ಸೊರಬ: ಗ್ಯಾರೆಂಟಿ ಯೋಜನೆಗೋಸ್ಕರ ಏಕ ಪಕ್ಷಿಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಿಸುವುದರ ಮೂಲಕ ನಾಗರೀಕರ ಬದುಕಿಗೆ ದೊಡ್ಡ ಹೊಡೆತ ಆಗಿದೆ ಎಂದು ಬಿಜೆಪಿ ಮಂಡಲದ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ತಿಳಿಸಿದರು.
ರಾಜ್ಯ ಬಿಜೆಪಿ ಘಟಕದ ವತಿಯಿಂದ ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಮಂಡಳದ ವತಿಯಿಂದ ನಡೆದ ರಸ್ತೆ ತಡೆ ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಗ್ಯಾರೆಂಟಿ ಯೋಜನೆಗಳ ಮೂಲಕ ಅನುಕೂಲದೆ ಎಂದು ಹೇಳಿ ಸಾಮಾನ್ಯ ಜನರ ಬದುಕಿನ ಜೊತೆ ಬೆಲೆ ಏರಿಕೆ ಮಾಡುವುದರ ಮೂಲಕ ಜನಸಾಮಾನ್ಯರಿಗೆ ಅನ್ಯಾಯವೆಸಗಿದೆ ಎಂದರು.
ಬಿಜೆಪಿ ಹಿಂದುಳಿದ ವರ್ಗದವರ ವಿರೋಧಿ ಎಂದು ಮುಷ್ಕರ ಮಾಡಿದ್ದೀರಿ, ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಿಸಿ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ನೀವೇ ನಿಜವಾದ ಹಿಂದುಳಿದ ವರ್ಗದವರ ವಿರೋಧಿಯಾಗಿದ್ದೀರಿ, ನುಡಿದಂತೆ ನಡೆಯದೆ ದುರಹಂಕಾರದ ಮಾತುಗಳನ್ನಾಡುತ್ತೀರಿ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಡಸೂರ, ಪ್ರಕಾಶ್ ಅಗಸನಹಳ್ಳಿ, ದೇವೇಂದ್ರಪ್ಪ ಚನ್ನಾಪುರ, ವಿನಾಯಕಪ್ಪ ತವನಂದಿ, ರಾಜು ಮಾಮಳ್ಳಿಕೊಪ್ಪ, ಅಶೋಕ್ ಸೇಟ್, ಕೇಶವ್ ಪಾಟ್ಕರ್, ಆಶಿಕ್ ನಾಗಪ್ಪ, ಕನಕದಾಸ ಕಲ್ಲಂಬಿ, ಮಲ್ಲಿಕಾರ್ಜುನ್ ವೃತ್ತಿಕೊಪ್ಪ, ಕೃಷ್ಣಮೂರ್ತಿ ಕೊಡಕಣೆ ಕೆ.ಜಿ. ಬಸುರಾಜ್ ಕೊಡಕಣಿ, ಚನ್ನಬಸವ, ಗೌರಮ್ಮ ಭಂಡಾರಿ ಇದ್ದರು.