Sunday, September 8, 2024
Google search engine
Homeಅಂಕಣಗಳುಲೇಖನಗಳುಸಿಐಡಿಗೆ ಪ್ರಕರಣ ವಹಿಸಲು ಪಾಲಿಕೆ ನಿರ್ಧಾರ

ಸಿಐಡಿಗೆ ಪ್ರಕರಣ ವಹಿಸಲು ಪಾಲಿಕೆ ನಿರ್ಧಾರ

ಆಶ್ರಯ ಯೋಜನೆಯಲ್ಲಿ ನಡೆದಿರುವ ಅಕ್ರಮ ಖಾತೆಗಳ ಪ್ರಕರಣವನ್ನು ಸಿಐಡಿಗೆ ವಹಿಸಲು ಮಹಾನಗರಪಾಲಿಕೆ ಸಾಮಾನ್ಯ ಸಭೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿತು.
ಮೇಯರ್ ಏಳುಮಲೈ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಮೋಹನ್ ರೆಡ್ಡಿ, ಆಶ್ರಯ ಯೋಜನೆಯಲ್ಲಿ ಖಾತೆಗಳ ಅಕ್ರಮ ನಡೆದಿದೆ. ಒಂದೇ ನಿವೇಶನ ಹಲವರಿಗೆ ಖಾತೆ ಆಗಿದೆ. ಅನುಭವಸ್ಥರೇ ಬೇರೆ ಇದ್ದಾರೆ. ಖಾತೆದಾ ರರೇ ಬೇರೆ ಆಗಿದ್ದಾರೆ. ಹೀಗೆ ಹಲವಾರು ರೀತಿಯ ಅಕ್ರಮ ನಡೆದಿವೆ ಎಂದು ದೂರಿದರು.
ಇದಕ್ಕೆ ಬಹುತೇಕ ಸದಸ್ಯರು ಧ್ವನಿಗೂಡಿಸಿ ಆಶ್ರಯ ಯೋಜನೆಗೆ ಸಂಬಂಧಿಸಿದಂತೆ ಸಾಕಷ್ಟು ಲೋಪವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಆ ಮೂಲಕ ಪ್ರಕರಣದಲ್ಲಿ ಆಗಿರುವ ಲೋಪವನ್ನು ಹೊರಗೆಳೆಯಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಮಾತನಾಡಿ, ಆಶ್ರಯ ಸಮಿತಿ ಅಧ್ಯಕ್ಷ ನಾಗಿ ಹೇಳುವುದಾದರೆ, ಇದರಲ್ಲಿ ಸಾಕಷ್ಟು ಲೋಪವಾಗಿರುವುದು ಕಂಡುಬರುತ್ತದೆ. ಆದ್ದರಿಂದ ಈ ಪ್ರಕರಣಕ್ಕೆ ಉನ್ನತ ಮಟ್ಟದ ತನಿಖೆಯಾಗುವುದು ಅವಶ್ಯಕವಾಗಿದೆ ಎಂದರು.
ಸಭೆಯಲ್ಲಿ ಮಾತನಾಡಿದ ಬಹುತೇಕ ಸದಸ್ಯರು, ಇಡೀ ಪ್ರಕರಣವನ್ನು ಸಿಐಡಿಗೆ ವಹಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮೇಯರ್ ಏಳುಮಲೈ ಸದಸ್ಯರ ಅಭಿಪ್ರಾಯದಂತೆ ಇಡೀ ಪ್ರಕರಣವನ್ನು ಸಿಐಡಿಗೆ ವಹಿಸಲಾಗುವುದು ಎಂದು ಹೇಳಿದರು. ಇದರಿಂದಾಗಿ ಈ ವಿಷಯಕ್ಕೆ ತೆರೆ ಬಿದ್ದಿತು.
ಪಾಲಿಕೆ ಉಪ ಆಯುಕ್ತ ನಾಗರಾಜ್‌ರವರು ಅಕ್ರಮ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಸದಸ್ಯ ಮಾಲತೇಶ್ ನೇರ ಆರೋಪ ಮಾಡಿದರು. ಇದಕ್ಕೆ ನಾಗರಾಜ್ ಕಂಕಾರಿ, ಪಾಲಾಕ್ಷಿ ಸೇರಿದಂತೆ ಬಹುತೇಕ ಸದಸ್ಯರು ಧ್ವನಿಗೂಡಿಸಿ ಉಪ ಆಯುಕ್ತರು ಅಕ್ರಮ ಖಾತೆಗಳನ್ನು ನಿರಂತರವಾಗಿ ಮಾಡಿ ಕೊಡುತ್ತಿದ್ದಾರೆ ಎಂದು ದೂರಿದರು.
ನಾಗರಾಜ್ ಕಂಕಾರಿ ಮಾತನಾಡಿ, ರಾಜೇಂದ್ರ ನಗರದಲ್ಲಿ ನೀರಾವರಿ ಇಲಾಖೆಗೆ ಸೇರಿದ ಜಾಗವನ್ನು ಉಪ ಆಯುಕ್ತ ನಾಗರಾಜ್‌ರವರು ಖಾಸಗಿ ವ್ಯಕ್ತಿಯೊಬ್ಬರಿಗೆ ಖಾತೆ ಮಾಡಿಕೊಟ್ಟಿ ದ್ದಾರೆ. ಇದನ್ನು ಸಾಮಾನ್ಯ ವ್ಯಕ್ತಿಯೂ ಸಹ ಸರ್ಕಾರಿ ಜಾಗ ಎಂದು ಹೇಳಬಲ್ಲಂತಹ ಜಾಗವಾಗಿದೆ. ಅಂತಹ ಜಾಗವನ್ನೂ ಕೂಡಾ ಉಪ ಆಯುಕ್ತರು ಖಾತೆ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಉಪ ಆಯುಕ್ತರ ನಡೆಸಿರುವಂತಹ ಖಾತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಕಡತಗಳನ್ನು ತರಿಸಿ, ಪರಿಶೀಲನೆ ನಡೆಸಬೇಕು. ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳ ಬೇಕೆಂದು ಸದಸ್ಯರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್, ಸದಸ್ಯರು ಗಂಭೀರ ಆರೋಪ ಮಾಡುತ್ತಿ ದ್ದಾರೆ. ಷತಾವು ಅಕ್ರಮ ಖಾತೆ ಮಾಡಿ ದಂತಹ ಕಡತವನ್ನು ತರಿಸಿ, ಪರಿಶೀಲಿ ಸಬೇಕು. ಕೂಡಲೇ ಈ ಕಾರ್ಯ ಆಗಬೇಕೆಂದರು.
ಸದಸ್ಯ ಎನ್.ಜೆ. ರಾಜಶೇಖರ್ ಮಾತನಾಡಿ, ಸಭೆಯನ್ನು ಅರ್ಧಗಂಟೆ ಮುಂದೂಡಿ, ಆಯುಕ್ತರು ಈ ಬಗ್ಗೆ ಕೂಲಂಕುಷ ಪರಿಶೀಲಿಸಿ ಸಭೆಗೆ ಮಾಹಿತಿ ನೀಡಲಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಎಸ್.ಕೆ.ಮರಿ ಯಪ್ಪ ಮಾತನಾಡಿ, ಸಭೆಯನ್ನು ಮುಂದೂ ಡುವುದು ಬೇಡ, ಉಪ ಆಯುಕ್ತರನ್ನು ಸಭೆಯಿಂದ ಹೊರಗೆ ಕಳಿಸೋಣ, ಎಲ್ಲ ಕಡತಗಳೊಂದಿಗೆ ಸಭೆಗೆ ಮರಳಿ ಬರಲಿ, ಆಯುಕ್ತರು ಅದನ್ನು ಪರಿಶೀಲಿಸಲಿ ಎಂದರು.
ನಂತರ ಮೇಯರ್ ಏಳುಮಲೈ ಉಪ ಆಯುಕ್ತರನ್ನು ಸಭೆಗೆ ಹೊರ ಹೋಗುವಂತೆ ಸೂಚಿಸಿದರಲ್ಲದೆ, ಅಕ್ರಮ ಖಾತೆಗೆ ಸಂಬಂಧಿಸಿದಂತೆ ಎಲ್ಲಾ ಕಡತಗಳೊಂದಿಗೆ ಸಭೆಗೆ ಹಾಜರಾಗುವಂತೆಯೂ ಸಹ ಸೂಚನೆ ನೀಡಿದರು.
ಸಭೆಯಲ್ಲಿ ಉಪಮೇಯರ್ ರೂಪಾ ಲಕ್ಷ್ಮಣ್, ಆಯುಕ್ತ ಮುಲ್ಲೈ ಮುಹಿಲನ್ ಸೇರಿ ದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular

Recent Comments