Sunday, October 13, 2024
Google search engine
Homeಇ-ಪತ್ರಿಕೆಸರ್ಜಿ ಗೆಲುವು, ಅದ್ದೂರಿ ವಿಜಯೋತ್ಸವ

ಸರ್ಜಿ ಗೆಲುವು, ಅದ್ದೂರಿ ವಿಜಯೋತ್ಸವ

ಹೊಳೆ ಸ್ಟಾಪ್‌ ನಿಂದ   ಬಿಜೆಪಿ ಕಚೇರಿಯವರೆಗೂ ಮೆರವಣಿಗೆ

ಶಿವಮೊಗ್ಗ :  ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ್‌ ಸರ್ಜಿ ಅವರು ಬೆಂಗಳೂರಿನಿಂದ ಶುಕ್ರವಾರ ಸಂಜೆ ಶಿವಮೊಗ್ಗ ನಗರಕ್ಕೆ ಆಗಮಿಸಿದರಲ್ಲದೆ, ನಗರದ ಹೊಳೆ ಬಸ್‌ ನಿಲ್ದಾಣದಲ್ಲಿ ಅವರನ್ನು ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭವ್ಯ ಸ್ವಾಗತ ನೀಡುವುದರ ಜತೆಗೆ ಅಲ್ಲಿಂದ ಜಿಲ್ಲಾ ಬಿಜೆಪಿ ಕಚೇರಿಯವರೆಗೆ  ಅದ್ದೂರಿ ಮೆರವಣಿಗೆಯಲ್ಲಿ ಕರೆ ತಂದರು.

ಶುಕ್ರವಾರ ಸಂಜೆ ಸುಮಾರು ೫.೩೦ ರ ಹೊತ್ತಿಗೆ ಅವರು ಬೆಂಗಳೂರಿನ ಆಗಮಿಸುತ್ತಿದ್ದಂತೆ ಹೊಳೆ ಬಸ್‌ ನಿಲ್ದಾಣದಲ್ಲಿ ಭವ್ಯ ಹಾರ ಹಾಕುವ ಮೂಲಕ ಸ್ವಾಗತ ಕೋರಲಾಯಿತು. ಆಂತರ ತೆರೆದ ವಾನಹದಲ್ಲಿ ಅವರನ್ನು ಸಾವಿರಾರು ಮಂದಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮೆರವಣಿಗೆಯಲ್ಲಿ ಕರೆ ತಂದರು. ಈ ವೇಳೆ ತೆರದ ವಾಹನದಲ್ಲಿ ಸರ್ಜಿ ಅವರೊಂದಿಗೆ ಶಾಸಕ ಎಸ್.‌ ಎನ್.‌ ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯ ಡಿ.ಎಸ್.‌ ಅರುಣ್‌ ಹಾಗೂ ಬಿಜೆಪಿ ನಗರ ಘಟಕದ ಅಧ್ಯಕ್ಷ ಮೋಹನ್‌ ರೆಡ್ಡಿ ಇದ್ದರು.

ಬಿಪೆಪಿಕಾರ್ಯಕರ್ತರು ಬೈಕ್‌ ರಾಲಿ ಮೂಲಕ ಮೆರವಣಿಗೆಯಲ್ಲಿ ಸಾಗಿ ಬಂದರು. ಆನಂತರ ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವದ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಡಾ.ಧನಂಜಯ್‌ ಸರ್ಜಿ ಅವರು, ತಮ್ಮ ಗೆಲುವಿಗೆ ಕಾರಣರಾದ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು.ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್‌, ಶಾಸಕ ಎಸ್.‌ ಎನ್‌, ಚನ್ನಬಸಪ್ಪ, ವಿಧಾನಪರಿಷತ್‌ ಸದಸ್ಯ ಡಿ.ಎಸ್.‌ ಅರುಣ್‌,  ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಭಾನುಪ್ರಕಾಶ್‌, ಸಿದ್ದರಾಮಣ್ಣ ಮುಂತಾದವರು ಇದ್ದರು.

RELATED ARTICLES
- Advertisment -
Google search engine

Most Popular

Recent Comments