲದಂತಹ ಪರಿಸ್ಥಿತಿ

ಶಿವಮೊಗ್ಗ : ರಾಜ್ಯದಲ್ಲಿ ಚುನಾವಣೆ ಆದ ನಂತರ ಸರಕಾರವೇ ಇಲ್ಲವೆನೋ ಎಂಬ ಪರಿಸ್ಥಿತಿ ಇದೆ. ಅಧಿಕಾರಿಗಳು ಆಡಿದ್ದೇ ಆಟ ಎಂಬಂತಾಗಿದೆ. ಸಚಿವ ಸಂಪುಟ ಆದಷ್ಟು ಶೀಘ್ರವಾಗಿ ರಚನೆ ಆಗಬೇಕು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಳಂಬವಾ ದರೂ ಸಚಿವ ಸಂಪುಟ ರಚನೆಯಾ ಗುತ್ತಿದೆ ಎಂಬುದು ಒಂದು ರೀತಿಯ ಸಮಾಧಾನದ ವಿಷಯ. ಏಕೆಂದರೆ ಸಿಎಂ ಅಧಿಕಾರ ಸ್ವೀಕಾರ ಮಾಡುವ ಸಂದರ್ಭದಲ್ಲಿ ಅಥವಾ ಮರುದಿನ ಸಚಿವರು ಪ್ರಮಾಣ ವಚನ ಸ್ವೀಕರಿಸುವುದು ಸಾಮಾನ್ಯ. ಆದರೆ ಸರಕಾರ ಅಸ್ತಿತ್ವಕ್ಕೆ ಬಂದು ಇಷ್ಟು ದಿನ ವಾದರೂ ಸಂಪುಟ ರಚನೆಯಾಗದಿ ರುವುದು ಜನರಿಗೆ ಒಂದು ರೀತಿಯ ಆಘಾತ ಉಂಟು ಮಾಡಿದೆ ಎಂದರು.
ಸಮ್ಮಿಶ್ರ ಸರ್ಕಾರದಲ್ಲಿ ಹಲವು ಅತೃಪ್ತ ಶಾಸಕರಿದ್ದಾರೆ. ಸಂಪುಟ ರಚನೆಯಾದ ನಂತರ ಎಷ್ಟು ಜನ ಕಾಂಗ್ರೆಸ್ ನಲ್ಲಿ ಉಳಿಯುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ ಎಂದು ಇಡೀ ರಾಜ್ಯದ ಜನ ಹೇಳುತ್ತಿದ್ದಾರೆ. ಆದರೂ ಸರಕಾರ ಒಳ್ಳೆಯ ಆಡಳಿತ ನೀಡಲಿ ಎಂದು ಹೇಳಿದರು.
ಸ್ವಾಮೀಜಿಗಳು ರಾಜಕೀಯ ಹೇಳಿಕೆ ನೀಡಬಾರದು ಎಂಬ ಬಸವ ರಾಜ ಹೊರಟ್ಟಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೆ.ಎಸ್.ಈಶ್ವರಪ್ಪ, ಸ್ವಾಮೀಜಿ ಗಳನ್ನು ನೇರವಾಗಿ ರಾಜಕೀಯಕ್ಕೆ ಕರೆದುಕೊಂಡು ಬಂದದ್ದೇ ಹೊರಟ್ಟಿ ಯವರು. ಕರ್ನಾಟಕದಲ್ಲಿ ವೀರಶೈವ-ಲಿಂಗಾಯಿತ ಪ್ರಶ್ನೆ ಇರಲಿಲ್ಲ. ಅನೇಕ ಸ್ವಾಮೀಜಿಗಳನ್ನು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕರೆತಂದು ರಾಜಕೀಯ ಮಾಡಲು ಯತ್ನಿಸಿದರು ಎಂದು ದೂರಿದರು.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಲಭ್ಯವಾಗದಿದ್ದರೂ ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ನಮಗೆ ಬಹುಮತ ಸಿಗುತ್ತೆ ಎಂಬ ವಿಶ್ವಾವಿತ್ತು. ಕೆಲ ಅತೃಪ್ತ ಶಾಸಕರು ನಮ್ಮ ಜತೆಗೆ ಮಾತನಾಡಿದ್ದರು. ಹಾಗಾಗಿ ಸರಕಾರ ರಚನೆಗೆ ಯಡಿಯೂರಪ್ಪ ಮುಂದಾದರು. ಆದರೆ ಗಿಳಿಯನ್ನು ಪಂಜರದಲ್ಲಿ ಕೂಡಿಟ್ಟಂತೆ ಶಾಸಕರುಗಳನ್ನು ಕೂಡಿಡಲಾಯಿತು. ನ್ಯಾಯಾಲಯ ಸಹ ೨೪ ಗಂಟೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚಿಸಿತು. ಇದರಿಂದಾಗಿ ಸರ್ಕಾರ ರಚನೆಯಿಂದ ಹಿಂದೆ ಸರಿಯಲಾಯಿತು ಎಂದರು.
ಕೇಂದ್ರ ಸರ್ಕಾರದ ವಿರುದ್ದ ಉಡುಪಿ ಪೇಜಾವರ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಗಂಗಾನದಿ ಶುದ್ದೀಕರಣ ಮತ್ತು ವಿದೇಶದಲ್ಲಿನ ಕಪ್ಪು ಹಣ ದೇಶಕ್ಕೆ ವಾಪಾಸ್ ತರುವ ಕುರಿತು ಶ್ರೀಗಳು ಕೇಂದ್ರ ಸರ್ಕಾರದ ಮೇಲೆ ಹೆಚ್ಚಿನ ನಿರೀಕ್ಷೆ ಹೊಂದಿದ್ದರು. ಹಾಗಾಗಿ ಅಸಮಾಧಾನ ವ್ಯಕ್ತಪಡಿಸಿರುವ ಸಾಧ್ಯತೆ ಇದೆ. ಶ್ರೀಗಳೊಂದಿಗೆ ಕುರಿತು ಮಾತುಕತೆ ನಡೆಸಲಿದ್ದೇನೆ ಎಂದರು.
ಕಪ್ಪು ಹಣವನ್ನು ಹೊರತರಲು ನೋಟು ಅಮಾನ್ಯೀಕರಣ ಮಾಡಿ ದಾಗ, ಐಟಿ ದಾಳಿ ನಡೆದಾಗ ರಾಜಕಾರಣಿಗಳ ಮನೆಯಲ್ಲಿ, ದೊಡ್ಡ ದೊಡ್ಡ ಉದ್ದಿಮೆದಾರರ ಮನೆಯಲ್ಲಿ ಸಾವಿರಾರು ಕೋಟಿ ರೂ. ಹಣ ದೊರೆತಿದೆ. ಈ ಹಿಂದೆ ಯಾವ ಸರ್ಕಾರವು ಇಂತಹ ಕೆಲಸ ನಡೆಸಿರಲಿಲ್ಲ. ಪೇಜಾವರ ಶ್ರೀಗಳಿಗೆ ಈ ಕುರಿತು ಮಾಹಿತಿ ನೀಡಲು ಮತ್ತೊಮ್ಮೆ ಮಾತುಕತೆ ನಡೆಸಲಿದ್ದೇನೆ ಎಂದು ತಿಳಿಸಿದರು.
ವಿಧಾನ ಪರಿಷತ್‌ನ ಆರು ಕ್ಷೇತ್ರಗಳಿಗೆ ನಡೆಯಲಿರುವ ಚುನಾ ವಣೆಯಲ್ಲಿ ಬಿಜೆಪಿ ಜಯಗಳಿಸುವುದು ನಿಶ್ಚಿತ ಎಂದರು.

RELATED ARTICLES
- Advertisment -
Google search engine

Most Popular

Recent Comments