Thursday, December 12, 2024
Google search engine
Homeಅಂಕಣಗಳುಲೇಖನಗಳುನಾಳೆಯಿಂದ ಬೈಕ್ ಗಳು- ವಾಹನಗಳ ಸಂಚಾರಕ್ಕೆ ಕಟ್ಟುನಿಟ್ಟಿನ ಕ್ರಮ

ನಾಳೆಯಿಂದ ಬೈಕ್ ಗಳು- ವಾಹನಗಳ ಸಂಚಾರಕ್ಕೆ ಕಟ್ಟುನಿಟ್ಟಿನ ಕ್ರಮ

ಶಿವಮೊಗ್ಗ : ನಾಳೆಯಿಂದ ಬಿಗಿ ಲಾಕ್ ಡೌನ್ ಜಾರಿಯಾಗುವ ಹಿನ್ನಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅನೇಕ ವಿಷಯಗಳ ಚರ್ಚೆ ನಡೆದು ದ್ವಿಚಕ್ರವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಎಲ್ಲ ವರ್ತಕರು ಲಾಕ್ ಡೌನ್ ಗೆ ಒಮ್ಮತದ ಒಪ್ಪಿಗೆ ನೀಡಿದರು.

ವರ್ತಕರು, ಬಸ್ ಮಾಲೀಕರು, ಅರ್ಚಕರು, ಹೋಟೆಲ್ ಮಾಲೀಕರು, ಕಲ್ಯಾಣ ಮಂದಿರದ ಮಾಲೀಕರೊಂದಿಗೆ ಚರ್ಚಿಸಲಾಯಿತು.

ಮದುವೆಯನ್ನ ಕಲ್ಯಾಣ ಮಂದಿರದಲ್ಲಿ ನಡೆಸಬಾರದು ಎಂಬ ಹಿನ್ನೆಲೆಯಲ್ಲಿ ಹಣ ವಾಪಾಸ್ ಕೊಡುವ ಬಗ್ಗೆ ಚರ್ಚಿಸಲಾಯಿತು. ಯಾವುದೇ ಕಾರಣಕ್ಕೂ ದ್ವಿಚಕ್ರ ವಾಹನಗಳು ರಸ್ತೆಗಿಳಿಯದಂತೆ, ಅಗತ್ಯ ವಸ್ತುಗಳ ಖರೀದಿಗೆ, ಚಿಲ್ಲರೆ ವ್ಯಾಪಾರಿಗಳಿಗೆ ಸ್ಟಾಕ್ ಸರಬರಾಜು ಸೇರಿದಂತೆ ಹಲವುಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಗಾಯಿತ್ರಿ ಮಾಂಗಲ್ಯ ಮಂದಿರದ ನಟರಾಜ್ ಭಾಗವತ್ ಮಾತನಾಡಿ, ಕಲ್ಯಾಣ ಮಂದಿರಗಳು ಜಾತಿ ಸಮುದಾಯಗಳಿಗೆ ಸೇರಿದವೇ ಹೆಚ್ಚಿವೆ. ಕೇವಲ 30-50 ಸಾವಿರ ಚಾರ್ಜ್ ಮಾಡುವ ಕಲ್ಯಾಣ ಮಂದಿರಗಳಿವೆ. ಇವರೆಲ್ಲರೂ ಕೆಇಬಿ, ಮುನ್ಸಿಪಲ್ ಟ್ಯಾಕ್ಸ್ ಕಟ್ಟಬೇಕಿದೆ, ಅಲ್ಲಿನ ಸಿಬ್ಬಂದಿಗಳಿಗೆ ಸಂಬಳ ನೀಡಬೇಕು. ಅನೇಕರು ಸಾಲ ಮಾಡಿ ಕಲ್ಯಾಣ ಮಂದಿರ ನಿರ್ಮಿಸಿದ್ದಾರೆ. ಈ ತೆರಿಗೆಗಳೇ 10-12% ಕಟ್ಟಬೇಕು.‌ ಜಿಎಸ್ ಟಿ ಹಣವನ್ನ ಕಟ್ಟಬೇಕಿದೆ.

ಈ ಹಿನ್ನಲೆಯಲ್ಲಿ ಇದರಲ್ಲಿ ಅನುಕೂಲ ಮಾಡಿಕೊಟ್ಟಲ್ಲಿ ಹಣ ವಾಪಾಸ್ ಮಾಡಬಹುದು. ಕಳೆದ ಬಾರಿ ಸರ್ಕಾರ ಶೇ.70 ರಷ್ಟು ಹಣ ನಿಗದಿಯಾದ ಮದುವೆಗೆ ವಾಪಾಸ್ ಕೊಡಲು ಸೂಚಿಸಿತ್ತು. ಈ ಎಲ್ಲಾ ಟ್ಯಾಕ್ಸ್ ಕಡಿಮೆಗೊಳಿಸಿದ್ದಲ್ಲಿ ಶೇ.70 ರಷ್ಟು ಹಣ ಕೊಡಲು ಸಿದ್ದವೆಂದರು.

ಆಟೋ ಮತ್ತು ಕಾರಿನ ಟ್ಯಾಕ್ಸಿಯವರಿಗೆ ಎಮೆರ್ಜೆನ್ಸಿ ಮಾತ್ರ ಅವಕಾಶವಿದೆ. ಗರ್ಭಿಣಿ, ಕೋವಿಡ್ ರೋಗಿ ಓಡಾಡಲು, ವಿಮಾನ ನಿಲ್ದಾಣಕ್ಕೆ ತೆರಳಿದವರಿಗೆ ಮಾತ್ರ ಅವಕಾಶವಿದೆ. ಅನಾವಶ್ಯಕವಾಗಿ ಬಂದರೆ ಪೊಲೀಸರು ತಡೆಯುತ್ತಾರೆ ಎಂದರು.

ಅರ್ಚಕರು ಮಾತನಾಡಿ ಬಸವ ಜಯಂತಿ ಮತ್ತು ಅಕ್ಷಯ ತೃತೀಯ ಇರುವುದರಿಂದ ಬೇರೆಡೆ ಹೋಗಿ ಪೂಜೆ ಮಾಡಲು ಅವಕಾಶ ನೀಡಬೇಕು. ದೇವಸ್ಥಾನದ ಪ್ರತಿದಿನ ಪೂಜೆಗೆ ಅರ್ಚಕರನ್ನ ಬಿಡಲು ಕೋರಲಾಯಿತು.

ಚಿಲ್ಲರೆ ವ್ಯಾಪಾರಸ್ಥರಿಗೆ ಹೋಲ್ ಸೇಲ್ ಡೀಲರ್ ಗೆ ಕೆಲವರು ದ್ವಿಚಕ್ರವಾಹನದಲ್ಲಿ ಸಾಗಿಸಲು ಅವಕಾಶ ಮಾಡಿಕೊಡುವಂತೆ ಕೋರಲಾಯಿತು. ಸಹಕಾರ ಸಂಘಗಳಿಗೂ ಬ್ಯಾಂಕ್ ಅವಧಿ ನಿಗದಿಪಡಿಸಿದಂತೆ ಅವಕಾಶ ನೀಡುವಂತೆ ಕೋರಲಾಯಿತು.

ಆದರೆ ಯಾವುದೇ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಅರ್ಚಕರು ನಡೆದುಕೊಂಡು ಬೆಳಿಗ್ಗೆ 6-11 ಗಂಟೆಯ ಒಳಗೆ ಅವಕಾಶ ನೀಡಲಾಗಿದೆ ಅಷ್ಟರೊಳಗೆ ನಡೆದುಕೊಂಡು ಹೋಗಿ ಬರಬಹುದೇ ವಿನಃ ಯಾವುದೇ ದ್ವಿಚಕ್ರವಾಹನಗಳಿಗೆ ಅವಕಾಶವಿಲ್ಲವೆಂದರು.

RELATED ARTICLES
- Advertisment -
Google search engine

Most Popular

Recent Comments