Thursday, December 5, 2024
Google search engine
Homeಇ-ಪತ್ರಿಕೆವಾಲ್ಮೀಕಿ ಹಗರಣ: ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಜು.3ರಂದು ಸಿಎಂ ಮನೆ ಮುತ್ತಿಗೆ-ವಿಜಯೇಂದ್ರ

ವಾಲ್ಮೀಕಿ ಹಗರಣ: ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಜು.3ರಂದು ಸಿಎಂ ಮನೆ ಮುತ್ತಿಗೆ-ವಿಜಯೇಂದ್ರ

ಶಿವಮೊಗ್ಗ: ಭ್ರಷ್ಟಾಚಾರದ ವಿರುದ್ಧ ಬಿಜೆಪಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದೆ . ಜು.೩ ನೇ ತಾರೀಖು ಮಂಗಳವಾರ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಅವರು ಇಂದು ಸುದ್ಧಿಗಾರರೊಂದಿಗೆ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ಮಾಡಿಕೊಂಡು ಬಂದಿದೆ, ಹೋರಾಟದ ಫಲ ನಾಗೇಂದ್ರ ರಾಜೀನಾಮೆ ಕೊಡಬೇಕಾಯಿತು, ಚಂದ್ರಶೇಖರ ಡೇತ್ ನೋಟ್ ನಲ್ಲಿ ಅನೇಕ ಅಂಶ ಉಲ್ಲೇಖ ಆಗಿದೆ, ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದರು.

ಇದರ ವಿರುದ್ಧ ನಿರಂತರವಾಗಿ ರಾಜ್ಯಾದ್ಯಂತ ಹೋರಾಟ ಮಾಡಿದ್ದೇವೆ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಕೆಲಸ ಹಾಕಿದ್ದೇವೆ. ರಾಜ್ಯದಲ್ಲಿ ಇಷ್ಟು ದೊಡ್ಡ ಮಟ್ಟದ ಹಗರಣ ನಡೆದಿದೆ, ವಾಲ್ಮೀಕಿ ಸಮಾಜಕ್ಕೆ ಮೀಸಲಿಟ್ಟ ಹಣವನ್ನು ಸರ್ಕಾರ ಲೂಟಿ ಮಾಡಿದೆ ಎಂದು ಹೇಳಿದರು.

ಸರ್ಕಾರ ಹಣ ಲೂಟಿ ಮಾಡಿರುವ ವಿರುದ್ಧ ಹೋರಾಟ ಮಾಡುತ್ತಿದ್ದೇವೆ, ಶರಣ ಪ್ರಕಾಶ್ ಪಾಟೀಲ್, ಬೋರ್ಡ್ ಅಧ್ಯಕ್ಷರು ಸೇರಿ ಮುಖ್ಯಮಂತ್ರಿಗಳು ಸಹ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳ ಗಮನಕ್ಕೆ ಬಾರದೇ ಇಷ್ಟು ದೊಡ್ಡ ಹಗರಣ ನಡೆಯಲು ಸಾಧ್ಯವಿಲ್ಲ, ಲೋಕಸಭಾ ಚುನಾವಣೆ ನಡೆಯುವ ಸಂದರ್ಭದಲ್ಲಿ ಇಷ್ಟೋಂದು ದೊಡ್ಡ ಹಗರಣ ಆಗಿದೆ, ರಾಜ್ಯದ ಇತಿಹಾಸದಲ್ಲಿ ಇಂತಹ ದೊಡ್ಡ ಹಗರಣ ನಡೆದಿಲ್ಲ, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣ ದುರುಪಯೋಗವಾಗಿದೆ, ಲೋಕಸಭೆ ಚುನಾವಣೆಗೆ ಈ ಹಣ ಉಪಯೋಗ ಆಗಿದೆ ಎನ್ನುವ ಚರ್ಚೆಮಾಡಿದ್ದಾರೆ, ಸತ್ಯನಾರಾಯಣ ವರ್ಮ ಅವರಿಗೆ ಕೊಲೆ ಬೆದರಿಕೆ ಬರುತ್ತಿದೆ ಎಂದರು.

ಸಾವಿರಾರು ಅಕೌಂಟ್ ಓಪನ್ ಮಾಡಿ ಹಣ ವರ್ಗಾವಣೆ ಮಾಡಿದ್ದಾರೆ, ಘಟನೆ ನಡೆದು ಇಷ್ಟು ದಿನಾ ಆದ್ರೂ ಎಸ್‌ಐಟಿ ತನಿಖೆಗೆ ಇಲ್ಲಿಯವೆಗೆ ಕರೆದಿಲ್ಲ, ಸಿಎಂ ತಮ್ಮ ಬುಡಕ್ಕೆ ಬರುತ್ತೆ ಅಂತ ಅವರ ಸರ್ಕಾರ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರೈತರು ಬರಗಾಲದಿಂದ ಕಂಗಾಲಾಗಿದ್ದಾರೆ, ನಿರೀಕ್ಷಿತ ಮಟ್ಟದಲ್ಲಿ ಮಳೆ ಸರಿಯಾಗಿ ಆಗುತ್ತಿಲ್ಲ, ಬಿತ್ತನೆ ಬೀಜ ದುಬಾರಿ ಆಗುತ್ತಿದೆ, ಲೋಕಸಭಾ ಸಭೆ ತನಕ ಒಗ್ಗಟಿನ ಪ್ರದರ್ಶನ ಮಾಡುತ್ತಿದ್ದರು, ಈಗ ಹಾದಿಲಿ ಬೀದಿಲಿ ಸಿಎಂ,ಡಿಸಿಎಂ ಬಗ್ಗೆ ಚೆರ್ಚೆ ಆಗುತ್ತಿದೆ, ಮುಖ್ಯಮಂತ್ರಿ ಬದಲಾಗಬೇಕು ಅಂತ ಚೆರ್ಚೆ ಆಗುತ್ತಿದೆ ಎಂದ ಅವರು, ರಾಜ್ಯದ ಜನರ ಪಾಲಿಗೆ ಸರ್ಕಾರ ಶಾಪವಾಗಿದೆ, ರೈತರ ಬಗ್ಗೆ ಈ ಸರ್ಕಾರಕ್ಕೆ ಕಾಳಜಿ ಇಲ್ಲ,ಇ ಂತಹ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದರು.

RELATED ARTICLES
- Advertisment -
Google search engine

Most Popular

Recent Comments