Thursday, December 5, 2024
Google search engine
Homeಇ-ಪತ್ರಿಕೆಶಿವಮೊಗ್ಗ: ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ

ಶಿವಮೊಗ್ಗ: ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ

ಶಿವಮೊಗ್ಗ: 2020ರಲ್ಲಿ ನಡೆದ ಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿ 3 ಜನ ಆರೋಪಿಗಳಿಗೆ ಜೀವಾವದಿ ಶಿಕ್ಷೆ ಹಾಗೂ ತಲಾ 20 ಸಾವಿರ ರೂ ದಂಡ ವಿಧಿಸಿ ಘನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಜುಲೈ 27ರ ರಾತ್ರಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಳಲೂರು ಗ್ರಾಮದ ವಾಸಿಗಳಾದ ರಿಯಾಸ್, ಮುನಿರಾಜು ಮತ್ತು ಅರುಣ ರವರುಗಳು ಅದೇ ಗ್ರಾಮದ ವಾಸಿ ಮಲ್ಲೇಶಪ್ಪ( 39) ಇವರ ಮೇಲಿದ್ದ ವೈಯಕ್ತಿಕ ದ್ವೇಶದ ಹಿನ್ನೆಲೆಯಲ್ಲಿ ಮಲ್ಲೇಶಪ್ಪನವರ ಜಮೀನಿನ ಹತ್ತಿರ ಹರಿತವಾದ ಆಯುಧದಿಂದ ಆತನ ಮೈ ಕೈ ಗೆ ಚುಚ್ಚಿ, ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿರುವುದಾಗಿ ದೂರು ದಾಖಲಾಗಿದೆ.

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ಮಮತಾ, ಬಿ. ಎಸ್ ಸರ್ಕಾರಿ ಅಭಿಯೋಜಕರವರು, ವಾದ ಮಂಡಿಸಿದ್ದು, ಘನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಡ ಪಟ್ಟಿ ಸಲ್ಲಿಸಿದ್ದರು.‌

ದೋಷಾರೋಪಣ ಪಟ್ಟಿ ಸಲ್ಲಿಸಿದ ಹಿನ್ನೆಲೆಯಲ್ಲಿ, ನ್ಯಾಯಾಧೀಶ  ಮರುಳ ಸಿದ್ಧಾರಾಧ್ಯ ಹೆಚ್. ಜೆ. ಇಂದು (ಬುಧವಾರ) ಪ್ರಕರಣದ ಆರೋಪಿಗಳಾದ ರಿಯಾಸ್(22), ಮುನಿರಾಜು(33), ಅರುಣ(20) ಇವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 20,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ 6 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.

RELATED ARTICLES
- Advertisment -
Google search engine

Most Popular

Recent Comments