Wednesday, July 24, 2024
Google search engine
Homeಇ-ಪತ್ರಿಕೆಹಳ್ಳಕ್ಕೆ ಇಳಿದ ಕಾರು-ಚಾಲಕ ಪರಾರಿ: ನಾಲ್ವರು ಮೆಗ್ಗಾನ್ ಗೆ ದಾಖಲು

ಹಳ್ಳಕ್ಕೆ ಇಳಿದ ಕಾರು-ಚಾಲಕ ಪರಾರಿ: ನಾಲ್ವರು ಮೆಗ್ಗಾನ್ ಗೆ ದಾಖಲು

ಶಿವಮೊಗ್ಗ :  ಸಾಗರದ ಸಿಗಂದೂರು ದೇವಿ ದರ್ಶನಕ್ಕೆ ತೆರಳುತ್ತಿದ್ದ ಯಾತ್ರಿಕರ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಆಯನೂರು ಬಳಿ ಹಳ್ಳಕ್ಕೆ ಇಳಿದಿದ್ದು, ಈ ಘಟನೆಯಲ್ಲಿ ಕಾರಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ  ದಾಖಲಿಸಲಾಗಿದೆ.  ಈ ನಡುವೆ ಚಾಲಕ ಪರಾರಿಯಾಗಿದ್ದಾನೆ.
ಬೆಂಗಳೂರಿನಿಂದ ಸಿಗಂದೂರು ದೇವಸ್ಥಾನಕ್ಕೆ ಚೌಡೇಶ್ವರಿ ದೇವಿಯ ದರ್ಶನ ಪಡೆಯಲು ತಡರಾತ್ರಿ ನಾಲ್ವರು ಸ್ವಿಫ್ಟ್ ಡಿಸೇರ್ ಕಾರಿನಲ್ಲಿ ಹೊರಟಿದ್ದರು. ಶಿವಮೊಗ್ಗ ದಾಟಿ ಆಯನೂರಿನ ಬಳಿ ಹೋಗುತ್ತಿದ್ದಾಗ, ಅಲ್ಲಿ  ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ  ಇಳಿದಿದೆ.ಕಾರಿನ ಚಾಲಕನಿಗೆ ನಿದ್ದೆ ಮಂಪರಿನಲ್ಲಿದ್ದ ಹಿನ್ನೆಲೆಯಲ್ಲಿಈ ಅವಘಡ ಸಂಭವಿಸಿದೆ ಎಂದು‌ ಹೇಳಲಾಗುತ್ತಿದೆ.

ನಿದ್ದೆಯ ಮಂಪ್ರುವಿನಲ್ಲಿ ಹಳ್ಳಕ್ಕೆ ಇಳಿಸಿದರೂ ಯಾರಿಗೂ ಪ್ರಾಣ ಹಾನಿಯಾಗಿಲ್ಲ. ಹಳ್ಳಕ್ಕೆ ಇಳಿದ ಕಾರಿನಿಂದ ಓರ್ವ ಮಹಿಳೆ ಹಳ್ಳದಲ್ಲಿ ಕುಳಿತಿದ್ದ ದೃಶ್ಯ ಲಭ್ಯವಾಗಿದೆ.ಚಾಲಕ ಪರಾರಿಯಾಗಿದ್ದಾನೆ. ನಾಲ್ವರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ. ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

RELATED ARTICLES
- Advertisment -
Google search engine

Most Popular

Recent Comments