Saturday, October 12, 2024
Google search engine
Homeಅಂಕಣಗಳುಲೇಖನಗಳುಶೀಘ್ರದಲ್ಲೇ ಸಚಿವರ ಬಳಿ ಸ್ಲಂ ನಿವಾಸಿಗಳ ನಿಯೋಗ

ಶೀಘ್ರದಲ್ಲೇ ಸಚಿವರ ಬಳಿ ಸ್ಲಂ ನಿವಾಸಿಗಳ ನಿಯೋಗ

ಶಿವಮೊಗ್ಗ : ರಾಜ್ಯ ಸರ್ಕಾರವು ಸಾಮಾಜಿಕ ಹಾಗೂ ಆರ್ಥಿಕ ಗಣತಿ ಯನ್ನು ನಡೆಸಿ ಎರಡು ವರ್ಷವಾದರೂ ಸಹಾ ಇಲ್ಲಿಯವರೆಗೂ ವರದಿ ಬಿಡುಗಡೆ ಮಾಡಿಲ್ಲ. ಕಳೆದ ಡಿಸೆಂಬರ್‌ನಲ್ಲಿ ವರದಿ ಬಿಡುಗಡೆಮಾಡುವುದಾಗಿ ಹೇಳಿತ್ತು. ಹಿಂದುಳಿದ ವರ್ಗ ಮತ್ತು ಮುಸ್ಲಿಮರು ತಮ್ಮ ಬುಟ್ಟಿಯಲ್ಲಿದ್ದಾರೆ ಎಂದು ಅದು ತಿಳಿದುಕೊಂಡಿದೆ. ವರದಿ ಬಿಡುಗಡೆಯಾ ದಲ್ಲಿ ಪಕ್ಷದಲ್ಲಿ ಭಿನ್ನಮತ ಭುಗಿಲೇಳುವ ಸಾಧ್ಯತೆ ಇದೆ ಎಂದು ಭಾವಿಸಿ ವರದಿ ಬಿಡುಗಡೆಮಾಡುತ್ತಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲೇ ಜಾತಿಗಣತಿಯನ್ನು ಬಹಿ ರಂಗಪಡಿಸಬೇಕು ಎಂದು ಒತ್ತಾಯಿಸಿದರು.
೯೪ ಸಿ ಕಾಯ್ದೆಯ ಅನ್ವಯ ಹಕ್ಕುಪತ್ರ ಕೊಡುವ ಭರವಸೆ ನೀಡಿದ ರಾಜ್ಯ ಸರ್ಕಾರ ಈವರೆಗೆ ಅದನ್ನು ಈಡೇರಿಸಿಲ್ಲ ಬೇಸರ ವ್ಯಕ್ತಪಡಿಸಿದ ಅವರು, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಈ ಬಗ್ಗೆ ಜಾರಿಕೆಯ ಮಾತನಾಡುತ್ತಾರೆ. ಎಲ್ಲಾ ಶಾಸಕರು ತಮ್ಮ ಕ್ಷೇತ್ರದ ಆಶ್ರಯ ಸಮಿ ತಿಯ ಸಭೆ ನಡೆಸಿ ಮಾಹಿತಿ ಕೊಟ್ಟಿಲ್ಲ. ಇದ ರಿಂದ ಸಮಗ್ರ ವಿವರ ದೊರಕಿಲ್ಲ ಎಂದು ಹೇಳುತ್ತಿದ್ದಾರೆ. ಇದು ಸಲ್ಲದು, ಸಚಿ ವರಾದವರು ಕಾಯ್ದೆಯ ಅನುಷ್ಠಾನಕ್ಕೆ ಮುಂದಾ ಗಬೇಕೆಂದರು.
ಜುಲೈ ೧೦ ಮತ್ತು ೧೧ ರಂದು ಬಿಜೆಪಿ ಸ್ಲಂ ಮೋರ್ಚಾ ವತಿ ಯಿಂದ ಕೊಳಚೆ ಪ್ರದೇ ಶದ ವಾಸಿಗಳ ನಿಯೋಗವನ್ನು ವಸತಿ ಸಚಿವರಲ್ಲಿಗೆ ಕರೆದೊಯ್ಯಲು ನಿರ್ಧರಿ ಸಲಾಗಿದೆ. ಈ ಜನರಿಗೆ ಹಕ್ಕುಪತ್ರ ಕೊಡು ವಂತೆ ಎಂಎಲ್‌ಸಿ ಆದಾಗಿನಿಂದ ಪ್ರತಿ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತಿದ್ದರೂ, ಇಲ್ಲಿಯವರೆಗೂ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದಿನ ವರ್ಷ ಚುನಾವಣೆ ಬರಲಿ ರುವ ಹಿನ್ನೆಲೆಯಲ್ಲಿ ಈ ವಿಷಯವನ್ನು ರಾಜ ಕೀಯಗೊಳಿಸಲಾಗುತ್ತಿದೆ ಎಂದು ಕೆಲವರು ಹೇಳುತ್ತಿ ದ್ದಾರೆ. ಯಾರು ಏನೇ ಹೇಳಿ ದರೂ, ಬಡವರಿಗೆ ಸಿಗ ಬೇಕಾದ ಹಕ್ಕುಪತ್ರಕ್ಕೆ ತಾನು ಹೋರಾ ಡು ವುದಾಗಿ ಹೇಳಿದರು.
ಪತ್ರಕರ್ತ ರವಿಬೆಳಗೆರೆ ಅವರ ಬಂಧನಕ್ಕೆ ನೀಡಿ ರುವ ಆದೇಶ ಒಳ್ಳೆಯ ಬೆಳವಣಿಗೆಯಲ್ಲ. ಈ ನಿರ್ಣಯವನ್ನು ಮರುಪರಿಶೀಲಿಸ ಬೇಕು ಎಂದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಪತ್ರಿಕಾ ರಂಗ ೪ನೇ ಅಂಗ ವಾಗಿದ್ದು, ಈ ಹಿನ್ನೆಲೆಯಲ್ಲಿ ಪತ್ರಕರ್ತರ ಬಂಧನಕ್ಕೆ ನೀಡಿರುವ ಆದೇಶವನ್ನು ಮರು ಪರಿಶೀಲಿಸಿ ಹಿಂಪಡೆಯ ಬೇಕೆಂದರು.
ಉಡುಪಿಯಲ್ಲಿ ಪೇಜಾವರ ಸ್ವಾಮೀಜಿ ಮುಸ್ಲಿಮರಿಗೆ ಮಠದಲ್ಲಿ ಇಫ್ತಿಯಾರ್ ಕೂಟವನ್ನು ಏರ್ಪ ಡಿಸಿದ್ದು ಒಳ್ಳೆಯ ಬೆಳವಣಿಗೆ. ಎಲ್ಲ ವ್ಯಕ್ತಿಗಳನ್ನು, ಎಲ್ಲ ಜಾತಿಯನ್ನು ಗೌರವಿಸುವ ತಮ್ಮ ಗುಣವನ್ನು ಸ್ವಾಮೀಜಿ ಪ್ರಕಟಿಸಿ ದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಸ್. ದತ್ತಾತ್ರಿ, ಎಸ್.ಎನ್. ಚನ್ನಬಸಪ್ಪ, ಬಿಳಕಿ ಕೃಷ್ಣಮೂರ್ತಿ, ಬಿ.ಆರ್. ಮಧು ಸೂದನ, ಜ್ಞಾನೇಶ್ವರ , ಅಣ್ಣಪ್ಪ, ಅನಿತಾ ರವಿಶಂಕರ್, ಹಾಜರಿದ್ದರು.

RELATED ARTICLES
- Advertisment -
Google search engine

Most Popular

Recent Comments