Sunday, October 13, 2024
Google search engine
Homeಅಂಕಣಗಳುಲೇಖನಗಳುಜೆಡಿಎಸ್‌ನಲ್ಲಿ ಭುಗಿಲೆದ್ದ ಬಂಡಾಯ ಜಿಲ್ಲಾಧ್ಯಕ್ಷರ ಕ್ರಮಕ್ಕೆ ತೀವ್ರ ವಿರೋಧ

ಜೆಡಿಎಸ್‌ನಲ್ಲಿ ಭುಗಿಲೆದ್ದ ಬಂಡಾಯ ಜಿಲ್ಲಾಧ್ಯಕ್ಷರ ಕ್ರಮಕ್ಕೆ ತೀವ್ರ ವಿರೋಧ

ಶಿವಮೊಗ್ಗ : ನಗರ ಜೆಡಿಎಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಇದೀಗ ಜಿಲ್ಲಾಧ್ಯಕ್ಷ ಹೆಚ್.ಎನ್. ನಿರಂಜನ್ ವಿರುದ್ಧವೇ ಪಕ್ಷದಲ್ಲಿನ ನಾಯಕರು ತಿರುಗಿ ಬಿದ್ದಿದ್ದಾರೆ.
ನಿನ್ನೆಯಷ್ಟೇ ಪಕ್ಷದ ನಗರ ಘಟಕವನ್ನು ವಿಸರ್ಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷರು ತಿಳಿಸಿದ್ದರು. ಇಂದು ನಗರ ಘಟಕದ ಅಧ್ಯಕ್ಷ ಎ.ಟಿ.ಸುಬ್ಬೇಗೌಡ ಪತ್ರಿಕಾಗೋಷ್ಠಿ ನಡೆಸಿ, ನಗರಘಟಕವನ್ನು ಜಿಲ್ಲಾಧ್ಯಕ್ಷರು ವಿಸರ್ಜಿಸಿಲ್ಲ. ನಾವು ನಮ್ಮ ಕಾರ್ಯವನ್ನು ಮುಂದುವ ರೆಸುತ್ತೇವೆ. ಸ್ವತಃ ಕುಮಾರಸ್ವಾಮಿಯವರೇ ನಿಮ್ಮಲ್ಲಿರುವ ಸಣ್ಣ ಪುಟ್ಟ ಸಮಸ್ಯೆ ಬಗೆಹರಿ ಸುತ್ತೇನೆ. ಅಲ್ಲಿಯವರೆಗೂ ನಿಮ್ಮ ನಿಮ್ಮ ಕಾರ್ಯ ದಲ್ಲಿ ಹಾಗೂ ಸ್ಥಾನದಲ್ಲಿ ಮುಂದುವರೆದುಕೊಂಡು ಹೋಗಿ ಎಂಬ ಮಾತನ್ನು ತಿಳಿಸಿದ್ದಾರೆ ಎಂದರು.
ಕಳೆದ ನಾಲ್ಕು ತಿಂಗಳ ಹಿಂದೆ ಶಿವಮೊಗ್ಗ ನಗರದ ಘಟಕದ ಅಧ್ಯಕ್ಷರನ್ನಾಗಿ ನನ್ನನ್ನು ನೇಮಿಸಲಾಗಿದೆ. ನನ್ನ ನೇಮಕವಾದ ದಿನದಿಂದ ಇಂದಿನವರೆಗೂ ಪಕ್ಷದ ಸಂಘಟನೆಗಾಗಿ ಹಗಲಿರುಳು ದುಡಿಯುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ನಗರ ಘಟಕವನ್ನು ವಿಸರ್ಜಿಸಿದ್ದಾರೆ ಎಂಬ ಮಾಹಿತಿ ತಿಳಿದಿದೆ. ಈ ಬಗ್ಗೆ ಕುಮಾರಸ್ವಾಮಿ ಯವರೊಂದಿಗೆ ಮಾತನಾಡಿದ್ದು, ನಿಮ್ಮ ಸ್ಥಾನದಲ್ಲಿ ಮುಂದುವರೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ ಎಂದರು.
ಮೇಯರ್ ಏಳುಮಲೈ ಮಾತನಾಡಿ, ಕಳೆದ ೧೦-೧೨ವರ್ಷಗಳಿಂದ ಎಂ.ಶ್ರೀಕಾಂತ್‌ರವರು ಜಿಲ್ಲಾಧ್ಯಕ್ಷರಾಗಿ ಪಕ್ಷವನ್ನು ಜಿಲ್ಲೆಯಲ್ಲಿ ಸದೃಢವಾಗಿ ಸಂಘಟಿಸಿದ್ದಾರೆ. ಇದರಿಂದಾ ಗಿಯೇ ಮೂವರು ಶಾಸಕರು, ಐದು ಜನ ಪಾಲಿಕೆ ಸದಸ್ಯರು ಹಾಗೂ ಎಪಿಎಂಸಿಯಲ್ಲಿ ಅಧಿಕಾರವನ್ನು ಹಂಚಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ೫೦೦೦ ಇದ್ದ ಶಿವಮೊಗ್ಗ ನಗರ ಕ್ಷೇತ್ರದ ಮತದಾರರು ಇದೀಗ ಜೆಡಿಎಸ್‌ಗೆ ೨೨೦೦೦ ಮತದಾರರಾ ಗಿದ್ದಾರೆ. ಇಂತಹ ಉತ್ತಮ ಬೆಳವಣಿಗೆಯ ಸಂದರ್ಭದಲ್ಲಿ ಈಗಿನ ಜಿಲ್ಲಾಧ್ಯಕ್ಷರು ಪಕ್ಷದಲ್ಲಿ ರುವವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಗುಂಪುಗಾರಿಕೆ ನಡೆಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಈ ಬಗ್ಗೆ ಪಕ್ಷದ ವರಿಷ್ಠರಿಗೆ ನಾವುಗಳು ತಿಳಿಸಿದ್ದು, ಅವರುಗಳು ಶೀಘ್ರದಲ್ಲೇ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಲಾಗುವುದು. ಅಲ್ಲಿಯವರೆಗೂ ನಿಮ್ಮ ನಿಮ್ಮ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಪಕ್ಷ ಸಂಘಟನೆಯ ಕಾರ್ಯ ಮಾಡಿ ಎಂಬ ಸೂಚನೆ ನೀಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಉಪಮೇಯರ್ ರೇಖಾ ಚಂದ್ರಶೇಖರ, ಮಾಜಿ ನಗರಸಭೆ ಸದಸ್ಯ ರಾಜಣ್ಣ, ರಾಜ್ಯ ಘಟಕದ ಜಂಟೀ ಕಾರ್ಯದರ್ಶಿ ಖಲೀಂ ಪಾಷಾ, ಹಿರಿಯ ಮುಖಂಡ ಗೋವಿಂದಪ್ಪ, ಧರ್ಮಣ್ಣ, ನಾಗೇಶ್, ಓಬಿಸಿ ಘಟಕದ ಭಾಸ್ಕರ್, ಮಂಜುನಾಥ್ ನವಿಲೆ, ಅಣ್ಣಪ್ಪ ನಾಯಕ್ ಮೊದಲಾದವರಿದ್ದರು.

RELATED ARTICLES
- Advertisment -
Google search engine

Most Popular

Recent Comments