Sunday, November 10, 2024
Google search engine
Homeಇ-ಪತ್ರಿಕೆತುರ್ತು ಪರಿಸ್ಥಿತಿ ವೇಳೆ ಆರೆಸ್ಸೆಸ್ ದೇಶವನ್ನು ರಕ್ಷಣೆ ಮಾಡಿದೆ: ಡಾ. ಕಲ್ಲಡ್ಕ ಪ್ರಭಾಕರ್ ಭಟ್

ತುರ್ತು ಪರಿಸ್ಥಿತಿ ವೇಳೆ ಆರೆಸ್ಸೆಸ್ ದೇಶವನ್ನು ರಕ್ಷಣೆ ಮಾಡಿದೆ: ಡಾ. ಕಲ್ಲಡ್ಕ ಪ್ರಭಾಕರ್ ಭಟ್

ಶಿವಮೊಗ್ಗ : ತುರ್ತು ಪರಿಸ್ಥಿತಿ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘ ದೇಶವನ್ನು ರಕ್ಷಣೆ ಮಾಡಿತು ಎಂದು ಹಲವು ಸಾಹಿತಿಗಳೇ ಹೇಳಿದ್ದಾರೆ. ಅದು ಸತ್ಯ ಕೂಡ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.

ನಗರದ ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ವತಿಯಿಂದ ಬಂಟರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ತುರ್ತು ಪರಿಸ್ಥಿತಿ ಸಂವಿಧಾನದ ಆಶಯಕ್ಕೆ ಅಪಚಾರ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಪ್ರಧಾನಿಯಾಗಿ ನೆಹರು ಆಯ್ಕೆ ತಪ್ಪು ನಿರ್ಧಾರ ಆಗಿತ್ತು. ಅವರಿಗೆ ಭಾರತದ ಧರ್ಮ, ಸಂಸ್ಕೃತಿ ಗೊತ್ತಿರಲಿಲ್ಲ. ಚೀನೀ ಭಾಯಿ ಅಂತ ಚೀನಾಕ್ಕೆ ೪೫ ಸಾವಿರ ಚ.ಕಿ. ಹಾಗೂ ಪಾಕ್ಗೆ ಆಕ್ರಮಿತ ಕಾಶ್ಮೀರ ಪ್ರದೇಶ ಬಿಟ್ಟುಕೊಟ್ಟಿz ಅವರ ಸಾಧನೆ ಎಂದರು.

ಇಂದಿರಾ ಗಾಂಢಿ ಮದುವೆ ಆಗಿದ್ದು ಫಿರೋಜ್ ಖಾನ್ ಅವರನ್ನು. ಅವರು ಗಾಂಢಿ ಕುಟುಂಬಕ್ಕೆ ಸೇರಿದವರೂ ಅಲ್ಲ, ವಂಶಸ್ಥರೂ ಅಲ್ಲ. ಆದರೂ ಮುಗ್ಧ ಜನ ಗಾಂಧಿ ಕುಟುಂಬಕ್ಕೆ ಸೇರಿದವರು ಎಂದು ನಂಬಿದ್ದರು.

ಕೇವಲ ಒಂದು ರೈಲು ಅಪಘಾತಕ್ಕೆ ಆಗಿನ ರೈಲ್ವೆ ಸಚಿವರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರು. ಆದರೆ ಹೈಕೋರ್ಟ್ನಲ್ಲಿ ಇಂದಿರಾ ಗಾಂಧಿ ವಿರುದ್ಧ ತೀರ್ಪು ಬಂದಿತ್ತು. ಇವರು ರಾಜೀನಾಮೆ ಬದಲು ಅಧಿಕಾರ ಉಳಿಸಿಕೊಳ್ಳಲು ಮುಂದಾದರು. ಆಗಿನ ಕಾನೂನು ಮಂತ್ರಿ ಎಸ್.ಎಸ್. ರೈ ಆಂತರಿಕ ತುರ್ತು ಪರಿಸ್ಥಿತಿ ಹೇರಲು ಸಲಹೆ ನೀಡಿದರು. ಆಗಿನ ರಬ್ಬರ್ ಸ್ಟಾಂಪ್ ರಾಷ್ಟ್ರಪತಿ ಅದನ್ನು ಜಾರಿ ಮಾಡಿದರು. ಇಡೀ ದೇಶದಲ್ಲಿ ೫೬೭ ಜನರನ್ನು ಮೂರ್ನಾಲ್ಕು ಗಂಟೆಯಲ್ಲಿ ಬಂಧಿಸಿದರು. ಇಂದಿರಾ ಗಾಂಧಿ ವಿರೋಧಿ ನಾಯಕರನ್ನು ಬಂಧಿಸಲಾಯಿತು ಎಂದರು.

ಪ್ರೊ. ರಾಚಪ್ಪ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ಮಾಜಿ ಸಚಿವ ವೈ.ಎ. ನಾರಾಯಣ ಸ್ವಾಮಿ, ಗದಗ್ ಗ್ರಾಮೀಣ ಅಭಿವೃದ್ಧಿ ವಿವಿ ನಿವೃತ್ತ ಕುಲಪತಿ ಪ್ರೊ. ವಿಷ್ಣುಕಾಂತ್, ಬಿಜೆಪಿ ಎಸ್ಟಿ ಮೋರ್ಚಾ ಅಧಕ್ಷ ರಾಮು ನಾಯ್ಕ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments