ಸಾಲ ಮನ್ನಾದಿಂದ ರೈತರು ವಂಚಿತರಾಗದಂತೆ ಕ್ರಮ ಕೈಗೊಳ್ಳಲಿ

ಶಿವಮೊಗ್ಗ: ರೈತರು ಸಾಲ ಮನ್ನಾ ದಿಂದ ವಂಚಿತರಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ೨೦೦೮ರಲ್ಲಿ ಸಾಲ ಮನ್ನಾದಿಂದ ವಂಚಿತರಾದ ಎಲ್ಲ ರೈತ ರನ್ನು ಸಾಲ ಮನ್ನಾ ಪರಿಮಿತಿಯೊಳಗೆ ತರಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಸರ್ಕಾರವನ್ನು ಒತ್ತಾಯಿಸಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ. ಗಂಗಾ ಧರಪ್ಪ ಮಾತನಾಡಿ, ರೈತರ ಸಾಲ ಮನ್ನಾ ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕೃಷಿ ಬಿಕ್ಕಟ್ಟಿಗೆ ರೈತರ ಸಂಪೂರ್ಣ ಸಾಲ ಮನ್ನಾ ರೈತರನ್ನು ಆರ್ಥಿಕವಾಗಿ ಗಟ್ಟಿಗೊಳಿಸಲು ಪರಿ ಣಾಮಕಾರಿಯಾದ ಮಾರ್ಗವಾಗಿದೆ. ಸಾಲ ಮನ್ನಾ ವಿಷಯಕ್ಕೆ ಸಂಬಂಧ ಪಟ್ಟಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ದಿಟ್ಟತನ ಪ್ರದರ್ಶಿಸಿರು ವುದು ಹಾಗೂ ರೈತಪರ ನಿಲುವು ಹೊಂದಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.
೨೦೦೯ರ ಏ.೧ ರಿಂದ ೨೦೧೭ ಡಿ.೩೧ ರವರೆಗಿನ ಅವಧಿಯಲ್ಲಿ ಮಾಡಿರುವ ಬೆಳೆಸಾಲ ಮನ್ನಾ ಮಾಡಲಾಗುವುದು. ಆದರೆ ಯಾವುದೇ ರೀತಿಯಲ್ಲೂ ಸಾಲದ ಮೊತ್ತಕ್ಕೆ ಮಿತಿ ಇಲ್ಲ ಎಂದು ಮುಖ್ಯ ಮಂತ್ರಿ ಹೇಳಿಕೆ ನೀಡಿರುವುದು ಸಾಲ ಮನ್ನಾದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ೨೦೦೮ರಲ್ಲಿ ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿದ್ದನ್ನು ಪರಿಗಣನೆಗೆ ತೆಗೆದು ಕೊಂಡಂತಿದೆ ಎಂದರು.
೨೦೦೮ರಲ್ಲಿ ಅಂದಿನ ಕೇಂದ್ರ ಸರ್ಕಾರ ಘೋಷಿ ಸಿದ್ದ ಸಾಲಮನ್ನಾ ವ್ಯಾಪ್ತಿ ಯಲ್ಲಿ ಬಹುತೇಕ ರೈತರು ವಂಚಿತರಾಗಿದ್ದರು. ಈ ಬಾರಿ ರೈತರು ವಂಚಿತರಾ ಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಾಲಮನ್ನಾ ಕುರಿತಂತೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳೇ ಸ್ವತಃ ಜವಾಬ್ದಾರಿ ವಹಿಸಿ ಬ್ಯಾಂಕುಗಳಿಂದ ರೈತರ ಸಾಲಕ್ಕೆ ಸಂಬಂಧಿಸಿದ ಅಗತ್ಯ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಇದಕ್ಕಾಗಿ ರೈತರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.
ಚುನಾಯಿತ ಪ್ರತಿನಿಧಿಗಳ ಸಾಲ ಮನ್ನಾ ಇಲ್ಲವೆಂದು ಹೇಳಲಾಗಿದೆ. ಯಾವ ಹಂತದ ಚುನಾಯಿತ ಪ್ರತಿನಿಧಿಗಳು ಎಂಬ ಸ್ಪಷ್ಟೀಕರಣ ನೀಡಿರುವು ದಿಲ್ಲ. ಗ್ರಾ.ಪಂ., ತಾ.ಪಂ ಹಾಗೂ ಕೃಷಿ ಸಹಕಾರ ಕ್ಷೇತ್ರದ ಚುನಾಯಿತ ಪ್ರತಿಧಿಗಳು ಸಹ ರೈತರೇ ಆಗಿದ್ದು, ಈ ಹಂತದ ರೈತ ಜನಪ್ರತಿಧಿಗಳನ್ನು ಸಾಲ ಮನ್ನಾದಿಂದ ವಂಚಿತರಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಯಶವಂತರಾವ್ ಘೋರ್ಪಣೆ, ರಾಜಪ್ಪ, ಗಿರೀಶ್, ಹನುಮಂತಪ್ಪ ಮೊದಲಾದವರಿದ್ದರು.