ಸರ್ಕಾರ ಮುಸ್ಲಿಂ ಗೂಂಡಾಗಳ ಹಿಡಿತದಲ್ಲಿದೆ

ಶಿವಮೊಗ್ಗ: ಮುಸ್ಲಿಂ ಗೂಂಡಾಗಳಿಗೆ ಸರ್ಕಾರ ಹೆದರುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಕಸಾಯಿಖಾನೆಗಳ ಪರಿಶೀಲನೆಗೆ ತೆರಳಿದ ಅಧಿಕಾರಿಗಳ ಮೇಲೆ ಮತ್ತು ಅಕ್ರಮ ಗೋ ಹತ್ಯೆ ವಿರುದ್ದ ದೂರು ಕೊಡಲು ಹೋದ ನಂದನಿ ಮತ್ತಾನಿ ಮೇಲೆ ಕೆಲವು ಮುಸ್ಲಿಂ ಗೂಂಡಾಗಳು ಹಲ್ಲೆ ನಡೆಸಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಆತಂಕಕಾರಿ ಬೆಳವಣಿಗೆ ಆಗಿದ್ದು, ರಾಜ್ಯ ಸರ್ಕಾರ ಮುಸ್ಲಿಂ ಗೂಂಡಾಗಳ, ಪಾಕಿಸ್ತಾನಿ ಭಯೋತ್ಪಾದಕರ ಹಿಡಿತದಲ್ಲಿದೆ ಎಂದು ಆರೋಪಿಸಿದರು.
ಯಲಹಂಕದ ಬೆಟ್ಟದಲ್ಲ್ಲಿ ನಿನ್ನೆ ನಡೆದ ಮತ್ತು ಅ.೧೫ರಂದು ಅಕ್ರಮ ಗೋ ಹತ್ಯೆ ತಡೆಗೆ ಮುಂದಾದ ಮಹಿಳೆ ನಂದಿನಿ ಮತ್ತು ಅಧಿಕಾರಿಗಳ ಮೇಲೆ ಕೆಲವು ಮುಸ್ಲಿಂ ಗೂಂಡಾಗಳು ಹಾಡುಹಗಲೇ ಹಲ್ಲೆ ನಡೆಸಿದ್ದಾರೆ. ಪಾಕಿಸ್ಥಾನ ಪರ ಘೋಷಣೆ ಕೂಗಿದ್ದಾರೆ. ಅವರ ವಿರುದ್ದ ಯಾವ ಕ್ರಮ ಕೈಗೊಳ್ಳಲಾಗಿದೆ. ಎಷ್ಟು ಜನರನ್ನು ಬಂಧಿಸಲಾಗಿದೆ ಎಂಬುದನ್ನು ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಸ್ಪಷ್ಟನೆ ನೀಡಬೇಕು ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಪರಿಣಾಮವೇ ಕಲ್ಬುರ್ಗಿ, ಗೌರಿ ಲಂಕೇಶ್, ಹತ್ಯೆ ಮತ್ತು ಅಕ್ರಮ ಗೋ ಹತ್ಯೆ ತಡೆಯಲು ಹೋದ ನಂದಿನಿ ಮತ್ತಾನಿ ಎಂಬ ಹೆಣ್ಣು ಮಗಳ ಮೇಲೆ ಹಲ್ಲೆ ನಡೆದಿದೆ. ಈ ಮೂರು ಘಟನೆಗಳನ್ನು ಬಿಜೆಪಿ ಸಮಾನವಾಗಿ ಖಂಡಿಸುತ್ತದೆ. ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸುವ ಬುದ್ದಿ ಜೀವಿಗೆಳು ನಂದಿನಿ ಮತ್ತಾನಿ ಮೇಲೆ ನಡೆದಾಗ ಎಲ್ಲಿ ಹೋಗಿದ್ದಾರೆ? ಅವರನ್ನು ಹುಡುಕ ಬೇಕಾಗಿದೆ. ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣಗಳನ್ನು ಮತ್ತು ನಂದಿನಿ ಅವರ ಮೇಲಿನ ಹಲ್ಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪದಾಧಿಕಾರಿಗಳಾದ ಗಿರೀಶ್ ಪಟೇಲ್, ಎಂ ಶಂಕರ್, ಎನ್.ಜೆ.ರಾಜಶೇಖರ್, ಎಸ್.ಎನ್. ಚನ್ನಬಸಪ್ಪ, ಡಿಎಸ್ ಅರುಣ್, ಜ್ಞಾನೇಶ್ವರ್, ದೇವರಾಜು, ಅಣ್ಣಪ್ಪ, ರತ್ನಾಕರ ಶೆಣೈ, ಕೆ.ಜಿ. ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.