ಶಿವಮೊಗ್ಗ : ಪ್ರಸ್ತುತ ದಿನಮಾನಗಳಲ್ಲಿ ವೈದ್ಯಮೀಯ ಕ್ಷೇತ್ರಕ್ಕೆ ಸವಾಲಾಗಿರುವ ಅನೇಕ ವಾಸಿಯಾಗದ ಕಾಯಿಲೆಗಳಿಗೆ ಯೋಗದಲ್ಲಿ ಪರಿಹಾರವಿದೆ ಎಂದು ಮೈಸೂರು ಸುv ರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಹೇಳಿದರು.
ಇಂದು ನಗರದ ಶಿವಗಂಗಾ ಕೇಂದ್ರದಲ್ಲಿ ೫.೬ ಅಡಿ ಎತ್ತರದ ಯೋಗ ಮಹರ್ಷಿ ಪತಂ ಜಲಿ ಮಹಾಸ್ವಾಮಿಗಳ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಂತರ ಮಾತನಾಡಿದ ಅವರು, ಯೋಗದ ಬಗ್ಗೆ ದೇಶ, ವಿದೇಶಗಳಲ್ಲೂ ಕೂಡಾ ಇಂದು ಜಾಗೃತಿ ಮೂಡುತ್ತಿದೆ ಎಂದರು.
ಯೋಗ ಕೇವಲ ಶರೀರಕ್ಕೆ ಮಾತ್ರ ಆರೋಗ್ಯ ವನ್ನು ನೀಡದೇ ಮಾನಸಿಕ ಆರೋಗ್ಯವನ್ನು ನೀಡುವಲ್ಲಿಯೂ ಸಹ ಸಹಕಾರಿಯಾಗಿದೆ ಎಂದ ಅವರು, ಯೋಗದಿಂದ ಮಾನಸಿಕ ಶುದ್ದಿ, ಚಂಚಲತೆ ದೂರವಾಗುತ್ತದೆ ಎಂದರು.
ಯೋಗದ ಬಗ್ಗೆ ಒಂದು ಕಾಲದಲ್ಲಿ ಮೂಗು ಮುರಿಯುತ್ತಿದ್ದವರು ಇಂದು ಮೂಗು ಹಿಡಿದು ಯೋಗ ಮಾಡುತ್ತಿದ್ದಾರೆ. ಮೂಗು ಹಿಡಿದು ಯೋಗ ಮಾಡಿದವರು ದೇಶದ ರಾಯಭಾರಿ ಯಾಗುತ್ತಾರೆ ಎಂಬುದಕ್ಕೆ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರೇ ಸಾಕ್ಷಿಯಾಗಿದ್ದಾರೆ ಎಂದರು.
ಯೋಗದಿಂದ ಶಾರೀರಿಕ ಆರೋಗ್ಯ ವೃದ್ಧಿಯಾಗುತ್ತದೆ. ಕೃತಕವಾಗಿ ನಾವು ಏನೇ ಸೌಂದರ್ಯ ವರ್ಧಕಗಳನ್ನು ಲೇಪಿಸಿಕೊಂಡರೂ ಸಹ ಮುಖದಲ್ಲಿ ಕಾಂತಿ, ತೇಜಸ್ಸು ಬರಲು ಸಾಧ್ಯವಿಲ್ಲ. ಆದರೆ ಯೋಗ ಮಾಡುವವನ ಮುಖದಲ್ಲಿ ನೈಸರ್ಗಿಕವಾಗಿ ತೇಜಸ್ಸು, ಕ್ರಾಂತಿ ಹೊರಹೊಮ್ಮುತ್ತದೆ ಎಂದರು.
ವಿಧಾನಪರಿಷತ್‌ನ ನೂತನ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಎಲ್ಲ ಆಚರಣೆಗಳಿಗೂ ಮೂಲ ಭಾರತ ದೇಶ ವಾಗಿದೆ. ಅದೇ ರೀತಿ ಯೋಗಕ್ಕೂ ಸಹ ಭಾರ ತವೇ ಮೂಲ ಕೇಂದ್ರವಾಗಿದೆ ಎಂದು ಹೇಳಿದರು.
ಇಂದ್ರೀಯಗಳನ್ನು ನಿಗ್ರಹಿಸುವಂತಹ ಶಕ್ತಿ ಇರುವುದು ಯೋಗಕ್ಕೇ ಎಂದ ಅವರು, ಯೋಗ ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಮತ್ತು ಸ್ವಾಸ್ಥ್ಯವನ್ನು ಕಾಪಾಡುವನಿಟ್ಟಿನಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನೂತನ ವಿಧಾನಪರಿಷತ್ ಸದಸ್ಯರುಗಳಾದ ಎಸ್.ರುದ್ರೇಗೌಡ ಹಾಗೂ ಆಯನೂರು ಮಂಜುನಾಥ್ ಇವರನ್ನು ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷ ಹಾಗೂ ಯೋಗ ಗುರು ರುದ್ರಾರಾಧ್ಯ, ಕೈಗಾರಿಕೋದ್ಯಮಿ ನಂಜುಂಡಶೆಟ್ಟಿ, ಎಪಿಎಂಸಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಮೊದಲಾದವರಿದ್ದರು.