ತರುಣ್ ಸುಧೀರ್ ಹಾಗೂ ಸೋನಲ್ ಮದುವೆ ಡೇಟ್ ಫಿಕ್ಸ್ ಆಗಿದೆ. ಇದೇ ವರ್ಷ ಆಗಸ್ಟ್ ತಿಂಗಳಲ್ಲಿ ನಾಲ್ಕು ದಿನ ಮದುವೆ ಪ್ಲಾನ್ ಆಗಿದೆ. ಬರೋಬ್ಬರಿ ಎರಡು ದಿನ ಮದುವೆ ಪ್ಲಾನ್ ಆಗಿದೆ. ಇನ್ನು ಒಂದು ದಿನ ರಿಸೆಪ್ಷನ್ ಪ್ಲಾನ್ ಆಗಿದೆ. ಮತ್ತೊಂದು ದಿನ ಮದುವೆ ನಡೆಯುತ್ತಿದೆ.
ಆಗಸ್ಟ್ 10, 11ರಂದು ಬೆಂಗಳೂರಿನ ಕೆಂಗೇರಿ ಬಳಿ ಇರುವ ಪೂರ್ಣಿಮಾ ಫ್ಯಾಲೆಸ್‌ನಲ್ಲಿ ವಿವಾಹ ಜರುಗಲಿದೆ.
ಈ ಒಂದು ವಿಷಯವನ್ನ ತಿಳಿಸಲು ಡೈರೆಕ್ಟರ್ ತರುಣ್ ಸುಧೀರ್ ಒಂದು ಒಳ್ಳೆ ಪ್ರೋಮೋ ರೀತಿಯ ವಿಡಿಯೋ ಮಾಡಿದ್ದಾರೆ. ಒಂದ್ ಒಳ್ಳೆ ಕಾನ್ಸೆಪ್ಟ್ ಮೂಲಕ ವಿಡಿಯೋ ಮಾಡಿಸಿದ್ದಾರೆ. ತರುಣ್ ಸುದೀರ್ ಹಾಗೂ ಸೋನಲ್ ಒಂದು ಥಿಯೇಟರ್‌ನಲ್ಲಿಯೇ ಭೇಟಿಯಾಗೋ ಕ್ಷಣದ ವಿಡಿಯೋ ಇದಾಗಿದೆ. ಇದನ್ನ ಬೆಂಗಳೂರಿನ ನವರಂಗ್ ಥಿಯೇಟರ್‌ನಲ್ಲಿ ಚಿತ್ರೀಕರಿಸಲಾಗಿದೆ. ಕ್ಯಾಮರಾಮನ್ ಎ.ಜೆ.ಶೆಟ್ಟಿ ಈ ಒಂದು ವಿಡಿಯೋವನ್ನ ಚಿತ್ರೀಕರಿಸಿದ್ದಾರೆ.
ತರುಣ್ ಮತ್ತು ಸೋನಲ್ ಮದುವೆ ವಿಡಿಯೋ ಸ್ಪೆಷಲ್ ಆಗಿದೆ. ಮೈ ಲೇಡಿ ಅನ್ನೋ ಈ ಸ್ಪೆಷಲ್ ವಿಡಿಯೋದಲ್ಲಿ ತರುಣ್ ಮತ್ತು ಸೋನಲ್ ಸ್ಪೆಷಲ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಉಡುಗೆ ತೊಟ್ಟು ಇಬ್ಬರು ಕ್ಲಾಸ್ ಆಗಿಯೇ ಕಾಣಿಸಿಕೊಂಡಿದ್ದಾರೆ.
ಸಿನಿಮಾ ಅಂದರೆ ಸಿಂಗಲ್ ಸ್ಕ್ರಿನ್ ಥಿಯೇಟರ್ ಅದರಲ್ಲೂ ನಿರ್ದೇಶಕ ತರುಣ್ ಚಿಕ್ಕ ವಯಸ್ಸಿನಿಂದಲೂ ನವರಂಗ್ ಥಿಯೇಟರ್‌ನಲ್ಲಿ ಸಿನಿಮಾಗಳನ್ನ ನೋಡಿಕೊಂಡು ಬಂದವರು. ಈಗ ತಮ್ಮ ನಿರ್ದೇಶನದ ಸಿನಿಮಾಗಳು ನವರಂಗ್ ಥಿಯೇಟರ್‌ನಲ್ಲಿ ಶತದಿನೋತ್ಸವ ಪೂರೈಸಿವೆ. ಹಾಗಾಗಿ ನವರಂಗ್ ಥಿಯೇಟರ್‌ನಲ್ಲೇ ತಮ್ಮ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ.
ಇನ್ನು ಪ್ರಿ ವೆಡ್ಡಿಂಗ್ ಶೂಟ್‌ನಲ್ಲಿ ತರುಣ್ ಮತ್ತು ಸೋನಲ್ ಬ್ಲ್ಯಾಕ್ ಬಣ್ಣದ ಔಟ್ ಫಿಟ್‌ನಲ್ಲಿ ಕಾಣಿಸಿಕೊಂಡಿದ್ದು, ತರುಣ್‌ಗೆ ಡಿಸೈನರ್ ಚೇತನ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಸೋನಲ್‌ಗೆ ರಶ್ಮಿ ಎಂಬುವವರು ಡಿಸೈನ್ ಮಾಡಿದ್ದಾರೆ.