ಪತ್ರಿಕಾಗೋಷ್ಠಿಯಲ್ಲಿ ಚಿತ್ರ ನಿರ್ದೇಶಕ ಶಶಿಕುಮಾರ್ ಎನ್. ಮಾಹಿತಿ
ಶಿವಮೊಗ್ಗ: ಗ್ರಾಮೀಣ ಮತ್ತು ನಗರ ಪ್ರದೇಶಗಳ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಟಾಲೆಂಟ್ ಫೆಸ್ಟಿವಲ್ ಅನ್ನು ರಾಯಲ್ ಆರ್ಕೆಡ್ ಸೆಂಟ್ರಲ್ ನಿಂದ ಆಯೋಜಿಸಲಾಗಿದೆ ಎಂದು ಚಿತ್ರ ನಿರ್ದೇಶಕ ಶಶಿಕುಮಾರ್ ಎನ್. ತಿಳಿಸಿದರು.
ಗುರುವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಯಲ್ ಆರ್ಕೆಟ್ ಸೆಂಟ್ರಲ್ , ಶಿವಮೊಗ್ಗದಲ್ಲಿ ಜೂನ್ 9 ಮತ್ತು ಜೂ.23 ರಂದು ಆಯೋಜಿಸಲಾಗಿದೆ. ಸಾಯಂಕಾರ 4 ರಿಂದ 7ರವರೆಗೆ ನಡೆಯಲಿದೆ. ಆಸಕ್ತರು ಇವುಗಳಲ್ಲಿ ಯಾವುದಾದರೂ ಒಂದು ದಿನವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಿದರು.
ಎಲ್ಲರಿಗೂ ಎಲ್ಲಾ ಕಡೆ ಅವಕಾಶವಿರುವುದಿಲ್ಲ. ೨ ವರ್ಷದ ಮಗುವಿನಿಂದ ಹಿಡಿದು ೭೦-೮೦ರ ಹರೆಯದ ಯಾವುದೇ ವಯಸ್ಸಿನವರು ಈ ಫೆಸ್ಟಿವಲ್ ನಲ್ಲಿ ಭಾಗವಹಿಸಬಹುದಾಗಿದೆ. ಇದೊಂದು ಸ್ಪರ್ಧೆಯಾಗಿರುವುದಿಲ್ಲ. ಅಕರ್ಷಕ ಟ್ರೋಫಿ, ಪ್ರಶಸ್ತಿಯನ್ನು ಭಾಗವಹಿಸಿದವರೆಲ್ಲರಿಗೂ ಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಎಲ್ಲ ರೀತಿಯ ಗುಂಪು ನೃತ್ಯ ಅಥವಾ ಸೋಲೋ ನೃತ್ಯ, ನಾಟಕ, ಸ್ಟ್ಯಾಂಡ್ ಅಪ್ ಕಾಮಿಡಿ, ವಾದ್ಯ ನುಡಿಸುವುದು, ಸಂಗೀತ, ಕರಾಟ್, ಯೋಗಾಸನ, ಚಿತ್ರಕಲೆ, ನಿರೂಪಣೆ, ಕರೋಕೆ ಗೀತೆ ಹಾಡುಗಾರಿಕೆ, ಭರತನಾಟ್ಯ, ಏಕಿಪಾತ್ರಾಭಿನಯ, ಮಿಮಿಕ್ರಿ ಇತರೆ ಯಾವುದೇ ಪ್ರತಿಭೆ ಇದ್ದರೂ ಗುಂಪು ಅಥವಾ ಏಕೀಯವಾಗಿ ಭಾಗವಹಿಸಲು ಸುವರ್ಣಾವಕಾಶವಿದೆ. ಶಿವಮೊಗ್ಗ ಮತ್ತು ಗ್ರಾಮಿಣ ಪ್ರತಿಭೆಗಳಿಗೆ ವೇದಿಕೆ ಅವಕಾಶ ನೀಡಿ ಅವರಲ್ಲಿ ಆತ್ಮವಿಶ್ವಾಸ, ಪ್ರೋತ್ಸಾಹ, ಉತ್ಸಾಹ ನೀಡುವುದು ನಮ್ಮ ರಾಯಲ್ ಆರ್ಕೆಡ್ ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳಿದರು.
ಮುಂಗಡ ರಿಜಿಸ್ಟ್ರೇಶನ್ ಅನ್ನು ಸ್ಟೈಲ್ ಡ್ಯಾನ್ಸ್ ಕ್ರೀವ್ ಸ್ಟುಡಿಯೋ, ಲಕ್ಷ್ಮೀ ಗೆಲಾಕ್ಷಿ ಕಾಂಪ್ಲೆಕ್ಸ್, ೩ನೆ ಮಹಡಿ, ಗೋಪಿ ಸರ್ಕಲ್, ಶಿವಮೊಗ್ಗದಲ್ಲಿ ಮಾಡಬಹುದಾಗಿದೆ. ನೋಂದಣಿಗೆ ಜೂನ್ ೮ರಂದು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ 8123005603, 9845388028 ಅನ್ನು ಸಂಪರ್ಕಿಸಬಹುದು. ಅಂದೇ ರಿಜಿಸ್ಟಾರ್ ಮಾಡುವವರು ಸಂಜೆ ೪ರಿಂದ ೫ರ ಒಳಗಾಗಿ ಅವಕಾಶವಿದೆ. ಭಾಗವಹಿಸುವವರಿಗೆ ರೂ. ೫೯೯ ಪ್ರವೇಶ ಶುಲ್ಕವಿದ್ದು, ಸಾರ್ವಜನಿಕರಿಗೆ ೩೯೯ ರೂ. ಅನ್ನು ವಿಧಿಸಲಾಗಿದೆ. ರಾತ್ರಿ ಊಟದ ವ್ಯವಸ್ಥೆ ಇರುತ್ತದೆ. ಇಂತಹ ಕಾರ್ಯಕ್ರಮವನ್ನು ರಾಯಲ್ ಆರ್ಕೆಡ್ ಸೆಂಟ್ರಲ್ ಆಯೋಜಿಸಿರುವುದು ಶ್ಲಾಘನೀಯವೆಂದು ನಿರ್ದೇಶಕರು ತಿಳಿಸಿದರು.
ಇಲ್ಲಿಯವರೆಗೆ18 ಜನ ನೋಂದಣಿಯಾಗಿದೆ ಎಂದು ಎಂದು ರಾಯಲ್ ಆರ್ಕಿಡ್ ಸೆಂಟ್ರಲ್ ನ ಜನರಲ್ ಮ್ಯಾನೇಜರ್ ಉಮೇಶ್ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಭು, ಎಕ್ಸಿಕ್ಯೂಟಿವ್ ಶೆಫ್, ವಿಕಾಸ್, ಸೇಲ್ಸ್ ಮ್ಯಾನೇಜರ್, ಕೃಷ್ಣೇಗೌಡ, ಫುಡ್ ಡಿಪಾರ್ಟ್ ಉಪಸ್ಥಿತರಿದ್ದರು.