Sunday, September 8, 2024
Google search engine
Homeಅಂಕಣಗಳುಲೇಖನಗಳು೬೯೧೫೮ ರೈತರಿಗೆ ಸಾಲ ಮನ್ನಾ ಭಾಗ್ಯ : ಡಾ. ಆರ್.ಎಂ.ಮಂಜುನಾಥಗೌಡ

೬೯೧೫೮ ರೈತರಿಗೆ ಸಾಲ ಮನ್ನಾ ಭಾಗ್ಯ : ಡಾ. ಆರ್.ಎಂ.ಮಂಜುನಾಥಗೌಡ

ಶಿವಮೊಗ್ಗ : ರಾಜ್ಯ ಸರ್ಕಾರ ೫೦ ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದ್ದು, ಇದರಿಂದಾಗಿ ಜಿಲ್ಲೆಯ ೬೯೧೫೮ ರೈತರಿಗೆ ಇದರ ಪ್ರಯೋಜನವಾಗಲಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥಗೌಡ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಜಿಲ್ಲೆಯಲ್ಲಿ ೨೬೦.೭೫ ಕೋಟಿ ರೂ. ಸಾಲ ಮನ್ನಾವಾಗಲಿದ್ದು, ಕಳೆದ ಜೂನ್ ೨೦ರವರೆಗೆ ಜಿಲ್ಲೆಯ ಒಟ್ಟು ೧೬೨ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ೩೧೧.೬೨ ಕೋಟಿ ಅಲ್ಪಾವಧಿ ಬೆಳೆ ಸಾಲ ವಿತರಿಸಲಾಗಿದೆ ಎಂದ ಅವರು, ಸಹಕಾರ ಸಂಘಗಳು ತಮ್ಮ ಸ್ವಂತ ಬಂಡವಾಳದಿಂದ ಸುಮಾರು ೩೯.೫೦ ಕೋಟಿ ಸಾಲ ಸೌಲಭ್ಯ ಒದಗಿಸಿದ್ದು, ಜಿಲ್ಲೆಯಲ್ಲಿ ಒಟ್ಟು ೩೫೧.೧೨ ಕೋಟಿ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಅಲ್ಪಾವಧಿ ಬೆಳೆ ಸಾಲದಲ್ಲಿ ಶೇ. ೯೬ರಷ್ಟು ಸಾಲ ಮರುಪಾವತಿಯಾಗಿದೆ. ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿದ ರೈತರಿಗೆ ಪುನಃ ಸಾಲ ಒದಗಿಸಲಾಗಿದೆ ಎಂದ ಅವರು, ಸುಮಾರು ೧೦೦ ಕೋಟಿ ಸಾಲ ಮಂಜೂರಾಗಿದ್ದು, ಪ್ರಸಕ್ತ ಸಾಲಿನಲ್ಲಿ ೫೨೮೫ ರೈತರಿಗೆ ೩೪.೪೧ ಕೋಟಿ ರೂ. ಸಾಲ ಒದಗಿಸಲಾಗಿದೆ ಎಂದರು.
ಜು.೧ರಿಂದ ಜಾರಿಗೆ ಬರುವಂತೆ ಸಂಪೂಣ್ ನಗದುರಹಿತ ವಹಿವಾಟನ್ನು ನಡೆಸಲು ಸಹಕಾರಿ ಬ್ಯಾಂಕ್ ಮುಂದಾಗಿದ್ದು, ರೈತರಿಗೆ ಸರ್ಕಾರದ ವಿವಿಧ ಯೋಜನೆಯಲ್ಲಿ ಬ್ಯಾಂಕಿನೊಂದಿಗೆ ವ್ಯವಹರಿಸಲು ರೂಪೇ ಕಾರ್ಡ್ ವಿತರಿಸಲಾಗುತ್ತಿದೆ. ೭೦ ಸಾವಿರ ಜನರಿಗೆ ಈ ಕಾರ್ಡ್‌ನ್ನು ನೀಡಲಾಗುತ್ತಿದೆ ಎಂದರು.
ಸಹಕಾರಿ ಬ್ಯಾಂಕಿನ ಎಲ್ಲಾ ಖಾತೆದಾರರಿಗೆ ೨ ಲಕ್ಷ ಎಟಿಎಂ ಕಾರ್ಡ್‌ನ್ನು ವಿತರಿಸಲಾಗುತ್ತಿದೆ ಎಂದ ಅವರು, ರೂಪೇ ಕಾರ್ಡ್‌ನ್ನು ಆರಂಭ ದಲ್ಲಿ ಒಂದು ಸಾವಿರ ಜನ ವ್ಯವಹರಿಸುವವರೆಗೆ ಎಸ್‌ಬಿಐ, ಆಕ್ಸಿಸ್, ಡಿಸಿಸಿ ಬ್ಯಾಂಕ್, ಐಸಿಐಸಿ ಬ್ಯಾಂಕ್‌ಗಳಲ್ಲಿ ಮಾತ್ರ ಅವಕಾಶ ಕಲ್ಪಿಸ ಲಾಗಿದೆ. ನಂತರ ಎಲ್ಲಾ ಬ್ಯಾಂಕ್‌ಗಳಲ್ಲಿ ಇದನ್ನು ಉಪಯೋಗಿಸಬಹುದಾಗಿದೆ ಎಂದರು.
ಜಿಲ್ಲೆಯಲ್ಲಿ ೯೭೭೯ ಸ್ವಸಹಾಯ ಗುಂಪುಗಳಿದ್ದು, ಈ ಪೈಕಿ ೩೦೭೪ ಸ್ವಸಹಾಯ ಗುಂಪುಗಳಿಗೆ ಒಟ್ಟು ೬೪.೬೧ ಕೋಟಿ ಸಾಲ ಸೌಲಭ್ಯ ಒದಗಿಸಲಾಗಿದೆ. ಸ್ವಸಹಾಯ ಗುಂಪುಗಳು ಬ್ಯಾಂಕಿನಿಂದ ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದು, ಇದರಲ್ಲಿ ಶೇ. ೯೯ರಷ್ಟು ಸಾಲ ಮರುಪಾವತಿಯಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ತಳ್ಳೀಕಟ್ಟೆ ಮಂಜುನಾಥ್, ಯೋಗೀಶ್ ಮೊದಲಾದವರಿದ್ದರು.

RELATED ARTICLES
- Advertisment -
Google search engine

Most Popular

Recent Comments