ಪ್ರಸ್ತುತ ಚಳವಳಿಗಳು ಬಲಿಷ್ಠಗೊಳ್ಳಲಿ : ಶ್ರೀಧರ್ ಕಲಿವೀರ

ಶಿವಮೊಗ್ಗ : ಸಮಾಜದಲ್ಲಿ ವಿವಿಧ ಪ್ರಕಾರದ ಚಳವಳಿಗಳು ಇವೆ ಎಂದು ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಸದಸ್ಯ ಶ್ರೀಧರ್ ಕಲಿವೀರ ಹೇಳಿದರು.
ಇಂದು ನಗರದ ಸರ್ಕಾರಿ ನೌಕರರ ಭವನದಲ್ಲಿ ದಲಿತ ಸಂಘರ್ಷ ಸಮಿತಿ, ಸಹ್ಯಾದ್ರಿ ಕಲಾ ಕಾಲೇಜಿನ ಭಾಷಾ ಶಾಸ್ತ್ರ ಮತ್ತು ಇಂಗ್ಲೀಷ್ ವಿಭಾಗಗಳ ನೆರವಿ ನೊಂದಿಗೆ ಏರ್ಪಡಿಸಿದ್ದ ಸಮಾನ ಚಳವಳಿ ಮತ್ತು ರಾಜಕಾರಣ ವಿಷಯ ಕುರಿತ ರಾಷ್ಟ್ರಮಟ್ಟದ ವಿಚಾರ ಕಮ್ಮಟದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಮಾನಗಳಲ್ಲಿ ಅನೇಕ ಚಳವಳಿಗಳು ನಡೆಯುತ್ತಿದ್ದು, ಅವುಗಳು ಒಂದೊಂದು ದಾರಿಯಲ್ಲಿ ಸಾಗುತ್ತಿವೆ ಎಂದರು.
ಧರ್ಮ, ಜಾತಿ ಹಾಗೂ ದೇವರ ತತ್ವದಲ್ಲಿ ಚಳವಳಿಗಳು ನಡೆದರೆ ಇದಕ್ಕೆ ವಿರುದ್ಧವಾಗಿಯೂ ಸಹ ಮತ್ತೊಂದು ಚಳವಳಿಗಳು ನಡೆಯುತ್ತವೆ ಎಂದ ಅವರು, ಪುಸ್ತಕದಲ್ಲಿ ಅಳವಡಿಸಿರು ವಂತಹ ವಿಷಯದ ಆಧಾರದ ಮೇಲೆಯೇ ನಮ್ಮ ಹೋರಾಟ ಹಾಗೂ ಚಳುವಳಿಗಳು ಆರಂಭಗೊಳ್ಳುತ್ತವೆ ಎಂದರು.
ಸಮಾಜದಲ್ಲಿ ಜಾತಿ, ಧರ್ಮದ ವ್ಯವಸ್ಥೆ ಇಂದಿಗೂ ಇದೆ. ಆದರೆ ಇವುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಚಳವಳಿಗಳು ನಡೆಯುತ್ತಿದ್ದರೂ ಸಹ ಪರಿಣಾಮಕಾರಿಯಾಗಿ ಯಶಸ್ವಿಯಾಗಿಲ್ಲ ಎಂದರು.
ಹಿಂದೂ ಧರ್ಮದಲ್ಲಿ ಅನೇಕ ಜಾತಿಗಳಿವೆ. ಆದರೂ ಸಹ ನಾವೆಲ್ಲ ಒಂದೇ ಎಂದು ಹೇಳುತ್ತಿದ್ದೇವೆ. ಆದರೆ ಇದು ಕೇವಲಿ ಬಾಯಿ ಮಾತಿನಲ್ಲಿ ಉಳಿದಿದೆಯೇ ಹೊರತು, ಆಚರಣೆಯಲ್ಲಿ ಒಂದೇ ಎಂಬುದು ಇಂದಿಗೂ ಸಹ ಎಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಆಚರಣೆಯಲ್ಲಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೇವಲ ರಸ್ತೆಯನ್ನು ಗುಡಿಸಿ, ದೇಶವನ್ನೇ ಸ್ವಚ್ಛ ಮಾಡುತ್ತೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಮೊದಲು ನಮ್ಮ ಮನಸ್ಸಿನಲ್ಲಿರುವ ಕೊಳಕನ್ನು ಸ್ವಚ್ಛ ಗೊಳಿಸುವಂತಹ ಕಾರ್ಯವಾಗಬೇಕೆಂದು ಯಾರ ಹೆಸರನ್ನೂ ಹೇಳದೇ ಮಾತನಾಡಿದ ಅವರು, ಮನಸ್ಸಿನ ಸ್ವಚ್ಛತೆ ಸಮಾಜದ ಸ್ವಚ್ಛತೆಯನ್ನು ಹೋಗಲಾಡಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಿಎಸ್‌ಎಸ್ ಸಂಚಾಲಕ ಗುರುಮೂರ್ತಿ, ಮೇಟಿ ಮಲ್ಲಿಕಾರ್ಜುನ್, ಪಾಂಡುರಂಗ, ಟಿ.ಅವಿನಾಶ್ ಮೊದಲಾದವರಿದ್ದರು.

SHARE
Previous article26 MAR 2018
Next article27 MAR 2018

LEAVE A REPLY

Please enter your comment!
Please enter your name here