ಶಿವಮೊಗ್ಗ : ಹೈದರಾಬಾದ್‌ನಲ್ಲಿರುವ ಬ್ಯಾಡ್ಮಿಂಟನ್‌ನ ತರಬೇತಿ ಕೇಂದ್ರವಾದ ಗೋಪಿಚಂದ್ ಅಕಾಡೆಮಿಗೆ ನಗರದ ಪ್ರತಿಭಾನ್ವಿತ ಕ್ರೀಡಾಪಟು ಪವನ್ ಆಯ್ಕೆಯಾಗಿದ್ದಾನೆ.
ಸುರೇಶ್ ಹಾಗೂ ಚಾರುಲತಾರ ಪುತ್ರ ನಾಗಿರುವ ಪವನ್ ಬಿಜಿಎಸ್ ಶಾಲೆಯಲ್ಲಿ ೩ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿ ದ್ದಾನೆ. ಈತನ ಹಿರಿಯ ಸಹೋದರಿ ನೇಹಾಳಿಗೆ ಈ ಕ್ರೀಡೆಯಲ್ಲಿ ಆಸಕ್ತಿ ಇತ್ತು. ಇದನ್ನು ಗಮನಿಸಿದ ಪೋಷಕರು ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ತರಬೇತಿಗಾಗಿ ಸೇರಿಸಿದರು. ಅಕ್ಕನ ಜೊತೆಯಲ್ಲಿಯೆ ಹೋಗುತ್ತಿದ್ದ ಪವನ್ ಸಹ ಈ ಕ್ರೀಡೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡ. ಇದನ್ನು ಗಮನಿಸಿದ ತರಬೇತುದಾರರು ಇವನಿಗೂ ಸಹ ತರಬೇತಿಯನ್ನು ನೀಡಲು ಆರಂಭಿಸಿ ದರು. ಇದರ ಪರಿಣಾಮವಾಗಿ ಇಂದು ಪವನ್ ಗೋಪಿಚಂದ್ ಅಕಾಡೆಮಿಗೆ ಆಯ್ಕೆಯಾಗಿದ್ದಾನೆ.
ಪವನ್ ಹಾಗೂ ಪುನಿತ್ ಅವಳಿ-ಜವಳಿಯಾಗಿದ್ದು ಪುನಿತ್‌ಗೂ ಸಹ ತರಬೇತಿಯನ್ನು ನೀಡಲಾಗುತ್ತಿತ್ತು. ಆದರೆ ಕ್ರೀಡೆ ಪವನ್ ಕೈ ಹಿಡಿಯಿತು.
ಈತನ ಆಸಕ್ತಿ ಗಮನಿಸಿದ ವಿಷನ್ ಅಕಾಡೆಮಿಯ ಶಿಕ್ಷಕರಾದ ವಿನಾಯಕ ಮತ್ತು ಗಣೇಶ್ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಡಿ.೨೦ ರಂದು ಪವನ್ ಹೈದರಬಾದ್‌ಗೆ ತೆರಳುತ್ತಿದ್ದು, ಇವರ ತಂದೆ ಲಾರಿ ಚಾಲಕರಾಗಿದ್ದಾರೆ. ಇದರಿಂದಾಗಿ ಉದಯೋನ್ಮುಖ ಕ್ರೀಡಾಪಟುವಿಗೆ ಹಣದ ಅವಶ್ಯಕತೆಯಿದ್ದು, ಕ್ರೀಡಾಸಕ್ತರು ಈತನಿಗೆ ಹೆಚ್ಚಿನ ಧನ ಸಹಾಯ ಮಾಡಬೇಕಾಗಿದೆ. ಸಿಂಡಿಕೇಟ್ ಬ್ಯಾಂಕ್ ಎಸ್.ಬಿ. ಖಾತೆ ಸಂಖ್ಯೆ ೧೯೨೨೨೪೧ ೦೦೦೨೧೫೫ ಮೊಬೈಲ್ ಸಂಖ್ಯೆ ೯೪೮೧೨ ೫೧೯೧೧.
ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಭಾರತದ ಹೈದರಾಬಾದ್‌ನಲ್ಲಿರುವ ಬ್ಯಾಡ್ಮಿಂಟನ್ ತರಬೇತಿ ಸಂಸ್ಥೆಯಾಗಿದ್ದು, ೨೦೦೧ರಲ್ಲಿ ‘ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್’ ಗೋಪಿಚಂದ್ ಅವರು ಇದನ್ನು ಸ್ಥಾಪಿಸಿದ್ದಾರೆ. ಸೈನಾ ನೆಹವಾಲ್, ಪರುಪಳ್ಳಿ ಕಶ್ಯಪ್, ಪಿ.ವಿ.ಸಿಂಧು, ಗುರು ಸಾಯಿದತ್ ಇವರಲ್ಲಿ ತರಬೇತುಗೊಂಡ ಪ್ರಮುಖ ಆಟಗಾರರು. ಇವರ ಸಾಲಿಗೆ ಪವನ್ ಕೂಡ ಸೇರಲಿ ಎಂಬುದು ‘ನಮ್ಮ ನಾಡು’ ಆಶಯವಾಗಿದೆ.