ಸಾಗರ: ಪಟ್ಟಣದಲ್ಲಿ ವಿಪರೀತ ಮಳೆಗೆ 19ನೇ ವಾರ್ಡ್‌ನಲ್ಲಿ ಮೂರು ಮನೆಗಳು ಕುಸಿದು ಬಿದ್ದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಗಾಂಧಿನಗರದ ಹಬೀಬ್ ಸಾಬ್, ಇನಾಯತ್ ಹಾಗೂ ನಿಸಾರ್ ಎಂಬುವವರಿಗೆ ಸೇರಿದ ಮನೆಗಳ ಗೋಡೆ ಕುಸಿದು ಬಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಮನೆ ಬಿದ್ದುದ್ದರಿಂದ ಒಂದು ದ್ವಿಚಕ್ರ ವಾಹನ, ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರಿಗೆ ಏನೂ ತೊಂದರೆಯಾಗಿಲ್ಲ. ಶಾಸಕರ ಸೂಚನೆ ಮೇರೆಗೆ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ, ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.