Sunday, September 8, 2024
Google search engine
Homeಅಂಕಣಗಳುಲೇಖನಗಳುಹಳೇ ಜೈಲು ಜಾಗ : ಮೊದಲ ಹಂತದಲ್ಲಿಯೇ ೧೮ ಎಕರೆ ಅಭಿವೃದ್ಧಿ

ಹಳೇ ಜೈಲು ಜಾಗ : ಮೊದಲ ಹಂತದಲ್ಲಿಯೇ ೧೮ ಎಕರೆ ಅಭಿವೃದ್ಧಿ

ಶಿವಮೊಗ್ಗ : ನಗರದ ಹಳೇಯ ಜೈಲು ಆವರಣವನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಗೂ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆಗಳಿಗೆ ಉಪಯೋಗಿಸುವ ದೃಷ್ಟಿಯಿಂದ ಜಾಗವನ್ನು ನೀಡುವಂತೆ ಕೋರಿ, ಶಾಸಕ ಕೆ.ಎಸ್.ಈಶ್ವ ರಪ್ಪ ಅವರು ಇಂದು ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ. ತಮ್ಮಣ್ಣ ನೇತೃತ್ವದಲ್ಲಿ ಸಭೆಯಲ್ಲಿ ಚರ್ಚೆ ನಡೆಸಿದರು.
ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ದಸರಾ ಆಚರಣೆಗೆ ಜಾಗ ಇಲ್ಲದಂತಾಗಿದೆ. ಹಳೇಯ ಜೈಲು ಮೈದಾನವನ್ನು ಸಾರ್ವಜನಿಕ ಸಮಾರಂಭಗಳನ್ನು ನಡೆಸಲು ಅನುಕೂಲವಾಗುವಂತೆ ಜಾಗವನ್ನು ಬಿಟ್ಟುಕೊಡಬೇಕೆಂದು ಶಾಸಕ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದರು.
ಮೊದಲ ಹಂತವಾಗಿ ೧೮ ಎಕರೆ ಜಾಗವನ್ನು ಇದೇ ಉದ್ದೇಶಕ್ಕೆ ಅಭಿವೃದ್ಧಿ ಪಡಿಸಲು ಇಂದು ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ನಗರಸಭೆ ಮಾಜಿ ಅಧ್ಯಕ್ಷ ಎಸ್.ಎನ್.ಚನ್ನಬಸಪ್ಪ ಮೊದಲಾದವರಿದ್ದರು.

RELATED ARTICLES
- Advertisment -
Google search engine

Most Popular

Recent Comments