Wednesday, September 18, 2024
Google search engine
Homeಅಂಕಣಗಳುಲೇಖನಗಳುಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯ ವಾರ್ಡ್‌ಗಳ ಪುನರ್ ವಿಂಗಡಣೆ ಅಗತ್ಯವಿತ್ತೇ...?

ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯ ವಾರ್ಡ್‌ಗಳ ಪುನರ್ ವಿಂಗಡಣೆ ಅಗತ್ಯವಿತ್ತೇ…?

ಶಿವಮೊಗ್ಗ : ಇಲ್ಲಿನ ಮಹಾನಗರ ಪಾಲಿಕೆಯ ೩೫ ವಾರ್ಡ್‌ಗಳಿಗೆ ಬಡಾವಣೆ ಗಳ ವಿಂಗಡಣೆ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ ಕಳೆದ ಮಾರ್ಚ್ ೧೦ ರಂದು ಜಿಲ್ಲಾಧಿಕಾರಿಗಳು ಕರಡು ಅಧಿಸೂಚನೆ ಹೊರಡಿಸಿದ್ದಾರೆ.
ಪ್ರಸ್ತುತ ಅಧಿಸೂಚನೆ ಪ್ರಕಾರ ವಾರ್ಡ್ ಗಳ ಸಂಖ್ಯೆಯೂ ಕೂಡಾ ಬದಲಾಗಿದ್ದು, ಬಡಾವಣೆಗಳೂ ಕೂಡಾ ಬೇರೆ ವಾರ್ಡ್ ಗಳಿಗೆ ಸೇರ್ಪಡೆಗೊಂಡಿವೆ. ವಾರ್ಡ್ ನಂ. ೧ರಲ್ಲಿದ್ದ ಬೊಮ್ಮನಕಟ್ಟೆ ಬಡಾವಣೆಯನ್ನು ವಾರ್ಡ್ ೧ ಹಾಗೂ ೨ ವಾರ್ಡ್‌ಗಳಿಗೆ ವಿಂಗಡಿಸಲಾಗಿದೆ.
ಬೊಮ್ಮನಕಟ್ಟೆ ಆಶ್ರಯ ಬಡಾವಣೆ ಇ ಮತ್ತು ಸಿ ಬ್ಲಾಕ್‌ಗಳ ಗಡಿಯನ್ನು ಬಳಸಿ ಕೊಂಡು ಬಡಾವಣೆಯ ಸಿ ಮತ್ತು ಡಿ ಬ್ಲಾಕ್‌ಗಳನ್ನೂ ಕೂಡಾ ವಾರ್ಡ್ ನಂ. ೧ಕ್ಕೆ ಸೇರ್ಪಡೆಗೊಳಿಸಲಾಗಿದೆ. ಉಳಿದ ಬಡಾವಣೆಯನ್ನು ವಾರ್ಡ್ ನಂ. ೨ಕ್ಕೆ ಸೇರ್ಪಡೆಗೊಳಿಸಲಾಗಿದ್ದು, ಈ ಹಿಂದೆ ಇದ್ದ ವಾರ್ಡ್ ನಂ. ೨ನ್ನು ಇದೀಗ ವಾರ್ಡ್ ನಂ. ೩ ಎಂದು ಘೋಷಿಸಲಾಗಿದೆ. ಈ ಬಡಾ ವಣೆಗೆ ಅಮೀರ್ ಅಹಮದ್ ಕಾಲೋನಿ ಯನ್ನು ಹೊಸದಾಗಿ ಸೇರ್ಪಡೆಗೊಳಿ ಸಲಾಗಿದೆ.
ಇದೇ ರೀತಿ ವಿವಿಧ ಬಡಾವಣೆಗಳಲ್ಲಿನ ಕೆಲ ಪ್ರದೇಶಗಳನ್ನು ಈ ಹಿಂದೆ ಇದ್ದ ವಾರ್ಡ್‌ನಿಂದ ಬೇರೆ ವಾರ್ಡ್‌ಗೆ ಸ್ಥಳಾಂತರಿ ಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಮತ್ತು ಸಲಹೆ, ಸೂಚನೆಗಳನ್ನು ಸಲ್ಲಿಕೆಗೂ ಕೂಡಾ ಅವಕಾಶ ಮಾಡಿಕೊಡ ಲಾಗಿತ್ತು. ಕರಡು ಅಧಿಸೂಚನೆ ಹೊರಡಿ ಸಿದ ೧೫ ದಿನಗಳ ಒಳಗೆ ಆಕ್ಷೇಪಣೆ ಮತ್ತು ಸಲಹೆ, ಸೂಚನೆಗಳನ್ನು ನೀಡಲು ಸಮಯಾವಕಾಶ ಇದ್ದುದರಿಂದ ಈ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಇದಕ್ಕೆ ಸಂಬಂಧಿಸಿದಂತೆ ಇವೆಲ್ಲವೂ ಕೂಡಾ ಡಿಯುಡಿಸಿ ಇಲಾಖೆಯಲ್ಲಿ ಇವೆ.
ಆಕ್ಷೇಪಣೆಗಳನ್ನು ಮತ್ತು ಸಲಹೆ ಸೂಚನೆಗಳನ್ನು ಪರಿಶೀಲಿಸಲು ಮತ್ತು ಅದರ ಬಗ್ಗೆ ಚರ್ಚೆ ನಡೆಸಲು ಮುಂದಿನ ವಾರದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಭೌಗೋಳಿಕತೆಯ ಆಧಾರದ ಮೇಲೆ ವಾರ್ಡ್‌ಗಳ ವಿಂಗಡಣೆ ಮಾಡಲಾಗಿದೆ ಎಂದು ಹೇಳ ಲಾಗುತ್ತಿದೆ. ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆ ಗೇರಿದ ನಂತರ ವಾರ್ಡ್‌ಗಳ ಸಂಖ್ಯೆ ಹೆಚ್ಚಾಗಬೇಕಾಗಿತ್ತು. ಆದರೆ ಮೊದಲಿದ್ದ ೩೫ ವಾರ್ಡ್‌ಗಳ ಸಂಖ್ಯೆಯಲ್ಲಿ ಯಾವುದೇ ಏರಿಕೆ ಅಥವಾ ಬದಲಾವಣೆಯಾಗಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್‌ಗಳ ಪುನರ್ ವಿಂಗಡಣೆ ಯಾಗಬೇಕಿತ್ತು. ಆದರೆ ಇದ್ಯಾವುದನ್ನೂ ಮಾಡದೇ ಕೇವಲ ಬಡಾ ವಣೆಗಳ ಅದಲು ಬದಲು ಮಾಡಲಾಗಿದೆ.
ಈ ರೀತಿಯ ಕ್ರಮದಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅಲ್ಲದೆ ಪ್ರಸ್ತುತ ಪಾಲಿಕೆಯಲ್ಲಿ ಆಯಾ ವಾರ್ಡ್ ಗಳ ದಾಖಲಾತಿಗಳು ನಮೂದಾಗಿರುತ್ತವೆ. ಬಡಾವಣೆಗಳ ಬದಲಾವಣೆಯಿಂದ ದಾಖಲಾತಿಯಲ್ಲಿ ಸಂಪೂರ್ಣ ಬದಲಾವಣೆ ಯಾಗಬೇಕಾಗುತ್ತದೆ. ಇದರಿಂದ ಗೊಂದಲ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.
ಒಟ್ಟಾರೆ ಪ್ರಸ್ತುತ ನಡೆಯುತ್ತಿರುವ ವಾರ್ಡ್ ವಿಂಗಡಣೆ ಕಾರ್ಯ ಸಂಪೂರ್ಣ ಅವೈಜ್ಞಾನಿಕ ಎಂದರೆ ತಪ್ಪಾಗಲಾರದು. ಇದರಿಂದ ಯಾವುದೇ ಪ್ರಯೋಜನ ನಾಗರೀಕರಿಗೆ ದೊರೆಯುವುದಿಲ್ಲ.
ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಯಾವುದೇ ದೋಷವಿಲ್ಲದಿದ್ದರೂ ಸಹ ವಾರ್ಡ್‌ಗಳ ಪುನರ್ ವಿಂಗಡಣೆ ಕಾರ್ಯ ಯಾವ ಪುರು ಷಾರ್ಥಕ್ಕಾಗಿ ಕೈಗೊಳ್ಳಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಒಟ್ಟಾರೆ ವಾರ್ಡ್‌ಗಳ ಪುನರ್ ವಿಗಂಡಣೆ ಯಾಗುವ ಬದಲು ಜನಸಂಖ್ಯೆಗೆ ಅನುಗುಣ ವಾಗಿ ವಾರ್ಡ್‌ಗಳನ್ನು ಹೆಚ್ಚಿಸಬೇಕಾಗಿತ್ತು. ಆ ಮೂಲಕ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವನ್ನು ಕಲ್ಪಿಸಿಕೊಡಬೇಕಾಗಿತ್ತು. ಇದ್ಯಾವುದನ್ನೂ ಮಾಡದೇ ಕೇವಲ ಅದಲು ಬದಲು ಮಾಡುವಂತಹ ಕಾರ್ಯ ಸಂಪೂರ್ಣ ಅವೈಜ್ಞಾನಿಕ ಎಂಬುದು ಎಲ್ಲೆಡೆ ಕೇಳಿಬರುತ್ತಿರುವ ಅಭಿಪ್ರಾಯವಾಗಿದೆ.

ವಾರ್ಡ್‌ಗಳ ಪುನರ್‌ವಿಂಗಡಣೆ ಸಂಬಂಧ ಈಗಾಗಲೇ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಇದಕ್ಕೆ ಆಕ್ಷೇಪಣೆ ಹಾಗೂ ಸಲಹೆ, ಸೂಚನೆಗಳನ್ನು ಸಲ್ಲಿಸಲು ಕೂಡಾ ಅವಕಾಶ ಕಲ್ಪಿಸಲಾಗಿತ್ತು. ಮುಂದಿನ ವಾರದಲ್ಲಿ ಇವುಗಳನ್ನು ಪರಿಶೀಲಿಸಿ ಈ ವಿಷಯಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
– ಡಿಸಿ ಡಾ|| ಎಂ.ಲೋಕೇಶ್

ವಾರ್ಡ್‌ಗಳ ಪುನರ್ ವಿಂಗಡಣೆಯಿಂದ ಆಡಳಿತಾತ್ಮಕವಾಗಿ ಅಥವಾ ನಾಗರೀಕರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಈ ರೀತಿ ಮಾಡುವುದರಿಂದ ಪಾಲಿಕೆಯ ಸಿಬ್ಬಂದಿ ವರ್ಗದವರಿಗೆ ಕೆಲಸದ ಒತ್ತಡ ಬೀಳುತ್ತದೆ. ಇದರ ಬಗ್ಗೆ ಈಗಾಗಲೇ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ, ಮುಂಬರುವ ದಿನಗಳಲ್ಲಿ ಇದರ ಬಗ್ಗೆ ಪುನರ್ ಪರಿಶೀಲನೆ ನಡೆಸುವಂತೆಯೂ ಸಹ ಮನವಿ ಮಾಡಲಾಗುವುದು.
– ಮೇಯರ್ ಏಳುಮಲೈ

ಈಗಾಗಲೇ ವಾರ್ಡ್‌ಗಳ ಪುನರ್‌ವಿಂಗಡಣೆ ಕಾರ್ಯ ನಡೆದಿದೆ. ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಈ ಹಿಂದೆ ಇದ್ದ ಬಡಾವಣೆ ಯನ್ನು ಯಾವುದೋ ವಾರ್ಡ್‌ಗೆ ಸೇರ್ಪಡೆಗೊಳಿಸಿರುವುದು ಅತ್ಯಂತ ದೋಷಪೂರಿತವಾಗಿದೆ. ಈ ಕಾರ್ಯದಿಂದ ಯಾವುದೇ ಪ್ರಯೋಜನವಿಲ್ಲ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಕ್ಷೇಪಣೆ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ನಡೆಸುವ ಸಭೆಯಲ್ಲಿ ಈ ಕಾರ್ಯದಿಂದ ಆಗುವ ನ್ಯೂನ್ಯತೆ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು.
-ಡಿ.ಮೋಹನ್ ರೆಡ್ಡಿ

ವಾರ್ಡ್‌ಗಳ ಪುನರ್‌ವಿಂಗಡಣೆ ಕಾರ್ಯದಿಂದ ನಾಗರೀಕರಿಗೆ ತೊಂದರೆಯೇ ಹೊರತು, ಯಾವುದೇ ಪ್ರಯೋಜನವಿಲ್ಲ. ಈಗಾಗಲೇ ನಾಗರೀಕರು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಎಲ್ಲವನ್ನೂ ಹೊಂದಿದ್ದಾರೆ. ವಾರ್ಡ್‌ಗಳು ಬೇರೆಯಾಗುವುದರಿಂದ ತಮ್ಮ ದಾಖಲಾತಿಯಲ್ಲಿಯೂ ಕೂಡಾ ಬದಲಾವಣೆ ಮಾಡಿಕೊಳ್ಳ ಬೇಕಾಗುತ್ತದೆ. ಪಾಲಿಕೆಯಲ್ಲಿಯೂ ಸಹ ಸಿಬ್ಬಂದಿಗಳು ದಾಖಲಾತಿ ಯನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ಇದರಿಂದ ಕೆಲಸದ ಹೊರಯೇ ಹೊರತು ನಾಗರೀಕರಿಗೆ ಯಾವುದೇ ಪ್ರಯೋಜನ ವಾಗುವುದಿಲ್ಲ. ಆದ್ದರಿಂದ ಇದೊಂದು ಸಂಪೂರ್ಣ ಅವೈಜ್ಞಾನಿಕ ಕಾರ್ಯವಾಗಿದೆ.
– ಎನ್.ಜೆ. ರಾಜಶೇಖರ್

RELATED ARTICLES
- Advertisment -
Google search engine

Most Popular

Recent Comments