Wednesday, September 18, 2024
Google search engine
Homeಅಂಕಣಗಳುಲೇಖನಗಳುಸೃಜನಶೀಲ ಮಹಿಳೆಯಾಗಿ ಸುಕ್ರಿ ಬೊಮ್ಮಗೌಡ

ಸೃಜನಶೀಲ ಮಹಿಳೆಯಾಗಿ ಸುಕ್ರಿ ಬೊಮ್ಮಗೌಡ

ಲೇಖನ : ಕವಿತ ಸಾಗರ್

ಸೃಜನಶೀಲ ಮಹಿಳೆಯಾಗಿ ಸುಕ್ರಿ ಬೊಮ್ಮಗೌಡ

ಹಾಲಕ್ಕಿಯವರ ತಾರ್ಲೆಗುಣಿತ ವನ್ನು, ಪುನರುಜ್ಜೀವ ನಗೊಳಿಸಿದವರು ಸುಕ್ರಿಯವರು . ಯುವ ಪೀಳಿಗೆಯ ವರಿಗೆ ತಮ್ಮ ಬುಡ ಕಟ್ಟಿನಲ್ಲಿರುವ ಹಾಡು-ಕುಣಿತಗಳಿಗಿರುವ ಮೌಲ್ಯವನ್ನು ಮನವರಿಕೆ ಮಾಡಿಸಿದ್ದಾರೆ. ಸುಕ್ರಿ ಅವರ ವಿಶಿಷ್ಟತೆ ಕೇವಲ ಹಾಡು ಕಲೆಗೆಮಾತ್ರ ಸೀಮಿತವಾಗಿಲ್ಲ. ಅವರುಮಾಡಿದ ಸಾಮಾಜಿಕ ಕಾರ್ಯಗಳು ಅಷ್ಟೇ ಮುಖ್ಯ. ಸಮುದಾಯ ಮತ್ತು ಪರಿಸರದಲ್ಲಿ ಪಿಡುಗಿನಂತೆ ವ್ಯಾಪಿಸಿದ್ದ ಸಾರಾಯಿ ಚಟವನ್ನು ಬಿಡಿಸಲು ಅವರು ಮಾಡಿದ ಹೋರಾಟ ಐತಿಹಾಸಿಕ ವಾದದ್ದು. ಸಾಮಾಜಿಕ ಕಾರ್ಯಕರ್ತೆ ಕುಸುಮ ಸೊರಬ ಅವರ ಜೊತೆಗೂಡಿ ಪರಿಸರ ನಾಶ ಮತ್ತು ಸಾರಾಯಿ ವಿರುದ್ಧ ದೊಡ್ಡ ಹೋರಾಟವನ್ನೇ ಕೈಗೊಂಡರು.

ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸುತ್ತಿದ್ದಾಳೆ. ಮಹಿಳೆ ಸಾಧಿಸುತ್ತಿರುವ ಪ್ರಗತಿಯನ್ನು ಗುರುತಿಸುತ್ತಿರುವುದೇ ಒಂದು ಸಂತ ಸದ ಸಂಗತಿ. ಈ ಬಾರಿಯ ಪದ್ಮಶ್ರೀ ಪುರಸ್ಕೃತರ ಪಟ್ಟಿಯನ್ನು ನೋಡಿದಾಗ ಬಹಳ ವಿಸ್ಮಯವೆನಿಸಿತು. ಪುರಸ್ಕೃತರ ಪಟ್ಟಿಯಲ್ಲಿ ಸಾಮಾನ್ಯವಾಗಿ ಅಕಾ ಡೆಮಿಕ್ ವಲಯದ ದೊಡ್ಡ ದೊಡ್ಡ ಪಂಡಿತರೋ, ವಿeನಿಗಳೊ, ಕ್ರಿಕೆಟ್ ಚಿತ್ರ ಲೋಕದ ಗಣ್ಯರೋ ರಾರಾಜಿಸುವಾಗ ಸುಕ್ರಿಯಮ್ಮನ ಹೆಸರು ಕಂಡು ರೋಮಾಂಚನವಾ ಯಿತು. ಪ್ರಾಯಶಃ ಇದು ನಾಡಿನ ಜನಪದ ಇತಿಹಾಸದ ಒಂದು ಅಪೂರ್ವ ಕ್ಷಣವೆಂದೇ ನನ್ನ ಭಾವನೆ.

ಶಿಷ್ಟ ಪರಂಪರೆಯ ಸಂಗೀತ ನೃತ್ಯ ಮುಂತಾದವುಗಳು ರಾಜ ಮರ್ಯಾ ದೆಯಿಂದ ವಿಜೃಂಭಿಸುತ್ತ ಜನಪದ ಕಲೆ ಕಲಾವಿದರು ಬೀದಿ ಮೆರವಣಿಗೆಯ ಅಗ್ಗದ ಕಲಾವಿದರಾಗಿರುವ ಈ ಜಾಗತೀಕರಣದ ವಿಭ್ರಮಣೆಯಲ್ಲಿ
‘ಸುಕ್ರಿ ಅಮ್ಮ’ ನನ್ನು ಸರ್ಕಾರ ಗುರುತಿಸಿ ರುವುದು ಕಲಾ ಪ್ರಪಂಚಕ್ಕೆ ಸಂದ ಗೌರವ ಮಾತ್ರವಲ್ಲ. ಅದು ಪ್ರಜಾ ಪ್ರಭುತ್ವದ ಆಶಯಗಳಿಗೆ ಸಂದ ನಿಜ ಗೌರವವೂ ಆಗಿದೆ.

ಶ್ರಮ ಸಂಸ್ಕೃತಿಯ ಜೀವನ ಲಯವೇ ಕಾವ್ಯವಾಗಿರುವ ಸುಕ್ರಿ ಬೊಮ್ಮೆಗೌಡರ ಹಾಡುಗಳು ಆ ಭಾಗದ ಗ್ರಾಮೀಣ ಜೀವ ನದ ಮೇಲೆ, ಮೌಲ್ಯಗಳ ಮೇಲೆ ಬೀರಿ ರುವ ಪ್ರಭಾವ ನಿಜಕ್ಕೂ ಅಚ್ಚಳಿಯಲಾಗದ್ದು. ಹಾಲಕ್ಕಿ ಜನಪದಕ್ಕೆ ತನ್ನದೇ ಆದ ನಾದವಿದೆ ಲಯವಿದೆ ಸುಕ್ರಿಯವರು ಅಂಜುಗನ ಹಕ್ಕಿಯ ಮೂಲಕ ಸೃಷ್ಟಿ ಪುರಾಣವನ್ನು ವಾಖ್ಯಾನಿಸುತ್ತಾರೆ. ಸೃಷ್ಟಿ ಪುರಾಣದ ಕುರಿತು ಹಲವು ವಿದ್ವಾಂಸರು ಬೇರೆ ಬೇರೆ ದೃಷ್ಟಿ ಕೋನದಿಂದ ವ್ಯಾಖ್ಯಾನಿಸಿದ್ದಾರೆ. ಸುಕ್ರಿಯವರ ಅಂಜುಗನ ಹಕ್ಕಿ ಸೃಷ್ಟಿ ಪುರಾಣವೂ ವಿಶಿಷ್ಟವಾದದ್ದು, ಜನ ಪದವಾದದ್ದು ಹಾಗೂ ಪ್ರಾದೇಶಿಕ ಸೊಗಡಿನಿಂದ ಕೂಡಿರುವಂಥದ್ದು.

ಯಾವುದೇ ಕಲೆ ಕರಗತವಾದಾಗ ಬೇಕಾದರೆ ಅದು ಪಾರಂಪರಿಕವಾ ಗಿರಬೇಕು. ಅಥವಾ ನಿರಂತರ ಪರಿಶ್ರಮದಿಂದ ಅದನ್ನು ಸಿದ್ಧಿಸಿಕೊ ಳ್ಳಲು ಸಾಧ್ಯ. ಕಲಿತ ವಿದ್ಯೆಯನ್ನು ಮುಂದೆ ಕೊಂಡೊಯ್ಯುವ ಸಂಕ ಲ್ಪವೂ ಕಲಾವಿದರಿಗೆ ಇರಬೇಕು. ಈ ನಿಟ್ಟಿನಲ್ಲಿ ಸುಕ್ರಿ ತಾಯಿಯವರು ಮುಂಚೂಣಿಯಲ್ಲಿದ್ದಾರೆ. ಇವರ ಬದುಕಿನಲ್ಲಿ ಹಾಡು ಕಲಿಸಿದ ತಾಯಿ ಯ ಪ್ರಭಾವ ದಟ್ಟವಾಗಿದೆ. ಯಾವು ದೇ ಹಾಡನ್ನು ನಿಂತ ನಿಲುವಿನಲ್ಲಿಯೇ ಕಟ್ಟಿನ ಹಾಡುವ ಇವರು ಅಗಾಧ ನೆನಪಿನ ಶಕ್ತಿಯನ್ನು ಹೊಂದಿದ್ದಾರೆ.

ಕಥನ ಗೀತೆಗಳಾದ ಮಾದೇವ ರಾಯನ ಹಾಡು, ಕುಸುಮಾಲೆ ಹಾಡು, ಕರಿದೇವರ ಹಾಡು, ಒಗಟಿನ ಪದ ಇವರ ಕಂಠಸಿರಿಯಲ್ಲಿ ನಿರರ್ಗಳ ವಾಗಿ ಹೊರ ಹೊಮ್ಮುತ್ತದೆ. ಪಾಂಡ ವರ ವಂಶಸ್ಥರೆಂದು ಹೇಳುವ ಹಾಲಕ್ಕಿ ಯವರು ಪಾಂಡವ ಕಮಿ ಅಂದರೆ ಪಾಂಡವ ಕಥನವನ್ನು ಸೀತೆ ಕಮಿಯಲ್ಲಿ ಸೀತೆ ಮತ್ತು ಲಕ್ಷ್ಮಣರನ್ನು ಪ್ರಧಾನವಾ ಗಿದ್ದುಕೊಂಡು ಹೇಳುವ ಕಥೆ ಇದು. ರಾಮಾಯಣದ ಉತ್ತರ ಕಾಂಡದಲ್ಲಿ ಬರುವ ಕಥೆಯನ್ನು ಹಾಲಕ್ಕಿಯವರು ಸೀತೆ ಕಮಿ ಎಂದು ಕರೆಯುತ್ತಾರೆ.

ಹಾಲಕ್ಕಿ ಸಾಂಪ್ರದಾಯಿಕ ಉಡುಗೆ ಯನ್ನು ಈಗಲೂ ಪ್ರೀತಿಯಿಂದಲೇ ಉಡುವ ಅವರು ಶ್ರಮ ಜೀವನವನ್ನು ಇಂದಿಗೂ ಮುಂದುವರಿಸಿದ್ದಾರೆ. ಜೀವ ಇರುವವರೆಗೂ ಹಾಡುವೆ ಎನ್ನುವ ಇವರು ಬದುಕಿನ ಕಷ್ಟ ಸುಖಗಳನ್ನು ಸಹ ಹಾಡು ಕಟ್ಟಿ ಹಾಡುವ ಪ್ರತಿಭಾವಂತೆ ಸೃಜನಶೀಲ ಹಾಡುಗಾರ್ತಿ ‘ಹಗರಣ’ ಎಂಬ ಸಾಂಪ್ರದಾಯಿಕ ಪದ್ಧತಿಯ ಆಚರ ಣೆಯ ವೇಳೆ ‘ಹಗರಣ’ ಎಂಬ ಸಾಂಪ್ರ ದಾಯಿಕ ಪದ್ಧತಿಯ ಆಚರಣೆಯ ವೇಳೆ ‘ಹಗರಣ-ಪಗರಣ’ ಹಾಡು ಗಳು ಸಹ ಹಾಲಕ್ಕಿ ಸಮುದಾಯದ ಕೊಡುಗೆಯೇ ಆಗಿದೆ. ಸೋಬಾನೆ ಪದಗಳಿಗಿಂತ ತುಸು ಭಿನ್ನವಾಗಿ ನಿಲ್ಲುವ ಹಾಲಕ್ಕಿ ಜಾನಪದಕ್ಕೆ ತನ್ನದೇ ಆದ ಲಯವನ್ನು ಸುಕ್ರಜ್ಜಿಯ ಹಿಂದಿನ ತಲೆಮಾರುಗಳು ಬಿಟ್ಟು ಹೋಗಿವೆ. ಇಂದು ಆ ಕೊಂಡಿಯನ್ನು ಮುಂದಿನ ವರಿಗೆ ವರ್ಗಾಯಿಸುವ ಕಾರ್ಯವನ್ನು ಸುಕ್ರಿಯವರು ಮಾಡಿದ್ದಾರೆ.

ಹಾಲಕ್ಕಿಯವರ ತಾರ್ಲೆಗುಣಿತ ವನ್ನು, ಪುನರುಜ್ಜೀವ ನಗೊಳಿಸಿದವರು ಸುಕ್ರಿಯವರು . ಯುವ ಪೀಳಿಗೆಯ ವರಿಗೆ ತಮ್ಮ ಬುಡಕಟ್ಟಿನಲ್ಲಿರುವ ಹಾಡು-ಕುಣಿತಗಳಿಗಿರುವ ಮೌಲ್ಯ ವನ್ನು ಮನವರಿಕೆ ಮಾಡಿಸಿದ್ದಾರೆ. ಸುಕ್ರಿ ಅವರು ಕೇವಲ ಹಾಡು ಕಲೆಗೆ ಮಾತ್ರ ಸೀಮಿತವಾಗಿಲ್ಲ. ಅವರು ಮಾಡಿದ ಸಾಮಾಜಿಕ ಕಾರ್ಯಗಳು ಅಷ್ಟೇ ಮುಖ್ಯ. ಸಮುದಾಯ ಮತ್ತು ಪರಿಸರದಲ್ಲಿ ಪಿಡುಗಿನಂತೆ ವ್ಯಾಪಿಸಿದ್ದ ಸಾರಾಯಿ ಚಟವನ್ನು ಬಿಡಿಸಲು ಅವರು ಮಾಡಿದ ಹೋರಾಟ ಐತಿಹಾಸಿಕ ವಾದದ್ದು. ಸಾಮಾಜಿಕ ಕಾರ್ಯ ಕರ್ತೆ ಕುಸುಮ ಸೊರಬ ಅವರ ಜೊತೆಗೂಡಿ ಪರಿಸರ ನಾಶ ಮತ್ತು ಸಾರಾಯಿ ವಿರುದ್ದ ದೊಡ್ಡ ಹೋರಾ ಟವನ್ನೇ ಕೈಗೊಂಡರು. ಸುಕ್ರಿ ಅವರ ಈ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಗಳನ್ಮು ಗುರುತಿಸಿ ಕರ್ನಾಟಕ ಸರ್ಕಾರ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸಕ್ತಿ ಹಂಪಿ ಕನ್ನಡ ವಿಶ್ವವಿದ್ಯಾಲ ಯದ ನಾಡೋಜ ಗೌರವ, ಕರ್ನಾ ಟಕ ಸರ್ಕಾರ ಜಾನಪದ ಕ್ಷೇತ್ರಕ್ಕೆ ನೀಡುವ ಅತ್ಯುತ್ತಮ ಜಾನಪದ ಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಇಂತಹ ಪ್ರತಿಭಾವಂತ ಬುಡಕಟ್ಟು ಕಲಾವಿದೆಗೆ ಇದೀಗ ಭಾರತ ಸರ್ಕಾ ರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿ ಸಿದೆ. ಇದು ಕರ್ನಾಟಕ ಜಾನಪದ ಕಲೆ, ಕಲಾವಿದರಿಗೆ ಸಂದ ಐತಿಹಾಸಿಕ ಗೌರವವಾಗಿದೆ. ಇಂತಹ ಹೆಮ್ಮೆಯ ಕಲಾವಿದೆಯನ್ನು ಮೊನ್ನೆ ಕರ್ನಾಟಕ ಜಾನಪದ ಅಕಾಡೆಮಿಯು ಅಂಕೋಲದಲ್ಲಿ ಗೌರವಿಸಿ ಅಕಾ ಡೆಮಿಯು ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದೆ.

ಹೀಗೆ ತನ್ನ ಬದುಕಿನುಸಿರನ್ನೇ ಕಾವ್ಯದ ಲಯವಾಗಿರಿಸಿಕೊಂಡ ಸುಕ್ರಿ ತಾಯಿಗೆ ನಾಡಿನ ಎಲ್ಲೆಡೆಯಿಂದ ಪ್ರಶಂಸೆಗಳ ಮಳೆಯೇ ಸುರಿಯುತ್ತಿರು ವಾಗ ಆ ಮಳೆಯು ಸೊಬಗು ಕಂಡು ರೋಮಾಂಚಿತವಾಗಿರುವ ನನ್ನಂತವ ರೆಲ್ಲರ ಪರವಾಗಿ ನಿಮ್ಮೆಲ್ಲರ ಪರವಾಗಿ ಅವರಿಗೆ ಮತ್ತೊಮ್ಮೆ ಪ್ರೀತಿಯ ಅಭಿನಂದನೆಯನ್ನು ತಿಳಿಸೋಣ.

RELATED ARTICLES
- Advertisment -
Google search engine

Most Popular

Recent Comments