ಗುಣಾತ್ಮ ಕ ಸಿನಿಮಾ ಹೆಚ್ಚು ತಯಾರಾಗಲಿ ದಸರಾ ಚಲನಚಿತ್ರೋತ್ಸವ ಉದ್ಘಾಟಿಸಿ ಕಲಾವಿದ ಸುಂದರ್‌ರಾಜ್ ಕರೆ

ಶಿವಮೊಗ್ಗ, : ಕರ್ನಾಟಕ ದಲ್ಲಿ ಕನ್ನಡ ಸಿನಿಮಾಗಳಿಗೆ ಮಾರು ಕಟ್ಟೆ ಹೆಚ್ಚಿನ ಪ್ರಮಾಣದಲ್ಲಿ ಸಿಗು ವಂತಾಗಬೇಕು. ಸಿನಿಮಾಗಳು ಕೇವಲ ಹೆಚ್ಚುತ್ತ ಹೋದರೆ ಸಾಲದು. ಗುಣಾತ್ಮಕವಾಗಿಯೂ ಇದ್ದರೆ ಮಾತ್ರ ಪ್ರೇಕ್ಷಕರನ್ನು ತಲುಪಲು ಸಾಧ್ಯ ಎಂದು ಚಲನಚಿತ್ರ ಕಲಾವಿದ ಸುಂದರ್ ರಾಜ್ ಅಭಿಪ್ರಾಯಪಟ್ಟರು.
ಇಂದು ಮಲ್ಲಿಕಾರ್ಜುನ ಟಾಕೀಸ್ ಆವರಣದಲ್ಲಿ ಸಿನಿಮಾ ದಸರಾ (ದಸರಾ ಚಲನಚಿತ್ರೋತ್ಸವ)ಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋಟಿಗಟ್ಟಲೆ ಬಂಡವಾಳಹಾಕಿ ಲಾಭತೆಗೆಯುವ ಸ್ಥಿತಿ ಈಗ ನಿರ್ಮಾ ಣವಾಗಿದೆ. ಇಷ್ಟೊಂದು ಸ್ಪರ್ಧಾತ್ಮ ಮಾರುಕಟ್ಟೆಯಲ್ಲಿ ಗುಣಮಟ್ಟವನ್ನು ಉಳಿಸಿಕೊಂಡಲ್ಲಿ ಮಾತ್ರ ಬದುಕಲು ಸಾಧ್ಯ ಎಂದ ಅವರು ಹಿರಿಯ ಕಲಾವಿ ದರು, ಹಿರಿಯ ನಾಗರಿಕರಂತಾ ಗಿದ್ದಾರೆ. ಅವರಿಗೆ ಕೆಲಸ ಇಲ್ಲ. ಆದರೆ ಗೌರವವಿದೆ ಎಂದು ಹೇಳಿದರು.
ಕಾಫಿತೋಟ ಚಿತ್ರದ ನಾಯಕಿ ರಾಧಿಕಾ ಚೇತನ್ ಮಾತನಾಡಿ, ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವಂತಹ ವಾತಾವರಣವನ್ನು ನಿರ್ಮಿಸಬೇಕಾಗಿದೆ. ಶಿವಮೊಗ್ಗದಲ್ಲಿ ಸಿನಿಮಾ ಸಹಿತ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಾಕಷ್ಟು ಬೆಲೆಕೊಡಲಾಗುತ್ತದೆ ಎಂದರು.
ಚಿತ್ರ ನಿರ್ದೇಶಕ ರಾಮ್‌ನಾಯಕ್ ಮಾತನಾಡಿದರು.
ಮೇಯರ್ ಏಳುಮಲೈ, ಉಪಮೇಯರ್ ರೂಪಾಲಕ್ಷ್ಮಣ್, ಆಯುಕ್ತ ಮುಲ್ಲೈ ಮುಹಿಲನ್, ಬೆಳ್ಳಿ ಮಂಡಲದ ಗೌರವಾಧ್ಯಕ್ಷ ಡಿ.ಎಸ್. ಅರುಣ್, ಕಾರ್ಯದರ್ಶಿ ವೈದ್ಯ, ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.