ಸರ್ವರ ಹಿತಕ್ಕೆ ಪರಿಸರ ಉಳಿಸಿ

ಶಿವಮೊಗ್ಗ : ಸಕಲ ಜೀವರಾಶಿಗಳಿಗೂ ಹಾಗೂ ನಾಡಿಗೆ ಒಳ್ಳೆಯದಾಗಬೇಕಾದರೆ ಪರಿಸರ ಉತ್ತಮವಾಗಿರ ಬೇಕೆಂದು ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ ಹೇಳಿದರು.
ಇಂದು ನಗರದ ವಿವಿಧ ಬಡಾವಣೆಗಳಲ್ಲಿ ಮಹಾನಗರಪಾಲಿಕೆ ವತಿಯಿಂದ ನಡೆಯುತ್ತಿರುವ ಪರಿಸರ ದಸರಾದ ಅಂಗವಾಗಿ ಗಿಡ ನೆಟ್ಟು ಮಾತನಾಡಿದ ಅವರು, ಮರಗಳು ಮನುಷ್ಯನಿಗೆ ನೆರಳನ್ನು ನೀಡುತ್ತದೆ. ಆದರೆ ಬದುಕಿರುವ ಮರಗಳನ್ನೇ ಮನುಷ್ಯ ಕಡಿಯುತ್ತಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.
ಸಕಲ ಜೀವರಾಶಿಗಳು ಪರಿಸರವನ್ನು ಅವಲಂಬಿಸಿದೆ. ಪರಿಸರ ಉತ್ತಮವಾಗಿರಬೇಕಾದರೆ ಮರಗಿಡಗಳು ಹೆಚ್ಚಾಗಿರಬೇಕು. ಆಗ ಮಾತ್ರ ಪರಿಸರದ ಸಮತೋಲನ ಕಾಪಾಡಲು ಸಾಧ್ಯ ಎಂದ ತಿಮ್ಮಕ್ಕ, ಮರ ಗಿಡಗಳನ್ನು ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆಸಕ್ತಿ ತೋರಿಸಬೇಕೆಂದರು.
ಮಳೆ ಉತ್ತಮವಾಗಬೇಕಾದರೆ ಮರಗಳು ಹೆಚ್ಚಾಗಿರ ಬೇಕು. ಮಳೆ ಬಂದರೆ ನಾಡು ಸುಭಿಕ್ಷವಾಗಿರುತ್ತದೆ. ದೇಶದ ಅನ್ನದಾತ ಉತ್ತಮ ಬೆಳೆಯನ್ನು ಬೆಳೆದರೆ ಎಲ್ಲ ರಿಗೂ ಆಹಾರ ದೊರಕುತ್ತದೆ. ಆದ್ದರಿಂದ ಮರಗಳನ್ನು ಹೆಚ್ಚು ಹೆಚ್ಚು ಬೆಳೆಸುವುದರಿಂದ ನಾಡಿಗೆ ಉತ್ತಮ ಮಳೆ, ಬೆಳೆಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮೇಯರ್ ಏಳುಮಲೈ ಸೇರಿದಂತೆ ಮೊದಲಾದವರಿದ್ದರು

LEAVE A REPLY

Please enter your comment!
Please enter your name here