ಶಿವಮೊಗ್ಗ: ನಗರದಲ್ಲಿ ಕಾಂಗ್ರೆಸ್ ಪಕ್ಷ ವಿವಿಧ ಜಾತಿಗಳಲ್ಲಿ ಒಡುಕು ಉಂಟು ಮಾಡುತ್ತಿದ್ದು, ಇದು ಕಾಂಗ್ರೆಸ್ ಪಕ್ಷಕ್ಕೆ ತಿರುಗುಬಾಣ ವಾಗಲಿದೆ ಎಂದು ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ತಮಿಳು ಸಮಾಜ, ವೀರಶೈವ- ಲಿಂಗಾಯತ ಸಮಾಜ ಹಾಗೂ ವಿಪ್ರ ಸಮಾಜದಲ್ಲೇ ಒಡುಕು ಉಂಟು ಮಾಡಿ ಚುನಾವಣಾ ರಾಜಕೀಯ ಮಾಡುತ್ತಿದೆ. ಇದಕ್ಕೆ ಆಯಾ ಸಮಾಜದವರೇ ಸರಿಯಾಗಿ ಉತ್ತರ ನೀಡುತ್ತಿದ್ದಾರೆ ಎಂದರು.
ಬಿಜೆಪಿ ಪಕ್ಷದ ಜೊತೆಗೆ ಶಿವಮೊಗ್ಗ ಕ್ಷೇತ್ರದಲ್ಲಿ ಎಲ್ಲಾ ಸಮಾಜ ಬಾಂಧ ವರು ಇದ್ದಾರೆ. ಈ ಬಾರಿ ಎಲ್ಲರೂ ಬಿಜೆಪಿಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬಿಜೆಪಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ, ಆದ್ದರಿಂದ ಎಲ್ಲಾ ಸಮಾಜದವರು ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದರು.
ಹಿಂದುಳಿದವರು ಮತ್ತು ದಲಿತರಿರಗೆ ಕಾಂಗ್ರೆಸ್ ಪಕ್ಷದಲ್ಲಿ ತುಳಿಯಲಾಗಿದೆ. ಆದ್ದರಿಂದ ಆ ಪಕ್ಷದ ನಾಯಕರುಗಳು ಬಿಜೆಪಿ ಸೇರುತ್ತಿದ್ದಾರೆ. ಇದರಿಂದ ಬಿಜೆಪಿ ಶಕ್ತಿ ಹೆಚ್ಚುತ್ತಿದೆ ಎಂದರು.
ಸಿದ್ದರಾಮಯ್ಯರದ್ದು ಬೊಗಳೆ ಸರ್ಕಾರ. ಅವರು ಹಿಂದುಳಿದವರು ಹಾಗೂ ದಲಿತರಿಗೆ ಏನೂ ಮಾಡದೆ ದ್ರೋಹ ಮಾಡಿದ್ದಾರೆ. ಆದ್ದರಿಂದ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸು ವುದೇ ನಮ್ಮ ಉದ್ದೇಶ ಎಂದರು.
ಎನ್.ಜೆ. ರಾಜಶೇಖರ್, ಜ್ಯೋತಿ ಪ್ರಕಾಶ್, ಎಸ್. ದತ್ತಾತ್ರಿ, eನೇ ಶ್ವರ್, ವಿ. ರಾಜು, ಪಿ. ರುದ್ರೇಶ್, ಹೆಚ್.ವಿ. ಮಹೇಶ್ವರಪ್ಪ, ಸತ್ಯನಾರಾಯಣ್, ಮಧುಸೂದನ್ ಮತ್ತಿತರರಿದ್ದರು.