ಶಿವಮೊಗ್ಗ: ವಿಧ್ಯಾರ್ಥಿಗಳು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಿ ಮತ್ತು ನಿಮ್ಮ ಪೋಷಕರು ಹಾಗೂ ಪರಿಚಯದವರಿಗೂ ಕೂಡ ರಸ್ತೆ ಸುರಕ್ಷತೆಗಳ ಬಗ್ಗೆ ತಿಳುವಳಿಕೆ ನೀಡಿ ಎಂದು ಪಿಎಸ್ಐ ಶ್ರೀ ರಂಗನಾಥ್ ಅಂತರಘಟ್ಟಿ ಅವರು ಸಲಹೆ ನೀಡಿದರು.
ಇಂದು ಆಗುಂಬೆ ಠಾಣಾ ವ್ಯಾಪ್ತಿಯ ಕಡತೂರು ಪ್ರೌಢಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನೀವು ಶಾಲೆಗೆ ಬರುವ ಸಮಯದಲ್ಲಿ ಮತ್ತು ಶಾಲೆಯಿಂದ ಹೋಗುವ ವೇಳೆ ರಸ್ತೆಯ ಎರಡೂ ಬದಿಯಲ್ಲಿ ನೋಡಿ ವಾಹನಗಳು ಇಲ್ಲೆದೇ ಇರುವುದನ್ನು ಖಾತರಿ ಪಡಿಸಿಕೊಂಡು ನಂತರವೇ ರಸ್ತೆ ದಾಟಿ, ಯಾವುದೇ ಗಡಿಬಿಡಿಯಿಂದ ರಸ್ತೆ ದಾಟುವುದು ಬೇಡ ಎಂದರು.
ಪೋಕ್ಸೋ ಕಾಯ್ದೆ, ಬಾಲ ವಿವಾಹ ನಿಷೇದ ಕಾಯ್ದೆ, ಬಾಲಕಾರ್ಮಿಕ ನಿಷೇದ ಕಾಯ್ದೆಗಳ ಮಾಹಿತಿ ನೀಡಿದ್ದು, ಯಾವುದೇ ತುರ್ತು ಸಂದರ್ಭದಲ್ಲಿ 112 ತುರ್ತು ಸಹಾಯವಾಣಿ ಅಥವಾ ಪೊಲೀಸ್ ಇಲಾಖೆಗೆ ಸಂಪರ್ಕಿಸಿ ಎಂದು ಸೂಚಿಸಿದರು.
ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ ಫೊನ್ ಬಳಸುವಾಗ ಎಚ್ಚರಿಕೆಯಿಂದ ಬಳಕೆ ಮಾಡಿ, ಯಾರೇ ಆಗಲಿ ಫೋನ್ ಮುಖಾಂತರ OTP, ATM PIN ನಂಬರ್, CVV ನಂಬರ್ ಕೇಳಿದಾಗ ನೀಡಬೇಡಿ, ಒಂದು ವೇಳೆ ನೀವು ಈ ಎಲ್ಲಾ ಮಾಹಿತಿಗಳನ್ನು ನೀಡಿದಾಗ ಸೈಬರ್ ವಂಚಕರು ನಿಮ್ಮನ್ನು ಮೋಸದ ಬಲೆಗೆ ಸುಲಭವಾಗಿ ಸೆಳೆಯುತ್ತಾರೆಂದು ತಿಳಿಸಿದರು. ಈ ಸಂದರ್ಭದಲ್ಲಿ, ಶ್ರೀ ಮಾರುತಿ, ಮುಖ್ಯೋಪಾಧ್ಯಾಯರು, ಕಡತೂರು ಪ್ರೌಢ ಶಾಲೆ, ಶಿಕ್ಷಕರು, ಮತ್ತು ವಿಧ್ಯಾರ್ಥಿಗಳು ಹಾಗೂ ಆಗುಂಬೆ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.