ಕೇಂದ್ರದ ಯೋಜನೆಗಳನ್ನು ಮನೆ ಮನೆಗೆ ತಿಳಿಸಿ : ಎಸ್.ರುದ್ರೇಗೌಡ

ಶಿವಮೊಗ್ಗ: ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಮಾಡಿ ದಂತಹ ಜನಪರ ಕಾರ್ಯಕ್ರಮಗಳನ್ನು ಮತ್ತು ಪ್ರಸ್ತುತ ಇರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರದ ಜನತೆಗೆ ನೀಡಿರುವ ಹಲ ವಾರು ಜನೋಪಯೋಗಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ವಿಸ್ತಾರಕರಿಗೆ ಕರೆ ನೀಡಿದರು.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪಂಡಿತ ದೀನದಯಾಳ ಜನ್ಮ ಶತಾಬ್ಧಿ ವರ್ಷಾಚರಣೆ ನಿಮಿತ್ತ ಹಮ್ಮಿಕೊಂಡಿರುವ ವಿಸ್ತಾರಕರ ಕಾರ್ಯ ಯೋಜನೆ ಅಡಿಯಲ್ಲಿ ತೆರಳುತ್ತಿರುವ ವಿಸ್ತಾರಕರಿಗೆ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಾಗಲೇ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ. ಜಿಲ್ಲೆಯಾದ್ಯಂತ ವಿಸ್ತಾರಕರು ತಮ್ಮ ಕಾರ್ಯವನ್ನು ಆರಂಭಿಸುತ್ತಿದ್ದು, ಮೋದಿ ಸರ್ಕಾರದ ಜನಪರ ಕಾರ್ಯಕ್ರಮ ಗಳನ್ನು ಜನಸಾಮಾನ್ಯರಿಗೆ ತಿಳಿಸಿ. ಅಲ್ಲದೆ, ಫಲಾನುಭವಿಗಳಿಗೆ ಆಗುತ್ತಿರುವ ತೊಂದರೆಯನ್ನೂ ಕೂಡಾ ಈ ಸಂದರ್ಭದಲ್ಲಿ ಮಾಹಿತಿ ಕಲೆ ಹಾಕಿ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪ ಮಾತನಾಡಿ, ಎಲ್ಲ ಮನೆಗಳಿಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ಒಳ್ಳೆಯ ಕೆಲಸಗಳನ್ನು ತಿಳಿಸಲು ಹೊರಟಿರುವುದು ಒಂದು ರಾಷ್ಟ್ರೀಯ ಯಜ್ಞ ಎಂದರು.
ಎಲ್ಲಾ ಕೆಲಸಕ್ಕೂ ಸಮಾಜವೇ ಶಕ್ತಿ. ಕಾರ್ಯ ಬೆಳೆಸುವ ಕಾರ್ಯಕರ್ತರು ಈಗ ವಿಸ್ತಾರಕರಾಗಿ ತೆರಳುತ್ತಿದ್ದಾರೆ. ಇನ್ನು ೧೫ ದಿನಗಳ ಕಾಲ ಅವರಿಗೆ ಸೂಚಿಸಿದ ಪ್ರದೇಶಗಳಲ್ಲಿ ವಿಸ್ತಾರಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇದರಲ್ಲಿ ಯಾವುದೇ ರಾಜಕಾರಣ ಇಲ್ಲ. ರಾಜಕಾರಣ ಮಾಡಲು ಬೇರೆಯದೇ ವೇದಿಕೆ ಇದೆ. ಇಲ್ಲಿ ದೇಶಕ್ಕಾಗಿ ಮಾಡಿರುವ ಒಳ್ಳೆಯ ಕೆಲಸಗಳನ್ನು ಮಾತ್ರ ಮನೆ ಮನೆಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಡಿ.ಎಸ್.ಅರುಣ್, ನಾಗರಾಜ್, ರತ್ನಾಕರ ಶೆಣೈ, ಮಧುಸೂದನ, ಗಣೇಶ್‌ರಾವ್ ಮತ್ತಿತರರು ಹಾಜರಿದ್ದರು.