Saturday, October 12, 2024
Google search engine
Homeಅಂಕಣಗಳುಲೇಖನಗಳುಶಿವಮೊಗ್ಗ ದಸರಾ ನಾಡಿನಾದ್ಯಂತ ಹೆಸರು ಮಾಡಲಿ ದಸರಾ ಉದ್ಘಾಟಿಸಿದ ಸುಕ್ರಜ್ಜಿ ಆಶಯ

ಶಿವಮೊಗ್ಗ ದಸರಾ ನಾಡಿನಾದ್ಯಂತ ಹೆಸರು ಮಾಡಲಿ ದಸರಾ ಉದ್ಘಾಟಿಸಿದ ಸುಕ್ರಜ್ಜಿ ಆಶಯ

ಶಿವಮೊಗ್ಗ : ಮೈಸೂರು ದಸರಾದಷ್ಟೇ ವಿಜೃಂಭಣೆಯಿಂದ ನಡೆಯುತ್ತಿರುವ ಶಿವಮೊಗ್ಗ ದಸರಾ ನಾಡಿನಲ್ಲಿ ಇನ್ನಷ್ಟು ಖ್ಯಾತಿ ಪಡೆಯುವಂತಾಗಲಿ ಎಂದು ಜಾನಪದ ಕೋಗಿಲೆ, ನಾಡೋಜ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಹಾರೈಸಿದರು.

ನಗರದ ಕೋಟೆಶ್ರೀ ಚಂಡಿಕಾ ಪರ ಮೇಶ್ವರಿ ದೇವಸ್ಥಾನದಲ್ಲಿ ಇಂದು ನಡೆದ ಚಾಮುಂ ಡೇಶ್ವರಿ ದೇವಿಯ ಉತ್ಸವ ಮೂರ್ತಿ ಪ್ರತಿ ಷ್ಠಾಪನೆ ಹಾಗೂ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾಡಿನಲ್ಲಿ ಚಾಮುಂಡೇಶ್ವರಿಯ ಕೃಪೆಯಿಂದ ಹೆಚ್ಚಿನ ಮಳೆ-ಬೆಳೆ ಆಗಬೇಕು. ಸುಖ-ಸಮೃದ್ಧಿ ನೆಲೆಸಬೇಕು. ಅನಂತಾನಂತ ಕಾಲಕ್ಕೆ ದಸರಾ ಮುಂದುವರೆಯಬೇಕು. ಇದೇ ಉತ್ಸಾಹ ಎಲ್ಲೆಡೆ ನೆಲೆಸಬೇಕೆಂದು ಆಶಿಸಿದರು. ಈ ಸಂದರ್ಭದಲ್ಲಿ ಅವರು ಚಾಮುಂಡೇಶ್ವರಿ ಕುರಿತಾದ ಸೋಬಾನೆ ಪದವನ್ನು ಹಾಡಿದರು.
ಶಾಸಕ ಆರ್. ಪ್ರಸನ್ನಕುಮಾರ್ ಮಾತ ನಾಡಿ, ರಾಜ್ಯದಲ್ಲಿ ಎರಡನೆಯ ಅತಿದೊಡ್ಡ ದಸರಾ ನಡೆಯುವ ಶಿವಮೊಗ್ಗದಲ್ಲಿ ಮಳೆ ಗಾಗಿ ಎಲ್ಲರೂ ಪ್ರಾರ್ಥಿಸಬೇಕು. ಜಿಲ್ಲೆಯ ಯಾವ ಕೆರೆ-ಕಟ್ಟೆ ಮತ್ತು ಜಲಾಶಯಗಳು ತುಂಬಿಲ್ಲ. ಜನರ ಸುಂದರ ಜೀವನಕ್ಕೆ ಜಲಾಶಯಗಳು ತುಂಬಬೇಕು. ಆದ್ದರಿಂದ ಈ ಸಂದರ್ಭದಲ್ಲಿ ಎಲ್ಲರೂ ಮಳೆಗಾಗಿ ಚಾಮುಂಡೇಶ್ವರಿಯ ಮೊರೆ ಹೋಗಬೇಕಿದೆ ಎಂದರು.
ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿ ರುವ ಶಿವಮೊಗ್ಗ ದಸರಾದಲ್ಲಿ ಕಾರ್ಯ ಕ್ರಮ ಗಳ ವೈಶಿಷ್ಟ್ಯತೆಯೂ ಹೆಚ್ಚುತ್ತಿದೆ. ದಸರಾ ಉತ್ಸವದಲ್ಲಿ ಎಲ್ಲಾ ವರ್ಗದವರೂ ಸಕ್ರಿಯ ವಾಗಿ ಪಾಲ್ಗೊಳ್ಳುತ್ತಿದ್ದಾರೆ. ಸಾಂಸ್ಕೃ ತಿಕ ಕಾರ್ಯಕ್ರಮಗಳು ದಿನನಿತ್ಯ ನಡೆಯು ತ್ತಿದೆ. ನಗರದ ಎಲ್ಲ ಜನರು ಇನ್ನಷ್ಟು ಸಂಭ್ರ ಮದಿಂದ ಇದರಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು.
ಅಧ್ಯಕ್ಷತೆಯನ್ನು ಮೇಯರ್ ಏಳುಮಲೈ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸುಕ್ರಿ ಬೊಮ್ಮಗೌಡ ಅವರನ್ನು ಪಾಲಿಕೆ ವತಿಯಿಂದ ಗೌರವಿಸಲಾಯಿತು. ಪಾಲಿಕೆ ಆಯುಕ್ತ ಮುಲ್ಲೈಮುಹಿಲನ್, ಉಪ ಮೇಯರ್ ರೂಪಾ ಲಕ್ಷ್ಮಣ್, ವಿವಿಧ ಸ್ಥಾಯಿ ಸಮಿತಿಯ ಅಧ್ಯಕ್ಷರು ಮತ್ತು ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.
ವಿಶೇಷ ಆಕರ್ಷಣೆಯಾಗಿ ಪುಟ್ಟಗೌರಿ ಧಾರವಾಹಿಯ ಅಜ್ಜಮ್ಮ ಪಾತ್ರಧಾರಿ ಚಂದ್ರಕಲಾಮೋಹನ್ ಮತ್ತು ಏಳುಮಲೈ ಅವರ ಪತ್ನಿ ಗೀತಾ ಹಾಜರಿದ್ದರು.
ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಸ್ವಾಗತಿಸಿದರು. ಸಹನಾ ಚೇತನ್ ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular

Recent Comments